ಕನ್ನಡ ಚಿತ್ರರಂಗದ ಶ್ರೇಷ್ಠ ಚಲನಚಿತ್ರ ಛಾಯಾಗ್ರಾಹಕ ಶಿವರಾಮಯ್ಯ ರಾಮಚಂದ್ರ ಐತಾಳ್ aka ಎಸ್ ರಾಮಚಂದ್ರ ಅವರ ಪರಿಚಯಾತ್ಮಕ ಸಾಕ್ಷ್ಯಚಿತ್ರ ಇಲ್ಲಿದೆ. ಅವಿರತ ಪ್ರತಿಷ್ಠಾನ ಪ್ರಸ್ತುತಪಡಿಸಿರುವ ಈ ವಿಡಿಯೋದಲ್ಲಿ ಖ್ಯಾತ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕರಾದ ಶ್ರೀಗಿರೀಶ್ ಕಾಸರವಳ್ಳಿ, ಶ್ರೀಪಿ ಶೇಷಾದ್ರಿ ಅವರಲ್ಲದೆ, ರಾಮಚಂದ್ರರ ಪುತ್ರಿ ಶ್ರೀಮತಿ ವರ್ಷಾ, ಶಿಷ್ಯರಾದ ಶ್ರೀಕಾಂತ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
“ಸದಭಿರುಚಿ ಚಿತ್ರಗಳ ಪ್ರದರ್ಶನ, ಸಂವಾದ, ಸಂಗೀತ ಕಾರ್ಯಕ್ರಮಗಳ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಾ ಬಂದಿರುವ ಅವಿರತ ಸಂಸ್ಥೆ, ಈ ವಿಡಿಯೋವನ್ನು ಯಾವುದೇ ವಾಣಿಜ್ಯ ಉದ್ದೇಶದಿಂದ ನಿರ್ಮಿಸಿದ್ದಲ್ಲ, ನಾಡಿನ ಶ್ರೇಷ್ಠ ಚಿತ್ರಕರ್ಮಿಯೊಬ್ಬರ ಬಗ್ಗೆ ಎಲ್ಲರಿಗೂ ತಿಳಿಸುವುದೇ ಮುಖ್ಯ ಉದ್ದೇಶ” ಎಂದು ಅವಿರತ ಪ್ರತಿಷ್ಠಾನದ ಅಧ್ಯಕ್ಷ ಕೆ.ಟಿ ಸತೀಶ್ ಗೌಡ ಅವರು ಹೇಳಿದ್ದಾರೆ.
ವಿಡಿಯೋಕ್ಕೆ ಶ್ರೀಕೆ.ಟಿ ಜಗದೀಶ್ ಅವರು ನಿರೂಪಣೆ ಮಾಡಿ, ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಸಾಕ್ಷ್ಯಚಿತ್ರದ ಪರಿಕಲ್ಪನೆ ಹಾಗೂ ಸ್ಕ್ರಿಪ್ಟ್ ಮಹೇಶ್ ಮಲ್ನಾಡ್ ಬರೆದಿದ್ದರೆ, ಛಾಯಾಗ್ರಾಹಕ ಹಾಗೂ ನಿರ್ದೇಶಕರಾಗಿ ಹರೀಶ್ ವೈ. ಆರ್ ಅವರು ಕಾರ್ಯ ನಿರ್ವಹಿಸಿದ್ದಾರೆ. ವಿಡಿಯೋದ ಯಥಾವತ್ ಪಠ್ಯರೂಪದ ಸಂಗ್ರಹ ಇಲ್ಲಿದೆ.
00:00:49
[ಹಿನ್ನೆಲೆ ಧ್ವನಿ]ಎಸ್ ರಾಮಚಂದ್ರ ಎಂದೇ ಚಿರಪರಿಚಿತರಾಗಿರುವ ಶಿವರಾಮಯ್ಯ ರಾಮಚಂದ್ರ ಐತಾಳ್ ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ಪಾತ್ರ ವಹಿಸುತ್ತಿದ್ದ ಹಿರಿಯ ಛಾಯಾಗ್ರಾಹಕ. ಹೆಸರಾಂತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಯವರ ಘಟಶ್ರಾದ್ಧ ಹಾಗೂ ಬಿವಿ ಕಾರಂತರ ಚೋಮನ ದುಡಿಯಂತಹ ಉತ್ಕೃಷ್ಟವಾದ ಕನ್ನಡ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ರಾಮಚಂದ್ರರು ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ನೀಡಿದ ಕೊಡುಗೆ ಅಮೂಲ್ಯ [ಸಂಗೀತ] ಕಲಾತ್ಮಕ ಚಿತ್ರಗಳ ಒಳನೋಟ ‘ನಿರ್ದೇಶಕರ ನಿರ್ದೇಶಕ’ ‘ವಾಸ್ತವದ ಕಣ್ಣು’ ಎಂದೆಲ್ಲ ಖ್ಯಾತರಾಗಿದ್ದ ರಾಮಚಂದ್ರರು ತಮ್ಮ ಕ್ಯಾಮೆರಾ ಚಲನೆ ಮೂಲಕ
00:01:40
ಚಿತ್ರದ ಅರ್ಥವ್ಯಾಪ್ತಿಯನ್ನು ಹಿಗ್ಗಿಸುವ ಹಾಗೂ ಚಿತ್ರಕಥೆಯ ಸಾಂದ್ರತೆಯನ್ನು ತಮ್ಮ ಫ್ರೇಮ್‌ಗಳಲ್ಲಿ ಕಟ್ಟಿಕೊಡುವ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದರು. (ಸಿನಿಮಾ ಡೈಲಾಗ್) ‘ಕುಡುಮಲ್ಗೆ ಶ್ಯಾಮ ಭಟ್ಟರು ಗೊತ್ತಲ್ಲ ಅವರ ಮಾಡಿನು ಪಾಠಶಾಲೆ ಸೇರಿಸ್ತಾರಲ್ಲ ಅದೇ ಎರಡು ತಿಂಗಳ ಹಿಂದೆ ಉಪನಯನ ಆಯ್ತಲ್ಲ ಅವನ್ನೇ ನಾಳೆ ಸೋಮವಾರ ದಿನ ಪ್ರಶಸ್ತವಾಗಿದೆ’.
ಗಿರೀಶ್ ಕಾಸರವಳ್ಳಿ ಮಾತು: [ಗಂಟಲು ಸರಿಮಾಡಿಕೊಳ್ಳುವಿಕೆ] ನಾನು ಮಾಡಿರೋ 13 ಸಿನಿಮಾಗಳಲ್ಲಿ ಏಳು ಸಿನಿಮಾಕ್ಕೆ ಎಸ್ ರಾಮಚಂದ್ರ ಛಾಯಾಗ್ರಹಣ ಅದಲ್ಲದೆ ಗೃಹಭಂಗಕ್ಕೆ ಮತ್ತು ಸುಮಾರಷ್ಟು ಕಿರು ಚಿತ್ರಗಳಿಗೆ ಅವರು ಅವರ ಜೊತೆ ಕೆಲಸ ಮಾಡಿದ್ದಾರೆ ಆ ನನಗೂ ರಾಮಚಂದ್ರ ಅವರಿಗೂ ಒಂದು ತರದಲ್ಲಿ ಹೊಂದಾಣಿಕೆ ಬಹಳ ಚೆನ್ನಾಗಿ ಆಗ್ತಾ ಇತ್ತು
00:02:34
ಯಾಕಂತಂದ್ರೆ ಒಂದು ನಾವಿಬ್ಬರು ಎಫ್‌ಟಿಐ, ಪುಣೆ ಇನ್ಸ್ಟಿಟ್ಯೂಟ್ ಬ್ಯಾಕ್ ಗ್ರೌಂಡ್ ನಿಂದ ಬಂದವರು ಹಾಗಾಗಿ ನಾನು ಏನು ನಿರೀಕ್ಷೆ ಮಾಡ್ತಾ ಇದ್ದೀನಿ ಅವರಿಗೆ ಬಹಳ ಸ್ಪಷ್ಟವಾಗಿ ಅರ್ಥ ಆಗ್ತಾ ಇತ್ತು ಅದು ಒಂದು ಕಾರಣ ಆದರೆ ಅವರು ಮೂಲತಃ ಬಹಳ ಸೂಕ್ಷ್ಮ ಗ್ರಾಹಿ ನೀವು ಹೇಳೋಕೆ ಹೊರಟ ತಕ್ಷಣ ನನಗೆ ಗೊತ್ತಾಗಿರುತ್ತೆ ಇಂಥ ಮಾತು ಹೇಳೋಕೆ ಹೊರಟ್ಟಿದ್ದಾರೆ ಅಂತ ಅಷ್ಟು ಬಹಳ ಕ್ವಿಕ್ ಆಗಿ ಗ್ರಾಸ್ಪ್ ಮಾಡ್ತಾ ಇದ್ರು ಆ ರೀತಿ ನನಗೆ ಬಹಳ ಒಂದು ಸೂಕ್ಷ್ಮ ಸಂವೇದನೀಯ ಒಬ್ಬ ಛಾಯಾಗ್ರಾಹಕ ಅಂತ ನೋಡ್ತ ಅದು ವ್ಯಕ್ತಿಯ ನೆಲೆಯಲ್ಲಿ ಅವರ ವೃತ್ತಿಯ ನೆಲೆಯಲ್ಲಿ ಅಂದರೆ ಅವರ ಇಮೇಜ್ ಏನು ಸೃಷ್ಟಿ ಮಾಡ್ತಾ ಇದ್ದಾರೆ ಅದರ ಬಗ್ಗೆ ಕೂಡ ನನಗೆ ಬಹಳ ಮೆಚ್ಚಿಗೆ ಇತ್ತು ಯಾಕೆಂತಂದ್ರೆ
