ಕೇರಳ ಕಡೆಯಿಂದ ಕರ್ನಾಟಕ ಪ್ರವೇಶಿಸಬೇಕಿದ್ದ ನೈಋತ್ಯ ಮಳೆ ಮಾರುತಗಳು ವಿಳಂಬವಾಗುವುದು ಸ್ಪಷ್ಟವಾಗಿದೆ, ಮೇ ೨೬ಕ್ಕೆ ಬರಬೇಕಿದ್ದ ಮುಂಗಾರು ಮಳೆ ಜೂನ್ ಮೊದಲ ವಾರಂತ್ಯಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ. ಆದರೆ, ಎಲ್- ನಿನೋ (El Nino) ಪರಿಣಾಮದಿಂದ ಮುಂಗಾರು ಕ್ಷೀಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಕಳೆದ 11 ವರ್ಷಗಳಲ್ಲೇ ಕಾಣದಂಥ ಬರಗಾಲದ ಭೀತಿಯನ್ನು ದೇಶ ಇದೀಗ ಎದುರಿಸಬೇಕಿದೆ. ಈ ಬಾರಿ ಮುಂಗಾರು ದುರ್ಬಲವಾಗುವ ಆತಂಕ ಎದುರಾಗಿದ್ದು, ಕರ್ನಾಟಕದಲ್ಲಿ ಕಾವೇರಿ ಕೊಳ್ಳದ ಅಣೆಕಟ್ಟುಗಳಿಗೆ ಮಳೆಗಾಲದಲ್ಲಿ ಸಾಕಷ್ಟು ನೀರು ತುಂಬದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಜೊತೆಗೆ ರೈತರಿಗೆ ಕಷ್ಟದ ದಿನಗಳು ಎದುರಾಗಲಿದೆ.
ಮುಖ್ಯವಾಗಿ ಬೆಂಗಳೂರು ಹಾಗೂ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಆಸರೆಯಾಗಿರುವ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಮುಂದೇನು? ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಕಂಡು ಬರುತ್ತಿಲ್ಲ. ಈ ವಿಡಿಯೋದಲ್ಲಿ ಎಲ್ ನಿನೋ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾ, ಹವಾಮಾನ ಇಲಾಖೆ ಕೊಟ್ಟಿರುವ ಎಚ್ಚರಿಕೆ, ಮುಂಗಾರು ಮಳೆ ವಿಳಂಬದ ಮುಖ್ಯ ಕಾರಣವನ್ನು ವಿವರಿಸಲಾಗಿದೆ.