ಕವನ: ಕನಸು ಕಾಣಬೇಕು | Kannada poem on dream

ಕನಸೆ ನನ್ನ ಕರೆದೊಯ್ಯಿ
ಎಂದಿನಂತೆ ನಿನ್ನ ಊರಿಗೆ

ಬೆಳದಿಂಗಳಿರಲಿ ಕದ್ದಿಂಗಳಿರಲಿ
ನಿನ್ನ ಆಸರೆ ನನಗಿರಲಿ
ಜೋಗದ ಜಲಧಾರೆಯಂತೆ ಸುರಿಯುತ್ತಿರು
ಮಲೆನಾಡಿನ ಕಾನನದಲ್ಲಿನ ತಂಪು ನೀಡುತ್ತಿರು

ಮಿನಿ ಕಥೆ: ಉಸಿರು | The breath-Kannada short story

ಎಲ್ಲ ಹೇಳುವರು ನಿನ್ನ ಕಾಣಲು ಕಲ್ಪನೆಯೆ ಮೂಲವೆಂದು
ನಾ ಹೇಳುವೆ ಕಲ್ಪನೆಗೆ ನೀನೆ ಮೂಲ ಎಂದು

ನಾ ಕಾಣದ ಆನಂದ ನೀ ತಂದೆ
ನನ್ನೆಲ್ಲ ಆಸೆಗಳನು ನಿನ್ನಿಂದ ನಾ ಕಂಡೆ

ನೀ ಬಾರದೆ ಸೊಂಪಾಗಿ ನಿದ್ರೆ ಬಾರದು
ಹಗಲು ನಿನ್ನ ಕಾಣದೆ ಉತ್ಸಾಹವೇ ಇರದು.
ನಿನ್ನ ಒಡನಾಟ ಹೀಗೆ ಇರಲಿ ಅನುದಿನ
ಮನಸ್ಸಿನಲಿ ಸದಾ ಮೂಡುತ್ತಿರಲಿ ತನನನನಾ…

Leave a Reply

Your email address will not be published. Required fields are marked *