Vyaya Samvatsara Yugadi Wishes | ವ್ಯಯ ಸಂವತ್ಸರ ಯುಗಾದಿ ಶುಭಹಾರೈಕೆ

ವ್ಯಯವೆಂಬ ಹೆಸರು ಹೊತ್ತು ಬಂದಿದೆ ಯುಗಾದಿ ಈ ವರುಷ,
ವ್ಯಯದ ಮಹತ್ವ ಸರಿಯಾಗಿ ಅರಿತರೆ ಇರುವುದು ಹರುಷ

ಸರಿಯಿರಲಿ ಈ ವರುಷದ ನಿಮ್ಮ ಆಯವ್ಯಯ,
ಆಗದಿರಲಿ ಸುಖ ಶಾಂತಿಗೆ ಎಂದೂ ವ್ಯಯ

ವ್ಯಯಿಸಿರಿ ನಿಮ್ಮ ಶಕ್ತಿಯನ್ನು, ಜ್ಞಾನವನ್ನು
ಪಡೆಯಿರಿ ಸಕಲ ಸೌಭಾಗ್ಯವನ್ನು

ಕಳೆಯಬೇಡಿ ವ್ಯರ್ಥವಾಗಿ ನಿಸರ್ಗದ ಶಕ್ತಿಯನ್ನು,
ಕಳೆಯಬೇಡಿ ಸ್ನೇಹ, ಸಂಬಂಧದ ಸಂಕೋಲೆಯನ್ನು

ಹಿತ ಮಿತ ಬಳಕೆಯ ಅರಿವು ಮೂಡಿಸಲು ಬಂದಿದೆ ವ್ಯಯ ನಾಮ ಸಂವತ್ಸರ,
ಅದನ್ನರಿತು ಬಾಳಿರಿ, ಪಡಬೇಡಿ ಎಂದಿಗೂ ಅವಸರ

ಸಹಜ ಉಗಮವಿದೆ ಜೀವಸಂಕುಲಕೆ
ಸ್ವಂತ ಶ್ರಮದಿ ಏಳಿಗೆಯಿದೆ ಮನುಕುಲಕೆ
ಸಿಹಿ ಕಹಿ ನೆನಪುಗಳ ಬುನಾದಿಯ ಮೇಲೆ
ಕಟ್ಟಬೇಕಾಗಿದೆ ನಮ್ಮ ಜೀವನದ ನೌಕಾನೆಲೆ
ಯುಗಾದಿ ಯುಗದ ಆದಿಯಾಗಿದೆ ಸಕಲ ಜೀವರಾಶಿಗೆ
ನಮಗೆ ಮಾತ್ರ ಆದಿ ಅಂತ್ಯವಿಲ್ಲದ ನಿರಂತರ ಪಯಣವಾಗಿದೆ.
***
ಕಲ್ಪನೆಯ ತಳಹದಿಯ ಮೇಲೆ
ಕನಸುಗಳ ಕಟ್ಟಿ
ಕನಸುಗಳ ಭ್ರಮೆಯಲ್ಲಿ
ಮನಸ್ಸು ಕೆಟ್ಟಿ
ವಾಸ್ತವವು ಹಾಳಾಗದಿರಲಿ

-ಮಲೆನಾಡಿಗ

Leave a Reply

Your email address will not be published. Required fields are marked *