Kannada Poem: A Love Song Inspiration | ಕನ್ನಡ ಕವನ: ಒಲುಮೆಯ ಹಾಡು

no image
ಬರೆಯಲಾರೆ ನಾ ಏನನ್ನೂ ಎಂದೆನಿಸಿತು, ನೀನು ನನ್ನ ತೊರೆದ ಕ್ಷಣ
ದಿನವೂ ಅಣಕಿಸುತಿತ್ತು, ಖಾಲಿ ಹಾಳೆಯ ನೋಡಿದಾಗಲೆಲ್ಲಾ ನನ್ನ ಮನ

ಮನದ ಮೇಲೆ ಹಿಡಿತ ಸಾಧಿಸಿ ಅಂತೂ ಬರೆಯ ಕುಳಿತೆ.
ವಿಸ್ತಾರವಾದ ನಿನ್ನ ನೆನಪಿನಾಳಕ್ಕೆ ಇಳಿದು ನನ್ನೇ ನಾ ಮರೆತೆ

ನೆನಪಿನದೋಣಿಯಲ್ಲಿ ಕೂರಿಸಿ ಭಾವನೆಯ ಅಲೆಯ ಮೇಲೆ ತೇಲಿಸಿದೆ
ಕರೆದೊಯ್ದೆ ನನ್ನ ಒಲವಿನ ದ್ವೀಪದೆಡೆಗೆ
ಯಾರಿದ್ದರಲ್ಲಿ ನನ್ನ ನಿನ್ನ ಬಿಟ್ಟು ಆ ಸುಂದರ ಪ್ರಕೃತಿಯಲ್ಲಿ
ಸಮಯದ ಪರಿವೆ ಇಲ್ಲದ ಹಾಗೆ ಸುತ್ತುವುದ ಕಲಿಸಿದೆ

ಹೊತ್ತು ಮುಳುಗಿತು, ಬಾನು ಬೆಳಗಿತು ಚುಕ್ಕಿಗಳ ಚಿತ್ತಾರದಿಂದ
ಮುಂಜಾನೆಯ ಸೂರ್ಯನ ಬೆಳ್ಳಿಕಿರಣಗಳು ಕಣ್ಣು ಚುಚ್ಚುವವರೆಗೂ
ವಿರಮಿಸಿದೆ ನಿನ್ನ ತೆಕ್ಕೆಯಲ್ಲಿ ಅಂದು ನಾ ನಲಿವಿನಿಂದ
ನೀ ದೂರಾದರೂ ನನ್ನ ಕರ್ಣದಿ ರಿಂಗಿಸುತ್ತಿತ್ತು ನಿನ್ನೊಲುಮೆಯ ಹಾಡು

Leave a Reply

Your email address will not be published. Required fields are marked *