00:03:15
ರಾಮಚಂದ್ರ ಅವರನ್ನ ಯಾವತ್ತೂ ಇಮೇಜ್‌ನ ಪ್ರೆಟಿಫೈ ಮಾಡೋದಕ್ಕೆ ಹೋಗ್ತಾ ಇರ್ಲಿಲ್ಲ ಗಂಗಮ್ಮ ಗಂಗಾಮಾಯಿನಲ್ಲಿ ಅವರು ಹಿಮಾಲಯದಲ್ಲಿ ಶೂಟ್ ಮಾಡಿದ್ರು ಗುಲಾಬಿ ಟಾಕೀಸ್‌ಗೆ ಸಮುದ್ರ ತೀರದಲ್ಲಿ ಚೋಮನ ದುಡಿಗೆ ಪಶ್ಚಿಮ ಘಟ್ಟದ ಸಾಲಿನಲ್ಲಿ ಆದರೆ ಎಲ್ಲೂ ಅವರು ಆ ದೃಶ್ಯವನ್ನು ಬಹಳ ಸುಂದರವಾಗಿ ಮಾಡೋದಕ್ಕೆ ಪ್ರಯತ್ನ ಪಡ್ತಾ ಇರಲಿಲ್ಲ ಐರನಿ ನೋಡಿ ಇಲ್ಲಿ ನಮ್ಮಲ್ಲಿ ತುಂಬಾ ಜನರು ಬಹಳ ಸುಂದರವಾಗಿ ಕಾಣಿಸಲಿ ಅನ್ನೋ ಕಾರಣಕ್ಕಾಗಿ ನೈನಿತಾಲಿಗೆ ಹೋಗ್ತಾರೆ ಫಾರಿನ್‌ಗೆ ಹೋಗ್ತಾರೆ ಸಮುದ್ರ ದೃಶ್ಯಗಳಿಗೆ ಹೋಗ್ತಾರೆ ಆದರೆ ರಾಮಚಂದ್ರ ಅವರು ಅಲ್ಲಿ ಕರ್ಕೊಂಡು ಹೋದಾಗ ಕೂಡ ಅವರ ಅದನ್ನ ಸುಂದರ ಅನ್ನೋತರದಲ್ಲಿ ಮಾಡ್ತಾ ಇರಲಿಲ್ಲ ಯಾಕಂತಂದ್ರೆ ಆ ತರದ ಇಮೇಜ್‌ಗಳ ಬಗ್ಗೆನೇ ಅವರಿಗೆ ಒಂದು ತರ
00:03:56
ತಾತ್ಸಾರ ಇತ್ತು ಯಾಕಂತಂದ್ರೆ ಅದು ವಸ್ತುವಿನಿಂದ ಪ್ರೇಕ್ಷಕನ ಮನಸ್ಸನ್ನು ಇನ್ನೆಲ್ಲಿಗೋ ತಗೊಂಡು ಹೋಗುತ್ತೆ ಹಾಗಾಗಿ ಅವರ ಗಮನ ಎಲ್ಲ ಇದ್ದಿದ್ದು ವಸ್ತುವಿಗೆ ಅನುಗುಣವಾದಂತಹ ಒಂದು ಛಾಯಾಚಿತ್ರವನ್ನ ಅಳವಡಿಸುದರಲ್ಲಿ ಅವರು ಇಮೇಜ್ ಒಂದೇನೋ ಒಂದು ಸ್ಥಳಕ್ಕೆ ಲೊಕೇಶನ್‌ಗೆ ಹೋಗ್ತೀವಿ ಅಂತ ಇಟ್ಕೊಳ್ಳಿ ಸಾಮಾನ್ಯವಾಗಿ ನಾವು ಲೊಕೇಶನ್ ಹುಡುಕೋದು ಹೇಗೆ ಅಂತಂದ್ರೆ ಬಹಳ ಸುಂದರವಾಗಿರೋ ಲೊಕೇಶನ್ ಹುಡ್ಕೊಂಡು ಹೋಗ್ತೇವೆ ಅಲ್ಲಿ ಕಥೆಯನ್ನ ಪ್ಲಾಂಟ್ ಮಾಡ್ತೇವೆ ಅದು ರಾಮಚಂದ್ರ ಅವರ ನಿಲುವು ಬೇರೆ ಅವರು ಹೇಳೋದು ಅದು ಸರಿಯಲ್ಲ ನೀವು ಯಾವ ಲೊಕೇಶನ್ ಹುಡುಕ್ತೀರೋ ಅಲ್ಲಿ ಸೌಂದರ್ಯವನ್ನು ಹುಡುಕಬೇಕು ಇವೆರಡು ಬೇರೆ ಬೇರೆ ತರದ ಅಪ್ರೋಚ್‌ಗಳು ನೋಡಿ ಒಂದು ನೀವು
00:04:40
ಸೌಂದರ್ಯವನ್ನ ಹುಡುಕೊಂಡು ತನ್ನದಲ್ಲದ ಪರಿಸರದಲ್ಲಿ ಚಿತ್ರವನ್ನು ಚಿತ್ರೀಕರಿಸೋದು ಇನ್ನೊಂದು ಅದು ಸರಿಯಲ್ಲ ನಮ್ಮನೆ ಪರಿಸರದಲ್ಲಿ ಸೌಂದರ್ಯ ಇರುತ್ತೆ ಅದನ್ನ ಹುಡುಕುವುದು ನನ್ನ ಕೆಲಸ, ರಾಮಚಂದ್ರ ಅವರು ಅದನ್ನ ಮಾಡ್ತಾಇದ್ರು ಹಾಗಾಗಿ ಅವರ ಯಾವ ಸಿನಿಮಾಗಳ ಫೋಟೋಗ್ರಫಿಯು ಅದ್ಭುತ, ಸುಂದರ ಅಂತ ಹೇಳೋಕೆ ಆಗ್ತಿರಲಿಲ್ಲ ಆದರೆ ನಿಜ ಸತ್ಯ ಅನಿಸ್ತಾ ಇತ್ತು ಸೋ ಎರಡು ವ್ಯತ್ಯಾಸ ಇದೆ.
ಪಿ ಶೇಷಾದ್ರಿ: ನಿರ್ದೇಶಕನಾಗಿ ರಾಮಚಂದ್ರ ಅವರನ್ನ ನೋಡೋದಾದರೆ ನನಗಿಂತ ತುಂಬಾ ಹಿರಿಯರು ವಯಸ್ಸಿನಲ್ಲಿ ಅನುಭವದಲ್ಲಿ ಅವರು ಈ ಚಲನಚಿತ್ರ ಕ್ಷೇತ್ರಕ್ಕೆ ಬಂದು ಸುಮಾರು ಒಂದು 40 ವರ್ಷಗಳಾಗಿತ್ತು ನಾನು ಒಂದು 20 ವರ್ಷ ನಾನು ಚಲನಚಿತ್ರ ಅಂದ್ರೆ ಇನ್ನು ಸಂಭ್ರಮಿಸುತ್ತ

00:05:29
ಇದ್ದಂತ ಕಾಲದಲ್ಲೇ ಅವರು ಛಾಯಾಗ್ರಹಕರಾಗಿ ದೊಡ್ಡ ಹೆಸರು ಮಾಡಿದಂತದ್ದು [ಗಂಟಲು ಸರಿಮಾಡಿಕೊಳ್ಳುವಿಕೆ] ನಾನು ರಾಮಚಂದ್ರ ಅವರನ್ನ ಎರಡು ಥರದಲ್ಲಿ ನೋಡೋದಕ್ಕೆ ಇಷ್ಟ ಪಡ್ತೀನಿ ಒಂದು ನಮ್ಮಲ್ಲಿ ಒಂದು ಹೊಸ ಅಲೆಯ ಚಿತ್ರಗಳು ಅಂತ ಬಂತಲ್ಲ ‘ಹೊಸ ಅಲೆಯ ಚಿತ್ರಗಳ ಬೆನ್ನೆಲಬು’ ರಾಮಚಂದ್ರ ತುಂಬಾ ಜನ ನಿರ್ದೇಶಕರುಗಳು ಸಿನಿಮಾ ಮಾಡಿದ್ದಾರೆ ಗಿರೀಶ್ ಕಾರ್ನಾಡ್ ಮಾಡಿದ್ದಾರೆ ಬಿವಿ ಕಾರಂತ್ ಮಾಡಿದ್ದಾರೆ ಗಿರೀಶ್ ಕಾಸರಳ್ಳಿ ಮಾಡಿದ್ದಾರೆ ನಾಗಭರಣ ಮಾಡಿದ್ದಾರೆ ಪಿ ಲಂಕೇಶ್ ಮಾಡಿದ್ದಾರೆ ಕವಿತಾ ಲಂಕೇಶ್ ಮಾಡಿದ್ದಾರೆ ನಾನು ಮಾಡಿದ್ದೀನಿ ರಾಮದಸ್ ನಾಯ್ಡು ಮಾಡಿದ್ದಾರೆ ತುಂಬಾ ಜನ ಈ 40 ವರ್ಷಗಳಲ್ಲಿ ಹೊಸ ಅಲೆ ಅಂತ ಏನು ಪ್ರಾರಂಭ ಆಯ್ತಲ್ಲ 70ರ ದಶಕದ ಆರಂಭದಲ್ಲಿ ಆ ಹೊತ್ತಿನಿಂದ
00:06:07
