Video: Karnataka MLA to CM Salary After 100% Hike, A Complete Breakdown | ಕರ್ನಾಟಕ ಶಾಸಕ-ಜನಪ್ರತಿನಿಧಿ-ಮುಖ್ಯಮಂತ್ರಿಗಳ ಸಂಬಳ ಸಂಪೂರ್ಣ ವಿವರ

ಜನಪ್ರತಿನಿಧಿಗಳಾದ ಶಾಸಕರು, ಮುಖ್ಯಮಂತ್ರಿಗಳಿಗೂ ತಿಂಗಳಿಗೆ ಕೈ ತುಂಬಾ ಸಂಬಳದ ಜೊತೆಗೆ ಭತ್ಯೆ ಕೂಡಾ ದೊರೆಯುತ್ತದೆ. ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025ಗೆ ಸರ್ವಾನುಮತದಿಂದ ಅಂಗೀಕಾರವಾಗಿ ವರ್ಷ ಕಳೆದಿದೆ. ಜನಪ್ರತಿನಿಧಿಗಳ, ಸಂಬಳ, ಭತ್ಯೆ ಕೂಡಾ ಹೆಚ್ಚಳವಾಗಿದೆ. ಶಾಸಕರು(ಎಂಎಲ್ಎ ಹಾಗೂ ಎಂಎಲ್‌ಸಿ), ವಿರೋಧಸಭಾ ಅಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಮಾಜಿ ಶಾಸಕರಿಗೂ ಸಕಲ ಸೌಲಭ್ಯಗಳು ಸಿಗುತ್ತವೆ.

ಎಂಎಲ್ಎ ಹಾಗೂ ಎಂಎಲ್‌ಸಿಗಳಿಗೆ ಸಿಗುವ ಮೂಲ ವೇತನ, ಕ್ಷೇತ್ರ ಭತ್ಯೆ, ದಿನ ಭತ್ಯೆ, ಪ್ರವಾಸ ಭತ್ಯೆ, ಅವರ ಕಚೇರಿ ಪಿಎ ಹಾಗೂ ಸಿಬ್ಬಂದಿಗಳಿಗೆ ಭತ್ಯೆ, ಸರ್ಕಾರಿ ಬಂಗಲೆ ಹಾಗೂ ವಾಹನ ಸೌಲಭ್ಯ, ವಾಹನಕ್ಕೆ ಇಂಧನ, ರಿಪೇರಿ ಖರ್ಚು ವೆಚ್ಚ, ವಿಮಾನ ಹಾಗೂ ರೈಲು ಭತ್ಯೆ, ಮಾಜಿ ಶಾಸಕರಿಗೆ ಪಿಂಚಣಿ, ವೈದ್ಯಕೀಯ ಸೌಲಭ್ಯವಲ್ಲದೆ ಇನ್ನು ಅನೇಕ ಸವಲತ್ತುಗಳಿವೆ. ಇದರಲ್ಲಿ ಸಿಎಂಗೆ ಸಿಂಹಪಾಲು, ನಂತರ ಡಿಸಿಎಂ, ಕ್ಯಾಬಿನೆಟ್ ಸಚಿವ ಸಂಪುಟಕ್ಕೆ ತಕ್ಕ ಸೌಲಭ್ಯ ಸಿಗುತ್ತದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.. ನೋಡಿ

ಈ ಬಗ್ಗೆ ವಿವರ ಈ ಕೆಳಗಿನ ವಿಡಿಯೋದಲ್ಲಿದೆ:

Leave a Reply

Your email address will not be published. Required fields are marked *