ಮರೆತುಬಿಡು ನನ್ನ…| Forget Me -Kannada Poem

ಮರೆತುಬಿಡು ಮರೆತುಬಿಡು ಮರೆತು ಬಿಡು ನನ್ನ
ನಿನ್ನೊಲುಮೆಯ ಸುಳಿಗೆ ಸಿಲುಕಿಸಿ ಹಿಂಡಬೇಡ ಜೀವವನ್ನ
ತೊರೆದುಬಿಡು ತೊರೆದುಬಿಡು ತೊರೆದುಬಿಡು ಎಲ್ಲವನ್ನ
ಸಂಭಾಳಿಸು ಕಷ್ಟದಿ ಬೇಯುತ್ತಿರುವ ನಿನ್ನ ಮನಸ್ಸನ್ನ

ನಾನ್ಯಾರೆಂದು ನಿನಗೆ ತಿಳಿದಿಲ್ಲ, ನೀನ್ಯಾರೆಂದು ನಾ ಅರಿತಿಲ್ಲ
ಆದರೂ ಒಂದಾದೆವು ಹರುಷದಿ ಯಾವ ಅಂಕೆಗೂ ಸಿಲುಕದೆ
ಬಾಳನೌಕೆಯು ಪಯಣಿಸುವ ಹಾದಿಗೆ ಸುಳಿ ಸಿಕ್ಕಹಾಗೆ
ವಿರಸ ಮೂಡಿತು ನಮ್ಮಲ್ಲಿ ನಮ್ಮನ್ನು ನಾವು ಅರಿಯುವ ಮುನ್ನ

ಉಸಿರು | The breath-Kannada short story

ಬಯಕೆಯ ತೋಟದಿ ಅಲೆದ ನಿನ್ನ ಅರಿಯದಾದೆ
ನನ್ನ ಸರಿ ಇಂಗಿತವ ತಿಳಿಯದೆ ನೀನೂ ದೂರಾದೆ
ಮನದಿ ನಡೆದ ಜಂಜಾಟವ ಬಿಡಿಸಿ ಹೇಳಲಿಲ್ಲ
ಅವರಿವರ ಮಾತುಗಳನ್ನೇ ನಿಜವೆಂದು ನಂಬಿದೆಯಲ್ಲಾ

ಬಾಳ ಆಗಸದಿ ಮೂಡಿದ ಕಾರ್ಮೋಡ ತಿಳಿಯಾಗಲಿ
ಹಳೇ ನೀರು ಹೋಗಿ ಹೊಸ ನೀರು ಹರಿದು ಬರಲಿ
ಮನಸ್ಸಿನ ದುಗುಡದ ಬೇಗೆ ತೀರಿಹೋಗಲಿ
ಒಲುಮೆಯ ಹೊಸ ಕಾವ್ಯದ ರಚನೆಯಾಗಲಿ
ದಿನಾಂಕ:೩೧/೭/೨೦೦೬, ಸಮಯ:ರಾತ್ರಿ ೧೨:೧೧

Leave a Reply

Your email address will not be published. Required fields are marked *