ಈ ಹೊತ್ತಿನವರೆಗೂ ಕನ್ನಡದಲ್ಲಿ ಹಲವಾರು ಹೊಸ ಅಲೆಯ ಚಿತ್ರಗಳು ಒಬ್ಬ ನಿರ್ದೇಶಕರು ಹತ್ತು ಚಿತ್ರ ಮಾಡಿರಬಹುದು ಐದು ಮಾಡಿರಬಹುದು ಎರಡು ಮಾಡಿರಬಹುದು ಒಂದು ಮಾಡಿರಬಹುದು ಆದರೆ ಈ ಎಲ್ಲಾ ನಿರ್ದೇಶಕರುಗಳ ಜೊತೆ ಕೊಂಡಿಯಾಗಿದ್ದವರು ರಾಮಚಂದ್ರ. ಹಾಗಾಗಿ ಇವತ್ತೇನು ಹೊಸ ಅಲೆ ಅಂತ ಕನ್ನಡದಲ್ಲಿ ಈ ಪರಂಪರೆ ಪ್ರಾರಂಭ ಆಯಿತು ಈ ಚಳವಳಿ ಬೆಳಿತಾ ಹೋಯ್ತು ಅದರ ನಿಜವಾದ ಬೆನ್ನೆಲುಬು ರಾಮಚಂದ್ರ. [ಹಿನ್ನೆಲೆ ಧ್ವನಿ] ಸದಾ ಹೊಸತನವನ್ನು ಹುಡುಕುತ್ತಿದ್ದ ಅವರು ನೈಸರ್ಗಿಕ ಬೆಳಕನ್ನು ಬಳಸುತ್ತಿದ್ದ ರೀತಿ ಅನನ್ಯ.[ರಾಮಚಂದ್ರರ ಪುತ್ರಿ] ಪ್ರತಿ ಚಿತ್ರವನ್ನು ಕಲಿಕೆಯ ದೃಷ್ಟಿಯಿಂದ ನೋಡುತ್ತಾ ಅನೇಕ ಸಾಧನೆಗಳನ್ನು ಕಂಡ ರಾಮಚಂದ್ರರು ಅತ್ಯಂತ ಕ್ರಿಯೆ ಪ್ರೀತಿಸುತ್ತಿದ್ರು ಅನ್ನೋದಕ್ಕಿಂತ ಹೆಚ್ಚಾಗಿ
00:06:48
ಅವರಿಗೆ ಚಿತ್ರಗಳ ಬಗ್ಗೆ ಚಿತ್ರ ಮಾಡುವ ಒಂದು ಕ್ರಿಯೆ ಏನಿದೆ ಅದರ ಬಗ್ಗೆ ಬಹಳ ಪ್ರೀತಿ ಇತ್ತು ಸಣ್ಣದಾಗಿದ್ದಾಗಿಂದನೇ ಅವರು ಹಿ ಹಾಡ್ ದಟ್ ವಂಡರ್ ಹೇಗೆ ಫಿಲ್ಮ್ ಹೇಗೆ ಮಾಡೋದು ಅಂತ ಸೋ ಅವರಿಗೆ ಆ ಒಂದು ಕ್ರಿಯೆ ಬಗ್ಗೆ ಬಹಳ ಆಸಕ್ತಿ ಇತ್ತು ಚಿತ್ರರಂಗ ಹೀಗಿರಬೇಕು ಹಾಗಿರಬೇಕು ಇದೇ ಒಂದು ತರಹದಲ್ಲಿ ಮುಂದುವರಿಬೇಕು ಅದರ ಬಗ್ಗೆ ಅವರಿಗೆ ಯಾವುದು ಒಂದು ಆಥರ ಒಂದು ಸ್ಟ್ರಿಕ್ಟ್ ರೂಲ್ಸ್ ಅಂತ ಏನು ಇರಲಿಲ್ಲ ಅವರು ಹೇಳ್ತಾ ಇದ್ದಿದ್ದು ಬರಲಿ ಹೆಚ್ಚು ಹೆಚ್ಚು ಜನ ಬರಲಿ ಒಳ್ಳೆ ಚಿತ್ರಗಳು ಸೆನ್ಸಿಬಲ್ ಈ ಸದಭಿರುಚಿಯ ಚಿತ್ರ ಅನ್ನೋ ಪದ ಉಪಯೋಗಿಸೋದು ಈಗ ಪಾಯಿಂಟ್ ಇಲ್ಲ ಯಾಕೆಂದ್ರೆ ಎಲ್ಲರೂ ಹೇಳ್ತಾರೆ ಸದಭಿರುಚಿ ಚಿತ್ರ ಅಂತ
00:07:19
ಅದರಲ್ಲಿ ಎಷ್ಟು ಒಳ್ಳೆ ಅಭಿರುಚಿ ಇರುತ್ತೆ ಅಂತ ಫಿಲ್ಮ್ ನೋಡಿದ್ಮೇಲೆ ಗೊತ್ತಾಗುತ್ತೆ ಹಾಗಾಗಿ ಹೆಚ್ಚು ಹೆಚ್ಚು ಜನ ಬರಬೇಕು ಹೊಸ ಹೊಸ ಐಡಿಯಾಗಳು ಬರಬೇಕು ಸಿನಿಮಾ ರಂಗಕ್ಕೆ ಅನ್ನೋದರಿಗೆ ಬಹಳ ಆಸಕ್ತಿ ಇತ್ತು ಆದರೆ ಕನ್ನಡ ಚಿತ್ರರಂಗದ ಬಗ್ಗೆ ಪ್ರೀತಿ ಇದೆ ಅಂತವರು ಯಾವತ್ತು ಎದೆ ಉಬ್ಬಿಸಿ ಹೇಳಲಿಲ್ಲ ಆದರೆ ಬೇರೆ ಕಡೆಯಿಂದ ಆಫರ್ ಗಳು ಬಂದಾಗ ಅವರು ಒಪ್ಪಲಿಲ್ಲ ಅದನ್ನ ಅದು ಬಹುಶಃ ಇನ್ ಡೈರೆಕ್ಟ್ ಆಗಿ ಅವರಿಗೆ ನಮ್ಮ ಚಿತ್ರರಂಗದ ಬಗ್ಗೆ ಪ್ರೀತಿಯನ್ನ ತೋರಿಸ್ತಾ ಇತ್ತು ಮೋಸ್ಟ್ಲಿ [ಹಿನ್ನೆಲೆ ಧ್ವನಿ] ತಮ್ಮ ಮೊದಲ ಚಿತ್ರದ ಚಿತ್ರೀಕರಣಕ್ಕೆ ರಾಮಚಂದ್ರರನ್ನು ಕ್ಯಾಮೆರಾಮ್ಯಾನ್ ಆಗಿ ಆಯ್ಕೆ ಮಾಡಿಕೊಂಡು ಮುಂದೆ ಖ್ಯಾತ ನಿರ್ದೇಶಕರಾದವರು ಅನೇಕ ಮಂದಿ ನಿರ್ದೇಶನದ ಮೊದಲ
00:07:56
ಹೆಜ್ಜೆಯನ್ನು ನೀಡುತ್ತಿದ್ದವರ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಬುದ್ಧಗೊಳಿಸುವ ಸಾಮರ್ಥ್ಯ ಅವರಲ್ಲಿತ್ತು [ಗಿರೀಶ್ ಕಾಸರವಳ್ಳಿ] ಘಟಶ್ರಾದ್ಧಕ್ಕಿಂತ ಮುಂಚೆ ನಾನು ಚೋಮನದುಡಿಯ ಸಹನಿರ್ದೇಶಕನಾಗಿದ್ದೆ ಬಿವಿ ಕಾರಂತರ ನಿರ್ದೇಶದ ಚೋಮನದುಡಿ ಶಿವರಾಮ ಕಾರಂತರ ಒಂದು ಬಹಳ ಗಟ್ಟಿ ಕೃತಿಯನ್ನ ಆಧರಿಸಿದ ಒಂದು ಸಿನಿಮಾ. ಅದರ ಛಾಯಾಗ್ರಾಹಕ ರಾಮಚಂದ್ರ ಸೋ ನಾವು ಇಡೀ ಸಿನಿಮಾಕ್ಕೆ ವರ್ಕ್ ಮಾಡುದ್ವಲ್ಲ ನನಗೆ ಅವರ ಒಂದು ತಹತಹ ಏನಿದೆ ಒಂದು ನಿಜವಾದ ಹಸಿ ಹಸಿಯಾಗಿ ವಾಸ್ತುವನ್ನು ಹಿಡಿಬೇಕು ಅನ್ನುವ ತಹತಹ ಏನಿದೆ ನನಗೆ ಬಹಳ ಮೆಚ್ಚಿಗೆ ಆಯ್ತು ಕನ್ನಡದ ಈ ಹೊಸ ಅಲೆ ಅನ್ನೋ ಒಂದು ಪರಂಪರೆ ಬಂತಲ್ಲ ಅದಕ್ಕೆ ಒಂದು ಕಡೆ ಎಲ್ಲ ಬರೆದೆ ಅದರ ಹುಟ್ಟಿಗೆ ಯಾರೇ ಕಾರಣ
00:08:40
ಆಗಿರಬಹುದು ಅದನ್ನ ಬೆಳೆಸಿಕೊಂಡು ಬಂದವರು ಮಾತ್ರ ರಾಮಚಂದ್ರ ಅಂತ. ಬಹುಶ ರಾಮಚಂದ್ರ ಇಲ್ಲದಿದ್ದರೆ ಕನ್ನಡದಲ್ಲಿ ಹೊಸ ಅಲೆ ಈ ಪರಂಪರೆಗೆ ಬರ್ತಾ ಇರಲಿಲ್ಲ ಸುಮ್ನೆ ಆ ಹೊಸ ಅಲೆಯನ್ನು ಹಣೆಪಟ್ಟಿ ಇಟ್ಕೊಂಡು ಬಂದಂತ ಸಿನಿಮಾಗಳ ಒಂದುಟೆಕ್ ಟೆಕ್ನಿಕಲ್ ಲಿಸ್ಟ್ ತೆಗೆದು ನೋಡಿ ಕ್ರೂ ತೆಗೆದು ನೋಡಿ ಹೆಚ್ಚಿನವಕೆ ರಾಮಚಂದ್ರರ ಛಾಯಾಗ್ರಹಣ ಇದೆ. ಎರಡು ಕಾರಣಕ್ಕೆ ರಾಮಚಂದ್ರರನ್ನು ತಗೋತಾ ಇದ್ರು ಒಂದು ರಾಮಚಂದ್ರ ಈತರ ಒಳ್ಳೆಯ ಕ್ಯಾಮೆರಾಮ್ಯಾನ್ ಅಂತಹೇಳಿ ಎರಡನೆದು ರಾಮಚಂದ್ರ ಈ ತರ ಇನ್ವಾಲ್ವ್ ಆಗ್ತಾರೆ ಅಂತಹೇಳಿ ಅಂದ್ರೆ ಆರಂಭದ ದಿನಗಳಲ್ಲಿ ಈತರದ ಸಿನಿಮಾ ಮಾಡಿದ್ರಲ್ಲ ತುಂಬಾ ಜನ ಬೇರೆ ಬೇರೆ ಕಲಾ ಪ್ರಕಾರಗಳಿಂದ ಬಂದವರು ಬೇರೆ ಬೇರೆ ಶಿಸ್ತಿನಿಂದ

00:09:14
