Kannada short poem from letter ‘Na’| ಕಿರು ಕವನ ‘ನ’ ಕಾರ

ನಿನ್ನ ನಾ ನೋಡಿದೆ, ನನ್ನ ನೀ ನೋಡಿದೆ
ನಲಿಯುತ ನನ್ನ ನಯನ ನಿನ್ನ ನೋಡುತ್ತಿರಲು ನೀನ್ನಿತ್ತೆ ನಸುನಗೆ
ನಿನ್ನ ನಗುವಿನಲ್ಲಿ ನಲಿವಿರಲಿಲ್ಲ.
ನಿಟ್ಟಿಸುತ್ತಾ ನಿಂತೆ ನಿನ್ನ ನಯನವ ನೋಡುತಾ
ನರ್ತಿಸಿದವು ನಿನ್ನ ನಯನವು ನನ್ನ ನಯನದ ನೋಟವ ನೋಡಲಾಗದೆ
ನಿನ್ನ ನಗುವಿನಲ್ಲಿ ನೋವಿನ ನೆರಳ ನೋಡಿದೆ.
ನಾ ನುಡಿಯುವಷ್ಟರಲ್ಲಿ…’ನಲ್ಲ ನಿನ್ನೊಡನೆ ನಾಲ್ಕು ನಿಮಿಷ ನಾನಿರಲು ನಿಶ್ಚಿಂತಳಾಗುವೆ ನಾ
ನನ್ನ ನಿನ್ನ ನೇಹವಿಗೆ ನೆಲೆಸಲಿ ನಿರಂತರವಾಗಿ’ಯೆಂದು ನುಡಿದು
ನೋಡ ನೋಡುತ್ತಿರುವಂತೆ ನಡೆದಳು ನಿರಾಸೆಯ ನನಗಿತ್ತು

-ಮಲೆನಾಡಿಗ

Leave a Reply

Your email address will not be published. Required fields are marked *