ಬಾಳ ಕಡಲಲಿ ಒಂಟಿ ಪಯಣಿಗ ನಾನು
ನಿನ್ನ ನೆನಪು ನನ್ನೊಂದಿಗಿರೆ ಸಾಕು
ನಿನ್ನ ಕಣ್ಣ ಬೆಳಕಿನಲ್ಲಿ ಹಾದಿ ಕಾಣುತ್ತ…
ನಿನ್ನ ಉಸಿರ ಗಾಳಿಗೆ ತೇಲುತ್ತಾ… ಮುಳುಗುತ್ತಾ…
ಕಡಲ ಮೊರೆತಕ್ಕೆ ಕಿವಿ ಒಡ್ಡುತ್ತಾ…
ಜಲಚರದಂತೆ ವಿಹರಿಸುವೆ..ನಾನು
ದೂರ ತೀರವ ಸೇರುವ ತವಕ
ಬಿಡದೆ ಕಾಡುವುದು ನಿನ್ನ ಸೇರುವ ತನಕ
ಸಾಕು ಈ ನರಕ ಯಾತನೆ
ಸೇರು ಬಾ ನಿನಗೆ ನಾನೊಬ್ಬನೆ
ನಿನ್ನ ಸೇರುವ ಆಸೆ ಆಗದಿರಲಿ ನಿರಾಸೆ
ವಿರಹದಲಿ ಬಳಲಿಹೆನು, ಸನಿಹವನು ಬೇಡುವೆನು
ಉಸಿರು | The breath-Kannada short story
ಪ್ರೇಮ ಪಯಣದಿ ತೊಡಕುಗಳು ನೂರೆಂಟು
ಆದರೂ ನಿನ್ನ ಸೇರುವ ನಂಬಿಕೆ ನನಗುಂಟು
ನೀ ನನ್ನವಳೆಂಬ ನಂಬಿಕೆ ನನಗಿದೆ.
ನಾ ನಿನ್ನವನೆಂಬುದ ನೀ ಅರಿಯಬೇಕಾಗಿದೆ
ನಿನ್ನ ಒಲವಧಾರೆ ಹರಿಯಲಿ ನದಿಯಂತೆ
ಸೇರಲಿ ನನ್ನ ಪ್ರೀತಿ ಕಡಲ, ತಣಿಸಲಿ ವಿರಹದಿ ಬೆಂದ ನನ್ನ ಒಡಲ.
-ದಿನಾಂಕ-೨೫/೧೨/೦೬- ಸಮಯ:೯ ರಿಂದ ೧೦:೩೦