ಬಂದವರು ಅವರಿಗೆ ಸಿನಿಮಾ ಗೊತ್ತಿರಲಿಲ್ಲ ಆದರೆ ಅವರಿಗೆ ಏನು ಗಹನವಾದದ್ದು ಹೇಳಬೇಕು ಅನ್ನೋ ಆಸಕ್ತಿ ಇರ್ತಿತ್ತು ಆವಾಗ ವರ ರಾಮಚಂದರ ಹೇಳ್ಕೊತಿದ್ರು ಯಾಕಂದ್ರೆ ಫಿಲ್ಮಿನ ಪಾರ್ಟ್ ಏನಿದೆ ಸಿನಿಮ್ಯಾಟಿಕ್ ಏನೋ ಇಡಿಯಂ ಹೇಗೆ ಬಳಸ್ಕೊಬೇಕು ಅದನ್ನ ರಾಮಚಂದ್ರ ನೋಡ್ಕೊತಾ ಇದ್ರು ಅಂದ್ರೆ ಒಂತರದ ಘೋಸ್ಟ್ ಡೈರೆಕ್ಟರ್ ಆಗಿರ್ತಿದ್ರು ಅದು ಘಟಶ್ರಾದ್ಧ ಮಾಡಕ್ಕೆ ಬಂದಾಗ ನಾನು ಒಂದು ಬಹಳ ಆಗಷ್ಟೇ ಫಿಲ್ಂ ಇನ್ಸ್ಟಿಟ್ಯೂಟ್ ಇಂದ ಬಂದಿದ್ದು ಬಹಳ ಸ್ವಲ್ಪ ಕಾಂಪ್ಲೆಕ್ಸ್ ಆದಂಥ ವಿಶುವಲ್ ಡಿಸೈನ್ ಮಾಡಿಕೊಂಡಿದ್ದೆ ರಾಮಚಂದ್ರ ಚಾಲೆಂಜ್ ಆಗಿ ತಗೊಂಡರು ನನಗೆ ಅದು ಇವತ್ತಿನವರೆಗೂ ಅದ ಬಹಳ ಸೋಜಿವಾಗಿ ಕಾಣುತ್ತೆ ಮತ್ತೆ ಹೆಚ್ಚಿನ ಕ್ಯಾಮೆರಾಮನ್ ನಾನು ಡಿಸೈನ್ ಮಾಡಿದ
00:09:54
ಗಳನ್ನ ಆಗಲ್ಲ ಅಂತ ಎಕ್ಸಿಕ್ಯೂಟ್ ಮಾಡಕ್ಕೆ ಆಗಲ್ಲ ಅಂತ ರಾಮಚಂದ್ರ ಹೇಳಿದ್ರು ಇಲ್ಲ ನಿಮಗೆ ಬೇಕಾ ಕೊಡೋದು ನನ್ನ ಕೆಲಸ ಅಂತ ತುಂಬಾ ಯಂಗ್ ಸ್ಟರ್ಸ್ ಒಂದು ಪಡೆ ಕಟ್ಟಬೇಕು ಅನ್ನೋ ಆಸೆ ಇತ್ತು ಅದು ಕೈಗೊಡಲಿಲ್ಲ ಅವರು ಅಸೀಮ ಅಂತ ಒಂದು ತಂಡ ಕಟ್ಟಿರಲ್ಲ 60 -70ರ ಸುಮಾರಿಗೆ ಅದೇ ಕಾರಣಕ್ಕೆ ಬಂದ್ರು 80ಎಂಎಂ ಕ್ಯಾಮೆರಾ ಇಟ್ಕೊಂಡು ಸಿನಿಮಾ ಮಾಡೋಣ ಬನ್ನಿ ಅಂದ್ರು ರಿವರ್ಸಲ್ ಫಿಲ್ಮ್ ಹಾಕೊಂಡು ಒಂದು 10 ಜನರ ತಂಡ ಇಟ್ಕೊಂಡು ಅವರಿಗೆಲ್ಲ ಸಿನಿಮಾ ಮಾಡೋಣ ಬನ್ನಿ ಅಂತ ಆ ಅವರು ಯಾರಿಗೂ ಸಿನಿಮಾ ಅಂತ ಗೊತ್ತಿಲ್ಲ ಅವರಿಗೆಲ್ಲ ಸಿನಿಮಾದ ಬಗ್ಗೆ ಸಣ್ಣ ಮಾಹಿತಿ ಕೊಟ್ಟು ಕ್ಲಾಸಸ್ ಕೊಟ್ಟು ಮಾಡಿ ಆಮೇಲೆ ಸ್ಕ್ರಿಪ್ಟ್ ಬರೆಸಿ ಅವರತ್ರ ಒಂದು ಸಿನಿಮಾನು ಮಾಡಿಸಿದ್ರು ಆಮೇಲೆ ಅದರ ಮೂಲಕನೇ
00:10:35
ನಮ್ಮ ಕಾಶಿನಾಥ್ ಸುರೇಶ್ ಹೆಬ್ಬಳ್ಳಿಕರು ಶಶಿಧರ್ ನಿರಂಜನ್ ಅವರೆಲ್ಲ ಸಿನಿಮಾ ಮಾಡಕೆ ಹೊರಟಿದ್ರು. [ಹಿನ್ನೆಲೆ ಧ್ವನಿ] ಖ್ಯಾತ ನಿರ್ದೇಶಕ ಗುರುದತ್ ಪಡುಕೋಣೆ ಅವರ ಕಣ್ಣಾಗಿ ವಿಕೆ ಮೂರ್ತಿಯವರು ಹೇಗೆ ಚಿತ್ರಗಳಿಗೆ ಜೀವ ತುಂಬಿದರೋ ಅದೇ ರೀತಿ ಎಸ್ ರಾಮಚಂದ್ರರು ಗಿರೀಶ್ ಕಾಸರವಳ್ಳಿ ಅವರ ಚಿತ್ರದ ಕಣ್ಣಾಗಿ ಬೆಳಗಿದವರು ಎಂದರೆ ತಪ್ಪಾಗಲಾರದು 70ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಮಚಂದ್ರರ ಮೂಲ ಉಡುಪಿ ಜಿಲ್ಲೆಯ ಕೋಟ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು ಅವರಿಗೆ ಕೋಟ ಎಂದರೆ ಬಹಳ ಪ್ರೀತಿ. [ರಾಮಚಂದ್ರರ ಪುತ್ರಿ ಶ್ರೀಮತಿ ವರ್ಷ] ಅವರಿಗೆ ಯಾವ ವಿಷಯದಲ್ಲಿ ಇಂಟರೆಸ್ಟ್ ಇಲ್ಲ ಅಂತ ಕೇಳಿ ಅಷ್ಟು ಎಲ್ಲ ನೀವು ನ್ಯೂಸ್ ಇಂದ ಹಿಡಿದು ಒಬ್ಬ ರಾಜದೀಪ್ ಸರ್ದೇಸಾಯಿ ಅರ್ನಬ್ ಗೋಸ್ವಾಮಿ
00:11:16
ಹೇಗೆ ಮಾತಾಡ್ತಾನೆ ಅನ್ನೋದರಿಂದ ಹಿಡಿದು ಕ್ರಿಕೆಟ್ ಟೆನ್ನಿಸ್ ಇಂದ ಹಿಡಿದು ಮನೆ ಮನೆ ನಲ್ಲಿ ರಿಪೇರಿ ಇಂದ ಹಿಡಿದು ಅಡುಗೆ ಬಹಳ ಇಷ್ಟ ಪಡ್ತಾ ಇದ್ದೀವಿ ಅವರು ಮಾಡ್ತಿರ್ಲಿಲ್ಲ ಅವರು ಮಾಡ್ತಾ ಇರ್ಲಿಲ್ಲ ಆದ್ರೆ ಅಡುಗೆ ಒಂದು ಮಾಡೋ ಕ್ರಿಯೆ ಇದೆಯಲ್ಲ ಹಾಗೆ ಬಹಳ ಆಸಕ್ತಿ ಇತ್ತು ಅವರಿಗೆ ತುಂಬಾ ವಿಷಯಗಳು ಅಂದ್ರೆ ಅವರು ಮೂಲತಃ ಹಿ ವಾಸ್ ಬ್ರಿಲಿಯಂಟ್ ಸೋ ನನಗೆ ಅನ್ಸೋದು ಅವರು ಈಗ ಸಿನಿಮಾ ರಂಗಕ್ಕೆ ಬರದೆ ಇನ್ಯಾವುದೇ ರಂಗಕ್ಕೆ ಹೋಗಿದ್ರುನು ಅಷ್ಟೇ ಚೆನ್ನಾಗಿ ಅವರು ಮುಂದೆ ಬರ್ತಾ ಇದ್ರು ಯಾಕೆಂದ್ರೆ ಅವರಿಗೆ ಅಷ್ಟು ಬುದ್ಧಿ ಶಕ್ತಿ ಇತ್ತು ಅಂಡ್ ಅಷ್ಟು ಆಸಕ್ತಿನು ಇತ್ತು ಸೋ ಬಹಳಷ್ಟು ಇಂಟರೆಸ್ಟ್ ಗಳು ಇತ್ತು ಅವರಿಗೆ ಇದು ಅದು ಅಂತಲ್ಲ ಸಾಹಿತ್ಯ ಶಿವರಾಮ
00:11:49
ಕಾರಂತರು ಬಹಳ ಇಷ್ಟವಾದ ವ್ಯಕ್ತಿ ಅವರಿಗೆ ಅವರು ನಿಮ್ಮ ಐ ಥಿಂಕ್ ಅಟ್ಸ್ ಒನ್ ಆಫ್ ದ ಪಾಯಿಂಟ್ಸ್ ಅಲ್ಲ ಅವರು ತುಂಬಾ ಗೌರವಿಸ್ತಾ ಇದ್ದಂತಹ ವ್ಯಕ್ತಿ ಅಂತಂದ್ರೆ ಶಿವರಾಮ ಕಾರಂತರು ಒಂದು ಊರು ಒಂದೇ ಊರವರು ಕೋಟದವರು ಅನ್ನೋ ಅದೊಂದು ಪ್ರೀತಿ ಬಿಡಲ್ಲ ಅದರ ಜೊತೆಗೆ ಅವರದೊಂದು ನಿಟ್ಟ ನಿಲುವೇ ಏನಿದೆಯಲ್ಲ ಶಿವರಾಮ ಕಾರಂತರದ್ದು ಅಂಡ್ ಬಹಳ ಕರಾರುವಾಕ್ಕಾಗಿ ಜೀವನ ನಡೆಸೋದು ಈತರ ವಿಷಯಗಳ ಬಗ್ಗೆ ತುಂಬಾ ಇಷ್ಟ ಇತ್ತು [ಹಿನ್ನೆಲೆ ಧ್ವನಿ]ಪುಣೆ ಫಿಲಂ ಇನ್ಸ್ಟಿಟ್ಯೂಟ್ ನಿಂದ ಹೊರಬಂದ ನಂತರ ಗಿರೀಶ್ ಕಾರ್ನಾಡರ ವಂಶವೃಕ್ಷ ಚಿತ್ರಕ್ಕೆ ಸಹಾಯಕ ಛಾಯಾ ಗ್ರಾಹಕರರಾಗಿ ಸೇರಿಕೊಳ್ಳುವುದರ ಜೊತೆಗೆ ತಮ್ಮ ಚಿತ್ರರಂಗದ ಸುದೀರ್ಘ ಪ್ರಯಾಣವನ್ನು ಆರಂಭಿಸಿದರು 1972 ರಲ್ಲಿ ತೆರೆಕಂಡ ಸಂಕಲ್ಪ- ಎಸ್ ರಾಮಚಂದ್ರರ

