ಭಾರತೀಯರಲ್ಲಿ ‘ಫೈಬರ್’ ಕೊರತೆ: ಹ್ಯಾಪಿ ಟಮ್ಮಿ
ಜೀರ್ಣಕ್ರಿಯೆ ಚೆನ್ನಾಗಿರಬೇಕಾದರೆ ನಮ್ಮ ದೇಹಕ್ಕೆ ನಾರಿನಾಂಶ ಅಂದರೆ ಫೈಬರ್ ಬಹಳ ಮುಖ್ಯ. ಆದರೆ, ಶೇ. 70ರಷ್ಟು ಭಾರತೀಯರು ನಾರಿನಾಂಶದ ಕೊರತೆ ಎದುರಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಹೊರಹಾಕಿದೆ.
ಭಾರತೀಯರ ಆಹಾರ ಪದ್ಧತಿ ಹಾಗೂ ಜೀರ್ಣಕ್ರಿಯೆಯ ಆರೋಗ್ಯದ ಕುರಿತು ಅಧ್ಯಯನ ನಡೆಸಿ , ಐಟಿಸಿಯು ‘ಆಶೀರ್ವಾದ್ ಹ್ಯಾಪಿ ಟಮ್ಮಿ’ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಈ ಆಘಾತಕಾರಿ ವಿಚಾರಗಳಿವೆ
ದೇಶದಾದ್ಯಂತ 18 ರಿಂದ 60 ವರ್ಷ ವಯಸ್ಸಿನ 6.5 ಲಕ್ಷಕ್ಕೂ ಅಧಿಕ ಜನಗಳ (2021 ರಿಂದ 2025 ರ ನಡುವೆ) ದತ್ತಾಂಶಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ‘ವಿಶ್ವ ಜೀರ್ಣಕ್ರಿಯೆ ಆರೋಗ್ಯ ದಿನ’ದ ಪ್ರಯುಕ್ತ ಇದನ್ನು ಬಿಡುಗಡೆ ಮಾಡಲಾಗಿದೆ.
ಭಾರತೀಯರಲ್ಲಿ ಎಷ್ಟಿದೆ ಫೈಬರ್ ಕೊರತೆ?
ಇಡೀ ಜಗತ್ತು ಈಗ ‘ಫೈಬರ್‌ಮ್ಯಾಕ್ಸಿಂಗ್’ (ಹೆಚ್ಚು ಫೈಬರ್ ಸೇವನೆ) ಬಗ್ಗೆ ಮಾತನಾಡುತ್ತಿದ್ದರೆ, ಭಾರತದಲ್ಲಿ ಪ್ರತಿ 10 ಜನರಲ್ಲಿ 7 ಜನರಿಗೆ (ಶೇ. 70) ಪ್ರತಿದಿನ ದೇಹಕ್ಕೆ ಅಗತ್ಯವಿರುವ ಕನಿಷ್ಠ ನಾರಿನಾಂಶವೂ ಸಿಗುತ್ತಿಲ್ಲ ಎಂದು ವರದಿ ಹೇಳಿದೆ.

ವಿಶೇಷವೆಂದರೆ, ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚಾಗಿದೆ. ಶೇ. 63 ರಷ್ಟು ಪುರುಷರು ಫೈಬರ್ ಕೊರತೆ ಎದುರಿಸುತ್ತಿದ್ದರೆ, ಶೇ. 73 ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ವಯಸ್ಕ ಮಹಿಳೆಯರಿಗೆ ದಿನಕ್ಕೆ ಕನಿಷ್ಠ 25 ಗ್ರಾಂ ಮತ್ತು ಪುರುಷರಿಗೆ 30 ಗ್ರಾಂ ಫೈಬರ್ ಅಗತ್ಯವಿದೆ.
ಈ ಸಮಸ್ಯೆಗೆ ಕಾರಣಗಳೇನು?
ತಪ್ಪಾದ ಆಹಾರ ಪದ್ಧತಿ: ಕೇವಲ 4 ಜನರಲ್ಲಿ ಒಬ್ಬರು ಮಾತ್ರ ಪ್ರತಿದಿನ ಸಿರಿಧಾನ್ಯಗಳನ್ನು ಸೇವಿಸುತ್ತಿದ್ದಾರೆ. ಇನ್ನು ಸುಮಾರು ಶೇ. 40ರಷ್ಟು ಜನರು ಹಣ್ಣುಗಳನ್ನು ತಿನ್ನುವುದೇ ಇಲ್ಲ. ತರಕಾರಿಗಳನ್ನು ತಿಂದರೂ, ದೇಹಕ್ಕೆ ಅಗತ್ಯವಿರುವಷ್ಟು ವೈವಿಧ್ಯಮಯ ಫೈಬರ್-ಭರಿತ ಆಹಾರವನ್ನು ಜನರು ಸೇವಿಸುತ್ತಿಲ್ಲ.