00:12:30
ಸ್ವತಂತ್ರ ಛಾಯಾಗ್ರಹಣದ ಚೊಚ್ಚಲ ಚಿತ್ರ ತಮ್ಮ ಮೊದಲ ಚಿತ್ರಕ್ಕೆ ಕರ್ನಾಟಕ ಸರ್ಕಾರದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದುಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದರು. 1977 ರಲ್ಲಿ ತೆರೆಕಂಡ ಋಷ್ಯ ಶೃಂಗ ಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟಗಳೆರಡರಲ್ಲೂ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದುಕೊಂಡರು. ಇದರ ಜೊತೆಗೆ ಐದು ಬಾರಿ ರಾಜ್ಯ ಪ್ರಶಸ್ತಿ, 2004ರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ 2006 ರಲ್ಲಿ ರಾಜ್ಯ ಪ್ರಶಸ್ತಿಗಳಲ್ಲದೆ, ಇನ್ನೂ ಹಲವು ಪ್ರಶಸ್ತಿಗಳು ಇವರನ್ನ ಅರಸಿ ಬಂದವು. ಕನ್ನಡಿಗರ ಕಣ್ಮಣಿ ದಿವಂಗತ ಶಂಕರ್ ನಾಗ್ ನಿರ್ದೇಶನದ ಕಿರುತೆರೆಯ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಅನ್ನು
00:13:17
ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಖ್ಯಾತಿ ರಾಮಚಂದ್ರ ಅವರಿಗೆ ಸಲ್ಲುತ್ತದೆ.[ರಾಮಚಂದ್ರರ ಪುತ್ರಿ] ಒಂದವರಿಗೆ ಬಹುಶಃ ಬೇಜಾರ್ ಇದ್ದಿದ್ದು ಅಂತಂದ್ರೆ ಅವರಿಗೊಬ್ಬರಿಗೆ ಅಂತಲ್ಲ ಸಿನಿಮಾ ಮತ್ತೆ ಸಿನಿಮಾ ರಂಗವನ್ನ ಒಳಹೊಕ್ಕು ನೋಡಿ ಅದರ ಬಗ್ಗೆ ಸ್ವಲ್ಪ ಆಸಕ್ತಿ ಇರೋರು ಎಲ್ಲರಿಗೂ ಇರುವಂತಹ ಒಂದು ಬೇಜಾರಿನ ವಿಷಯ ಅಂತಂದ್ರೆ ಈ ಕ್ಯಾಮೆರಾ ಹಿಂದೆ ಕೆಲಸ ಮಾಡ್ತಾರಲ್ಲ ಡೈರೆಕ್ಟರ್ಗೆ ಒಂದು ಸ್ವಲ್ಪ ಮಟ್ಟಿಗೆ ಸಿಗುತ್ತೆ ಮಾನ್ಯತೆ ಆದರೆ ಈ ಬೇರೆ ಬೇರೆ ಎಡಿಟರ್ಸ್ ಆಗಲಿ ಕ್ಯಾಮೆರಾ ವರ್ಕ್ ಮಾಡೋರಾಗಲಿ ಕಾಸ್ಟ್ಯೂಮ್ ಕೊರಿಯೋಗ್ರಾಫರ್ಸ್ ಇವರಿಗೆ ಹಿಂದಿ ಚಿತ್ರರಂಗದಲ್ಲಿ ಸ್ವಲ್ಪ ಸಿಗುತ್ತೆ ಮನ್ನಣೆ ಬಟ್ ನಮ್ಮ ಕನ್ನಡದಲ್ಲಿ ಅದಿನ್ನು ಬಹಳ ಕಮ್ಮಿ ಇದೆ ಅವರು ಬಾಯಿಬಿಟ್ಟು
00:13:51
ಅದರ ಬಗ್ಗೆ ಯಾವತ್ತೂ ಹೇಳಿರಲಿಲ್ಲ ಬಟ್ ಅದು ವ್ಯಕ್ತವಾಗ್ತಿತ್ತು ಅವರ ಮಾತುಕಥೆಯಲ್ಲಿ ಅವರು ಬಹಳಷ್ಟು ಅವರಿಗೆ ಇನ್ಫ್ಯಾಕ್ಟ್ ಸ್ಟೇಟ್ ಅವಾರ್ಡ್ ಬಂದಾಗ ಕಂಕಣ ಚಿತ್ರಕ್ಕೆ ಅಂತ ಅನಿಸುತ್ತೆ ಅವರನ್ನ ರಿಜೆಕ್ಟ್ ಮಾಡಿದ್ರು ಅವರು ಹೇಳಿದ್ದು ನೀವು ಬೆಸ್ಟ್ ಆಕ್ಟರ್ ಆಕ್ಟರ್ಸ್ ಗೆ ಕೊಡುವ ಹಣದ ಅರ್ಧದಷ್ಟು ನೀವು ಟೆಕ್ನಿಷಿಯನ್ಸ್ ಗೆ ಕೊಡ್ತೀರಿ ಹೇಗೆ ನಾನು ಸ್ವೀಕಾರ ಮಾಡ್ಲಿ ಅವಾರ್ಡ್ ಅಂತ ಹೇಳಿ ರಿಜೆಕ್ಟ್ ಮಾಡಿ ಕಡೆಗೆ ಮುಂದಿನ ವರ್ಷದಿಂದ ಅದನ್ನ ಅಟ್ ಪಾರ್ ಮಾಡಿದ್ರು ಆಕ್ಟರ್ಸ್ಗೆ ಕೊಡೋಷ್ಟೇ ಟೆಕ್ನಿಷಿಯನ್ಸ್ ಗೂ ಕೊಡೋ ಹಾಗೆ ಸೋ ಆ ತರದಲ್ಲಿ ಐ ಥಿಂಕ್ ಅವರ ಕಾಂಟ್ರಿಬ್ಯೂಷನ್ ಇಮೆನ್ಸ್ ಅಂಡ್ ಚಿತ್ರರಂಗಕ್ಕೆ ಅವರು ಏನು ಕಾಂಟ್ರಿಬ್ಯೂಟ್ ಮಾಡಿದ್ದಾರೆ ಅಂತ
00:14:23
ನಾನು ಹೇಳೋಕೆ ಸಾಧ್ಯನೇ ಇಲ್ಲ ಯಾಕೆಂದ್ರೆ ನಾನು ಯಾವ ತರಹದಲ್ಲೂ ಅರ್ಹಳಲ್ಲ ಹೇಳೋದಕ್ಕೆ ಆದರೆ ವೃತ್ತಿಯ ಬಗ್ಗೆ ಒಂದು ಪ್ಯಾಶನ್ ತುಂಬಾ ಜನಕ್ಕೆ ಇರುತ್ತೆ ಒಬ್ಸೆಷನ್ ಇದೆಯಲ್ಲ ಇನ್ನು ಹೆಚ್ಚು ಹೆಚ್ಚು ಕಲಿಬೇಕು ಬೇರೆ ಬೇರೆ ತರಹದನ್ನ ಅಳವಡಿಸಿಕೊಳ್ಳಬೇಕು ತುಂಬಾ ಜನರ ಜನರನ್ನ ಇದೇ ಒಂದು ರಂಗಕ್ಕೆ ತರಬೇಕು ಅವರನ್ನ ಎನ್ಕರೇಜ್ ಮಾಡಬೇಕು ಈ ಎಲ್ಲ ವಿಷಯಗಳು ಬಹುಶಃ ನಾನು ಆತರದ ಕಮಿಟ್ಮೆಂಟ್ ನಾನು ನೋಡಿಲ್ಲ ನಾನು ಐ ಥಿಂಕ್ ಒಂತರದಲ್ಲಿ ಲಕ್ಕಿ ಅವರ ಜೊತೆ ಎರಡು ಮೂರು ಫಿಲ್ಮ್ ಅಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ ನಾನು ಆ ಒಂದು ಏನು ಪ್ಲಾನಿಂಗ್ ಮಾಡೋದು ಇಂದ ಹಿಡಿದು ಫಿಲ್ಮ್ ಫಿಲ್ಮ್ ಮಾಡ್ತಾ ಇದೀವಿ ಅನ್ನೋ ಟೈಮ್ ಇಂದ ಫಿಲ್ಮ್ ಮುಗಿಸಿ ಚಿತ್ರರಂಗ ಇದರ

00:14:59
ಸ್ಪರ್ಧೆ ಮೇಲೆ ಏನ ಬರುತ್ತಲ್ಲ ಯಾವ ಆಸ್ಪೆಕ್ಟ್ ಆಫ್ ಫಿಲ್ಮ್ ಮೇಕಿಂಗ್ ತಗೊಂಡ್ರು ಅವರಿಗೆ ಅದರ ಬಗ್ಗೆ ಪರ್ಫೆಕ್ಟ್ ಆಗಿ ಗೊತ್ತಿತ್ತು ಸೋ ನಗೆ ಅದಂದು ಇಷ್ಟ ಆಯ್ತು ಯಾವದೋ ಒಂದ ಟೈಮ ನಾನು ಡೈರೆಕ್ಟ್ ಮಾಡಿ ಅವರ ಅದಕ್ಕೆ ಕ್ಯಾಮರ ವರ್ಕ್ ಮಾಡ್ತಾರಾ ಅಂತ ಹೇಳಿ ಬಟ್ ಎನಿವೇ ಬೇಸಿಕಲಿ ಕೆಲಸದ ಬಗ್ಗೆ ಶ್ರದ್ಧೆ ಶ್ರದ್ಧೆ ಅಗೈನ್ ವೆರಿ ಆರ್ಡಿನರಿ ಟರ್ಮ್ ಬಟ್ ಅಪರಿಮಿತ ಶ್ರದ್ಧೆ ಇತ್ತು ಅವರಿಗೆ ಅದು ಐ ಥಿಂಕ್ ಬಹಳ ವಿಶೇಷ ಈಗಿನ ಕಾಲದಲ್ಲಿ [ಶ್ರೀಕಾಂತ್] ನಾನು ಇವತ್ತು ಈ ಸ್ಥಿತಿಗೆ ಬರೋದಕ್ಕೆ ನನ್ನ ಗುರುಗಳಂತ ಎಸ್ ರಾಮಚಂದ್ರ ಸಾರೇ ಕಾರಣ ಅಂತ ಹೇಳ್ಕೊಳ್ಳೋಕೆ ಬಹಳ ಹೆಮ್ಮೆ ಆಗುತ್ತೆ ನನಗೆ ನನಗೆ ಈಗ ಅನಿಸ್ತಿದೆ ರಾಮಚಂದ್ರ ಸರ್ ಜೊತೆ ವರ್ಕ್ ಮಾಡ್ತಾ ಇರಬೇಕಾದರೆ ಇಂಥವರ ಅವರ ಜೊತೆ ನಾನು
00:15:31
ಇದ್ನ ಅಂತ ಹೇಳಿ ಫಸ್ಟ್ ನಾನು ಅವರ ಜೊತೆ ಅಸಿಸ್ಟೆಂಟ್ ಆಗಿ ಸೇರಿದ ತಕ್ಷಣ ಅವರ ಏನು ಹೇಳ್ತಾ ಇರ್ಲಿಲ್ಲ ಒಂದು ಒಂದು ಫೋರ್ ಫೈವ್ ಡೇಸ್ ಸುಮ್ ಇದ್ಕೊಂಡ ಅಬ್ಸರ್ವ್ ಮಾಡ್ರಿ ಅಂತ ಹೇಳ್ತಿದ್ರು. ಸೋ ಅಬ್ಸರ್ವೇಷನ್ ಅಲ್ಲೇ ಏನೋ ಕಲಿತೀವಾ ಅಂತ ಹೇಳಿ ಸೋ ಆಮೇಲೆ ಅಬ್ಸರ್ವೇಷನ್ ಆತರ ವೆರಿ ಗುಡ್ ಟೀಚರ್ ಆಮೇಲೆ ಸೆಟ್ ಅಲ್ಲಿ ಅನಾವಶ್ಯಕ ಕೂಗಡೋದು ಅವರಿಗೆ ಇಷ್ಟ ಆಗ್ತಾ ಇರ್ಲಿಲ್ಲ ಸೋ ನಾವು ನಾವೇನಾದ್ರೂ ಮಾತಾಡ್ತಾ ಇದ್ರೆ ಬೈ ಚಾನ್ಸ್ ಏನೋ ವಿಷಯಕ್ಕೂ ಯಾರೋ ಲೈಟ್ ಮ್ಯಾನ್ ಜೊತೆ ಆಗ್ಲಿ ಬೇರೆ ಕ್ರೇನ್ ಆಪರೇಟರ್ ಜೊತೆ ಆಗ್ಲಿ ಏನೋ ಸ್ವಲ್ಪ ಒಂದು ಚೂರು ವಾಯ್ಸ್ ಜೋರುಮಾಡ್ತಾರೆ ಶ್ರೀಕಾಂತ್ ಯಾಕ ಯಾಕೆ ಇಷ್ಟು ಜೋರು ಕೂಗಡ್ತೀರಾ ಅಂತ ಹೇಳ್ತಾ ಇದ್ರು ಸೊ ಹಂಗೆ
Trekking Tips Kannada | ಟ್ರೆಕ್ಕಿಂಗ್ ಸಲಹೆ: ಚಾರಣಕ್ಕೆ ಹೊರಡುವ ಮುನ್ನ ಈ ವಿಷಯಗಳು ತಿಳಿದಿರಲಿ!
00:16:02
ಎಲ್ಲರ ಜೊತೆನೂ ಬಹಳ ಕೂಲ್ ಆಗಿ ಸೆಟ್ ಅಲ್ಲಿ ಒಂದು ಸೈಲೆನ್ಸ್ ಮೇಂಟೈನ್ ಮಾಡಬೇಕು ಒಂದು ಡೀಸೆನ್ಸಿ ಮೇಂಟೈನ್ ಮಾಡಬೇಕು ಅನ್ನೋದು ಅವರ ಶಿಸ್ತು ಬದ್ಧತೆ ಇತ್ತು ಮೋಸ್ಟ್ಲಿ ಬಹುಶಃ ಅವರಿಗೆ ಒಂದು 58 60 ವರ್ಷ ಇರಬಹುದು ಅನ್ಸುತ್ತೆ. ಇಷ್ಟು ವರ್ಷ ಆದ್ರೂ ಕೂಡ ಅವರ ಸೆಟ್ ಅಲ್ಲಿ ಯಾವತ್ತು ಅಯ್ಯೋ ಸುಸ್ತು ಅಂತ ಯಾವತ್ತೂ ಕೂತ್ಕೊಂಡವರಲ್ಲ ಹಿ ಇಸ್ ವೆರಿ ಲೈಕ್ ಮರ್ಕ್ಯುರಿ ಅಂತರಲ್ಲ ಪಾದರಸ ಅಂತರಲ್ಲ ಆತರ ಇವಾಗ ನಾನು ಇಂಡಿಪೆಂಡೆಂಟ್ ಕ್ಯಾಮೆರಾಮ್ಯಾನ್ ಆಗಿದ್ದೀನಿ ನನಗೂ ಒಂದೊಂದು ಸೆಕೆಂಡ್ ಯಾವಾಗ್ಲಾದ್ರೂ ನನಗೆ ಬೇಜಾರಾದಾಗ ಸುಸ್ತ ಆದಾಗ ನನ್ನ ಮನಸ್ಸಿಗೆ ಟಕ್ ಅಂತ ಫ್ಲಾಶ್ ಆಗೋದೆ ನಮ್ಮ ಗುರುಗಳು ರಾಮಚಂದ್ರ ಸರ್ ಅವರು ಅವರು ಅಷ್ಟು ವಯಸ್ಸಲ್ಲೂ ಅಷ್ಟು
00:16:32
ಚುರುಕಾಗಿರ್ತಾರೆ ನಾವ್ ಯಾಕೆ ಈ ವಯಸ್ಸಲ್ಲಿ ಹಿಂಗೆ ಇದೀವಿ ಅಂತ ಮತ್ತೆ ನಾವು ಆಕ್ಟಿವ್ ಆಗ್ತೀವಿ. ಸೋ ಹಾಗೆ ಪ್ರತಿಯೊಂದು ಹಂತದಲ್ಲೂ ನನಗೆ ಅವರು ಇನ್ಸ್ ಫಿರೇಷನ್ ಅಂತನೆ ಹೇಳಬಹುದು. [ಹಿನ್ನೆಲೆ ಧ್ವನಿ] ಉತ್ಕೃಷ್ಟ ಸಿನಿಮಾಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ ಅಂತಹ ಚಿತ್ರಗಳ ಬಗೆಗಿನ ವ್ಯಾಮೋಹವನ್ನು ತಮ್ಮ ಮುಂದಿನ ಪೀಳಿಗೆ ಪಸರಿಸಲು ಅವರು ಸದಾ ಹಾತೊರೆಯುತ್ತಿದ್ದರು ಕೆಲವು ವರ್ಷಗಳ ಹಿಂದೆ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಪಿ ಶೇಷಾದ್ರಿ ಸೇರಿದಂತೆ ಸದರುಚಿ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವಂತಹ ಸಮಾನ ಮನಸ್ಕರ ಜೊತೆಗೂಡಿ ಚಿತ್ರ ಸಮೂಹ ಎಂಬ ತಂಡವನ್ನು ಹುಟ್ಟು ಹಾಕಿದರು. [ಪಿ ಶೇಷಾದ್ರಿ] 2002 2003ರಲ್ಲಿ ಒಂದು ಸಾಂಘಿಕ ಬೆಂಬಲ ಇರಲಿಲ್ಲ
00:17:12
ಈ ಚಿತ್ರಗಳಿಗೆ ನಮ್ಮಗಳಿಗೆ ನಾನು ಚಿತ್ರ ಮಾಡ್ತಿದ್ದೆ ಗಿರೀಶ್ ಕಾಸರ ಚಿತ್ರ ಮಾಡ್ತಿದ್ರು ಇನ್ನೊಂದು ಕಡೆ ನಾಗಭರಣ ಚಿತ್ರ ಮಾಡ್ತಿದ್ರು ರಾಮಚಂದ್ರ ಇಲ್ಲೆಲ್ಲ ಕೆಲಸ ಮಾಡ್ತಿದ್ರು ಸೋ ಎಲ್ಲರೂ ಹರಿದು ಹಂಚಿ ಹೋಗಿತ್ತು ಯಾವಾಗಲೂ ಸೇರ್ತಾ ಇದ್ದೀವಿ ಯಾವುದೋ ಸಭೆ ಸಮಾರಂಭಗಳಲ್ಲಿ ಒಂದೇ ಊರಲ್ಲಿ ಇದ್ರು ನಾವು ಪರಸ್ಪರ ಭೇಟಿಯಾಗ್ತಾ ಇದ್ದಿದ್ದು ಚರ್ಚೆ ಮಾಡ್ತಾ ಇದ್ದಂತ ಸಂದರ್ಭಗಳು ಕಡಿಮೆ ಆಗ ನಾವುಗಳು ಸಮಾನ ಮನಸ್ಸ ಗೆಳೆಯರೆಲ್ಲ ಒಂದು ಕಡೆ ಕೂತ್ಕೊಂಡು ಹಿಂಗೆ ಮಾತಾಡ್ತಾ ಮಾತಾಡ್ತಾ ಎಲ್ಲೂ ಆಗ್ತದೆ ಅಂತ ಅಂದ್ರೆ ನಾವುಗಳು ಚಿತ್ರ ಮಾಡ್ತಾ ಇದ್ವಿ ಎಲ್ಲರೂ ಚಿತ್ರ ಮಾಡ್ತಾ ಇದ್ವಿ ಅವರವರ ಶೈಲಿಯಲ್ಲಿ ಅವರವರ ಇದರಲ್ಲಿ ತಿಳುವಳಿಕೆ