ತಪ್ಪಾದ ಜೀವನಶೈಲಿ: ಕೇವಲ ಆಹಾರವಷ್ಟೇ ಅಲ್ಲ, ಶೇ. 60 ರಷ್ಟು ಜನರು ಪ್ರತಿದಿನ ಯಾವುದೇ ದೈಹಿಕ ವ್ಯಾಯಾಮ ಮಾಡುತ್ತಿಲ್ಲ. ಕೇವಲ ಶೇ. 30 ರಷ್ಟು ಜನರು ಮಾತ್ರ ದಿನಕ್ಕೆ ಬೇಕಾದಷ್ಟು ನೀರು ಕುಡಿಯುತ್ತಿದ್ದಾರೆ. ಅರ್ಧದಷ್ಟು ಜನರಿಗೆ ಸರಿಯಾದ ನಿದ್ದೆಯಿಲ್ಲ ಮತ್ತು ಐದರಲ್ಲಿ ಒಬ್ಬರು ವಿಪರೀತ ಒತ್ತಡದಿಂದ ಬಳಲುತ್ತಿದ್ದಾರೆ. ಇವೆಲ್ಲವೂ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.
ಈ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿರುವ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವಿಭಾಗದ ಮುಖ್ಯಸ್ಥ ಅನುಜ್ ರುಸ್ತಗಿ, “ನಮ್ಮ ದಿನನಿತ್ಯದ ಆರೋಗ್ಯದಲ್ಲಿ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಬಹಳ ಮುಖ್ಯ. ಫೈಬರ್ ಸೇವನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಜನರು ತಮ್ಮ ದೈನಂದಿನ ಊಟದಲ್ಲಿ ಸಾಮಾನ್ಯ ಗೋಧಿ ಹಿಟ್ಟಿನ ಬದಲು ಬದಲು ‘ಆಶೀರ್ವಾದ್ ಮಲ್ಟಿಗ್ರೈನ್ ಅಟ್ಟಾ’ವನ್ನು ಬಳಸುವಂತಹ ಸಣ್ಣ ಬದಲಾವಣೆಗಳು, ಆರೋಗ್ಯದಲ್ಲಿ ದೊಡ್ಡ ಸುಧಾರಣೆ ತರಬಲ್ಲವು. ಹಣ್ಣುಗಳು, ತರಕಾರಿಗಳು ಮತ್ತು ಸಿರಿಧಾನ್ಯಗಳ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಬಹುದು,” ಎಂದು ತಿಳಿಸಿದರು.
‘ಹ್ಯಾಪಿ ಟಮ್ಮಿ, ಹ್ಯಾಪಿ ಯೂ’ ಅಭಿಯಾನ
ಜೀರ್ಣಕ್ರಿಯೆಯ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಶೀರ್ವಾದ್ ಮಲ್ಟಿಗ್ರೈನ್ ಅಟ್ಟಾ ‘ಹ್ಯಾಪಿ ಟಮ್ಮಿ, ಹ್ಯಾಪಿ ಯೂ’ ಎಂಬ ಹೊಸ ಕ್ಯಾಂಪೇನ್ ಅನ್ನು ಆರಂಭಿಸಿದೆ. ಇದರಲ್ಲಿ ಆರೋಗ್ಯ ತಜ್ಞರು ಮತ್ತು ಕ್ರಿಯೇಟರ್‌ಗಳ ಮೂಲಕ ಪಾಡ್‌ಕಾಸ್ಟ್‌ಗಳು ಹಾಗೂ ಮಾಹಿತಿಯುಕ್ತ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಗ್ರಾಹಕರು ‘ಹ್ಯಾಪಿ ಟಮ್ಮಿ’ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ಡೈಜೆಸ್ಟಿವ್ ಕೋಷಿಯಂಟ್’ (ಡಿಕ್ಯೂ) ಟೆಸ್ಟ್ ಮತ್ತು ‘ಫೈಬರ್ ಮೀಟರ್’ ಮೂಲಕ ಕೇವಲ 2 ನಿಮಿಷಗಳಲ್ಲಿ ತಮ್ಮ ಜೀರ್ಣಕ್ರಿಯೆ ಆರೋಗ್ಯ ಹಾಗೂ ಪ್ರತಿದಿನದ ಫೈಬರ್ ಅಗತ್ಯವನ್ನು ಪರೀಕ್ಷಿಸಿಕೊಳ್ಳಬಹುದು.
ಗೋಧಿ, ಓಟ್ಸ್, ಮೆಕ್ಕೆಜೋಳ, ಕಡಲೆ, ಸೋಯಾ ಮತ್ತು ಸೈಲಿಯಮ್ ಹಸ್ಕ್ (ಇಸಬ್‌ಗೋಲ್) ನಂತಹ 6 ಬಗೆಯ ಧಾನ್ಯಗಳನ್ನು ಬಳಸಿ ಆಶೀರ್ವಾದ್ ಮಲ್ಟಿಗ್ರೈನ್ ಅಟ್ಟಾವನ್ನು ತಯಾರಿಸಲಾಗುತ್ತದೆ. ಇದು ಫೈಬರ್, ಪ್ರೋಟೀನ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಈ ಹಿಟ್ಟಿನಿಂದ ತಯಾರಿಸಿದ ಕೇವಲ 3 ಚಪಾತಿ ತಿಂದರೆ, ದಿನಕ್ಕೆ ಬೇಕಾದ ಶೇ. 35ರಷ್ಟು ಫೈಬರ್ ನಮ್ಮ ದೇಹಕ್ಕೆ ಸುಲಭವಾಗಿ ಸಿಗುತ್ತದೆ.