00:17:41
ಮಾಡ್ತಾ ಚಿತ್ರ ಮಾಡ್ತಿರಬಹುದು ನಾವೆಲ್ಲ ಒಟ್ಟಾಗಿ ಸೇರಿ ಸೇರಿದರೆ ವಾರಕ್ಕೊಂದು ಚಿತ್ರ ನೋಡು ಅದು ಚಿತ್ರದ ಬಗ್ಗೆ ಚರ್ಚೆ ಮಾಡಿದ್ರೆ ಚಿತ್ರದ ಒಳನೋಟವನ್ನ ದಕ್ಕಿಸಿಕೊಳ್ಳಕ್ಕೆ ಪ್ರಯತ್ನ ಪಡೋದಾದರೆ ನಮ್ಮ ಮುಂದಿನ ಚಿತ್ರಗಳಲ್ಲಿ ಅದು ಪ್ರತಿಫಲಿತವಾಗುತ್ತೆ ಅನ್ನೋ ಮಾತನ್ನ ಆಡಕ್ಕೆ ಶುರು ಮಾಡಿದ್ವಿ ಸೋ ಆ ನಿಟ್ಟಿನಲ್ಲಿ ಗಿರೀಶ್ ಕಾಸರವಳ್ಳಿ ಎಸ್ ರಾಮಚಂದ್ರ ನಾನು ಮತ್ತೆ ಇನ್ನು ಹಲವಾರು ಗೆಳೆಯರುಎಲ್ಲ ಸೇರಿಕೊಂಡು ಏನಾದ್ರೂ ಒಂದು ಚಿತ್ರ ಸಮೂಹ ಅಂತ ಒಂದು ಸಂಸ್ಥೆಯನ್ನ ಹುಟ್ಟು ಹಾಕ್ಬೇಕು ಅಂತ ಅಂಕೊಂಡ್ವಿ ಆಮೇಲೆ ಅದೊಂದು ಚಿತ್ರ ಸಮೂಹ ಅಂತ ಹೆಸರು ಹಾಕಿದ್ವಿ ಆ ಈ ಚರ್ಚೆ ಪ್ರಾರಂಭವಾದ ದಿನದಿಂದ ರಾಮಚಂದ್ರ ನಮ್ಮ ಜೊತೆ ಇದ್ರು
00:18:14
[ಗಿರೀಶ್ ಕಾಸರವಳ್ಳಿ] ನಮ್ಮ ಉದ್ದೇಶ ಏನಿತ್ತು ಅಂತಂದ್ರೆ ಈ ನಮ್ಮ ಸಿನಿಮಾಗಳನ್ನ ನಾವು ಅರ್ಥ ಮಾಡ್ಕೊಳ್ಬೇಕು ಅದರ ದೋಷ ಮತ್ತು ಶಕ್ತಿಗಳನ್ನ ನಾವು ಕೂತುಕೊಂಡು ಚರ್ಚೆ ಮಾಡಬೇಕು ಜೊತೆಗೆ ಇವತ್ತು ಭಾರತದಲ್ಲಿ ತಯಾರಾಗ್ತಿರುವಂತ ಬೇರೆ ಭಾಷೆಯ ಚಿತ್ರಗಳು ನಂತರ ಜಗತ್ತಿನಲ್ಲಿ ತಯಾರಾಗ್ತಿರುವಂತ ಬೇರೆ ಭಾಷೆಗಳ ಚಿತ್ರವನ್ನ ಕುರಿತು ಚರ್ಚೆ ಮಾಡಬೇಕು ನಮಗೆ ಒಂದು ಅದರ ಎಲ್ಲಿ ಅದು ಗೆಲ್ತಾ ಇದೆ ಎಲ್ಲಿ ಸೋಲ್ತಾ ಇದೆ ಅಂ ನಾವು ನಾವೇ ಕೂತ್ಕೊಂಡು ಮಾತಾಡ್ತಾ ಹೋಗಬೇಕು ಅನ್ನ ಉದ್ದೇಶದಿಂದ ಸ್ಥಾಪಿತವಾದಂತ ಒಂದು ಸಂಸ್ಥೆ ನಾವು ಪಾಪ್ಯುಲರ್ ಸಿನಿಮಾನು ಡಿಸ್ಕಸ್ ಮಾಡ್ತಾ ಇದ್ದು ಕಮರ್ಷಿಯಲ್ ಸಿನಿಮಾ ಅಂತ ಯಾವದನ್ನ ಕರೀತೀವಿ ಅದನ್ನು ಡಿಸ್ಕಸ್ ಮಾಡ್ತಾ ಇದ್ದು
00:18:48
ಆನಂತರ ಅದು ಏನಾಯ್ತು ಅಂತಂದ್ರೆ ವಾರಕ್ಕೊಂದು ಸಿನಿಮಾ ನಾವು ನೋಡಬೇಕು ಅಂತ ಡಿಸೈಡ್ ಮಾಡ್ರು ಪ್ರತಿ ಸಂಡೇ ಒಂದು ಸಿನಿಮಾವನ್ನ ನಾವು ಒಂದು ಇಂಟರ್ನ್ಯಾಷನಲ್ ಕ್ಲಾಸಿಕ್ ಅಥವಾ ಕಂಟೆಂಪರರಿ ಕ್ಲಾಸಿಕ್ಸ್ ಅಲ್ಲಿ ಇಟ್ಕೊಂಡು ನಾವು ನೋಡ್ತಾ ಇದ್ವಿ ಕೆಲವೊಮ್ಮೆ ಒಂದೊಂದು ವಾರ ಒಬ್ಬೊಬ್ಬರು ಆರಿಸ್ಕೊಂಡು ಬರ್ತಾ ಇದ್ರು ಕೆಲವೊಮ್ಮೆ ರಾಮಚಂದ್ರ ಆರಸ್ಕೊಂಡು ಬರ್ತಾ ಇದ್ರು ರಾಮಚಂದ್ರ ಯಾವಗಲೂ ಆರಿಸ್ತಾ ಇದ್ದಿದ್ದು ತುಂಬಾ ಪಾಲಿಷ್ಡ್ ಫಿಲ್ಮ್ ಅಲ್ಲ ಟೆಕ್ನಿಕಲಿ ಕಾಂಪಿಟೆಂಟ್ ಅಂಡ್ ವೆರಿ ವೆಲ್ ಮೇಡ್ ಫಿಲ್ಮ್ ತರ ಅನ್ಯೂಲ್ ಒಂದು ಸಲ ಅವರು ಉರುಗ್ವೆದು ಒಂದು ಸಿನಿಮಾ ತಂದರು ಒಂದ್ಸಲ ಆಫ್ರಿಕನ್ ಕಂಟ್ರಿ ಒಂದು ಫಿಲ್ಮ್ ತಂದರು ಈತರ ಅಂದ್ರೆ ತಮಗೆ ಪರಿಚಯ ಇಲ್ಲದ ಒಂದು
00:19:27
ಸಮುದಾಯದಿಂದ ಬಂದಂತ ಸಿನಿಮಾವನ್ನ ನಾವು ನೋಡಬೇಕು ಯಾಕಂದ್ರೆ ಸಿನಿಮಾ ಅಂತಂದ್ರೆ ಕೇವಲ ಅದರ ಶಾರ್ಟ್, ಶಾರ್ಟ್ ಕಾಂಪೋಸಿಷನ್ ಅದರ ಮೇಕಿಂಗ್ ಅಷ್ಟೇ ತಿಳ್ಕೊಳ್ಳೋದಲ್ಲ ಅದರ ಮೂಲಕ ನಾವು ಯಾವುದೋ ಒಂದು ಜನಜೀವನವನ್ನ ಅರ್ಥ ಮಾಡ್ಕೊತೀವಿ ವಾಸ್ತವನ್ನ ಅರ್ಥ ಮಾಡ್ಕೊತಾ ಇರ್ತೀವಿ ಬೊಲಿವಿಯ ಸಿನಿಮಾ, ಘಾನ ಸಿನಿಮಾ ಚಿಲಿ ಸಿನಿಮಾ ನಮಗೆ ಇದರ ದೇಶದ ಸುಮಾರಷ್ಟು ಗೊತ್ತಿರೋದಿಲ್ಲ ಆದ್ದರಿಂದ ಅದನ್ನ ನೋಡೋಣ ಇನ್ನೊಂದು ಸಲ ನನಗೆ ನೆನಪಿದೆ ಒಂದು ಬೋರ್ಕಿನೋಫಾಸೋದಿ ಒಂದು ಸಿನಿಮಾ ಬಂದಿತ್ತು ರಾಮಚಂದ್ರ ಎದ್ದು ಬಿದ್ದು ಓಡಬಂದರು ಯಾಕೆಂತಂದ್ರೆ ನನಗೆ ದೇಶದ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ ಅದರಿಂದ ಸಿನಿಮಾ ನೋಡೋಣ ಅಂತ ಹೇಳಿ ಸೊ ಅದು ಅವರ ಆಟಿಟ್ಯೂಡ್ ಕೂಡ ಆಗಿತ್ತು ಹಾಗಾಗಿ
00:20:03
ಅವರ ಆಯ್ಕೆ ಮಾಡೋದೆ ಬಹಳ ಅನ್ ಯೂಶ್ಯುಯಲ್ ಫಿಲ್ಮ್ಸ್ ಆಗ್ತಿತ್ತು ಎಡಿಟ್ ಕಂಟ್ರಿ ಟೋಟಲಿ ಡಿಫರೆಂಟ್ ರಾಮಚಂದ್ರ ಅವರ ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳು ಎಂಬುದು ಅವರ ಹೆಗ್ಗಳಿಕೆ ಸದಭಿರುಚಿಯ ಚಿತ್ರಗಳೆಂದರೆ ಅಲ್ಲಿ ಎಸ್ ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಮನೆ ಆಕ್ರಮಣ ಕ್ರೌರ್ಯ ಹಸೀನ, ನಾಯಿ ನೆರಳು, ಗುಲಾಬಿ ಟಾಕೀಸ್ ಗಳಲ್ಲದೆ ಬಿವಿ ಕಾರಂತರ ಚೋಮನದುಡಿ, ಟಿಎಸ್ ನಾಗಾಭರಣರ ಗ್ರಹಣ, ಸಂತ ಶಿಶುನಾಳ ಶರೀಫ, ಪಿ ಶೇಷಾದ್ರಿ ಅವರ ಬೇರು, ವಿಮುಕ್ತಿ, ಪಿ ಲಂಕೇಶರ ಪಲ್ಲವಿ, ಕವಿತಾ ಲಂಕೇಶರ ದೇವೀರಿ, ರೂಪ ಅಯ್ಯರ್ ಅವರ ಮುಖಪುಟ ಹಾಗೂ ಅನ್ವೇಷಣೆ, ಕಂಕಣಗಳಂತಹ
00:20:53
ಕಲಾತ್ಮಕ ಚಿತ್ರಗಳಲ್ಲದೆ ಹುಲಿ ಹೆಬ್ಬುಲಿ, ಹೊಂಬಿಸಿಲು, ಬಂಗಾರದ ಜಿಂಕೆ, ಪರಸಂಗದ ಗೆಂಡೆತಿಮ್ಮ ಮುದುಡಿದ ತಾವರೆ ಅರಳಿತು ಅಂತಹ ಕಮರ್ಷಿಯಲ್ ಚಿತ್ರಗಳು ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ ರಾಮದಾಸ್ ನಾಯ್ಡು ನಿರ್ದೇಶನದ ಹೆಜ್ಜೆಗಳು ರಾಮಚಂದ್ರ ಅವರ ಕ್ಯಾಮೆರಾ ಹಿಡಿದ ಕೊನೆಯ ಚಿತ್ರ ದೈಹಿಕ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕನ್ನಡ ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆ ಅನನ್ಯ [ಶ್ರೀಕಾಂತ್] ನಿಜವಾಗಲೂ ನನಗೆ ಅವರ ಜೊತೆ ವರ್ಕ್ ಮಾಡ್ತಾ ಇರಬೇಕಾದ್ರೆ ಅಥವಾ ಅವರ ಜೊತೆ ಫಸ್ಟ್ ಟೈಮ್ ಜಾಯಿನ್ ಜಾಯಿನ್ ಆದಾಗ ಸೋ ಇಂತವರ ಜೊತೆ ಇದ್ದೀವಿ ಅಂತ ನನಗೆ ಅನಿಸ್ತಾನೆ ಇರ್ಲಿಲ್ಲ ಸೋ
00:21:34
ಅವರು ಅವರನ್ನ ಕಳ್ಕೊಂದಡ್ ನಮ್ಮನ್ನ ಬಿಟ್ಟು ಹೋದ ನಂತರನೇ ಇಂತ ಮಹಾನ್ ವ್ಯಕ್ತಿ ಜೊತೆ ನಾನು ಇದ್ನ ಅಂತ ನನಗೆ ಫೀಲ್ ಆಯ್ತು. ಬಹುಶಃ ನನ್ನ ಅದೃಷ್ಟ ಅನ್ಸುತ್ತೆ ಅವರ ಜೊತೆ ಕೆಲಸ ಅವರ ಜೊತೆ ಕೆಲಸ ಮಾಡ್ತಾ ಇದ್ದಿದ್ದರಿಂದಾನೆ ಎಂತೆಂತ ಮಹಾನ್ ನಿರ್ದೇಶಕರ ಜೊತೆ ಕೆಲಸ ಮಾಡಿದ್ದ ಅಂದ್ರೆ ಉದಾಹರಣೆಗೆ ಗಿರೀಶ್ ಕಾಸರವಳ್ಳಿ ಸರ್ ಆಗಬಹುದು ಪಿ ಶೇಷಾದ್ರಿ ಸರ್ ಆಗಬಹುದು ಜಿವಿ ಅಯ್ಯರ್ ಅವರು ಆಗಬಹುದು ಆಮೇಲೆ ಬಿ ಸುರೇಶ್ ಇಂತ ಮಹಾನ್ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದ ಅದೃಷ್ಟ ಕೂಡ ನನಗಿದೆ ಸೋ ಅದೆಲ್ಲದಕ್ಕೂ ಅವರೇ ಮೂಲ ಪ್ರೇರಣೆ ಮತ್ತೆ ಅವರೇ ಅವಕಾಶ ಕೊಟ್ಟಿದ್ದು ಅಂತ ಹೇಳಕೆ ಇಷ್ಟ ಪಡ್ತೀನಿ.[ಗಿರೀಶ್ ಕಾಸರವಳ್ಳಿ] ಆ ಥರದ ಛಾಯಾಗ್ರಾಹಕರು ಬರಬಹುದೇನೋ ಆದರೆ ಆತರ ಪೂರ್ಣವಾಗಿ ತನ್ನ ತನ್ನನ್ನ ತಾನು ಏನೋ ಒಂದು

00:22:10
ಸಿನಿಮಾದಲ್ಲಿ ತೊಡಗಿಸಿಕೊಳ್ಳು ಬರೋದು ಬಹಳ ಕಷ್ಟ ಯಾಕೆಂದ್ರೆ ನಾನು ಮುಂಚೆನೆ ಹೇಳಿದ ಹಾಗೆ ಅವರು ಬರೀ ಛಾಯಾಗ್ರಾಹಕರಾಗಿ ಒಂದು ತಂಡದಲ್ಲಿ ಸೇರಕೊತಾ ಇರಲಿಲ್ಲ ಅವರ ಕೆಲಸ ಛಾಯಾಗ್ರಹಣ ಆದರೂ ಕೂಡ ಎಲ್ಲದರಲ್ಲೂ ಅವರು ಇಷ್ಟಪಟ್ಟರೆ ಎಲ್ಲದಲೂ ಸಲಹೆ ಕೊಡೋರು ಅದರಲ್ಲಿ ತೊಡಸಿಕೊಳ್ಳೋರು ಬೇಡ ಅಂತಂದ್ರೆ ಇಲ್ಲ ಇಷ್ಟ ಇರ್ತೇನೆ ಅಲ್ಲೂ ನಾನು ಒಂದು ಇದನ್ನ ವ್ಯತ್ಯಾಸವನ್ನ ಗಮನಿಸಿದ್ದೇನೆ ಈ ಕಡಿಮೆ ಬಜೆಟ್ಟಿನ ಸಿನಿಮಾ ಇರತಲ್ಲ ಅಲ್ಪ ಬಜೆಟಿನ ಸಿನಿಮಾ ಅದರಲ್ಲಿ ತಮ್ಮನ್ನ ಪೂರ್ಣ ತೊಳಸಿಕೊಳ್ಳಬೇಕು ಯಾಕಂತಂದ್ರೆ ಹೇಗಾದ್ರೂ ಮಾಡಿ ಬಜೆಟ್ ಒಳಗೆ ಸಿನಿಮಾ ನೋಡಿಸಬೇಕು ಅದೇ ಸುಮಾರು ಅಷ್ಟು ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ ಬಿಗ್ ಬಜೆಟ್ ಸಿನಿಮಾ ಅದರ ಅವರು
00:22:50
ತೊಡಗಿಸಿಕೊಳ್ತಾ ಇರಲಿಲ್ಲ ನನ್ನ ಕೆಲಸ ನನ್ನ ಛಾಯಾಗ್ರಹಣ ಛಾಯಾಗ್ರಹಣ ಸುಮ್ಮನೆ ಕೂತ್ಕೊತೀನಿ ಅವರ ಕಣ್ಣೆದರೆ ಆಗ್ತಾ ಇದ್ರೂ ಕೂಡ ಹೇಳ್ತಾ ಇರಲಿಲ್ಲ ಇಲ್ಲಿ ಇಲ್ಲಿ ಆಥರ ನಡೆಯಲ್ಲ ಅದನ್ನ ನಾನು ಹೇಳಲ್ಲ ಕೊನೆಗೆ ಅದಕ್ಕೆ ಪ್ರವೇಶ ಅವರು ಹೆಚ್ಚು ಈತರದ ಸಿನಿಮಾಗಳಲ್ಲೇ ತೊಡಗಿಸಿಕೊಂಡಿದ್ರು ಯಾಕಂತಂದ್ರೆ ಅದು ಬರಿ ಛಾಯಾಗ್ರಾಹಕರಾಗಿ ದುಡಿತಾ ಇರ್ಲಿಲ್ಲ ಒಂದು ಸಿನಿಮಾದ ವ್ಯಕ್ತಿಯಾಗಿ ದುಡಿತಾ ಇದ್ದರು ಅವರಿಗೆ ತೃಪ್ತಿ ಜಾಸ್ತಿ ಕೊಡ್ತಾ ಇತ್ತು ಆ ತರ ಕೆಲಸ ಮಾಡೋರು ಕಮ್ಮಿ ಜನ ನೋಡಿ ಇಲ್ಲೇ ಇಲ್ಲ ಅಂತಲ್ಲ ಹೊಸ ಕೆಲವು ಕ್ಯಾಮೆರಾಮ್ಯಾನ್ ಗಳು ಆತರ ಮಾಡ್ತಾರೆ ಆದರೆ ಈ ಶೈಲಿ ಮತ್ತು ಆತರದ ತೊಡಗಿಸಿಕೊಳ್ಳುವಿಕೆ ಗೊತ್ತಿಲ್ಲ ಯಾರು ಮಾಡ್ತಾರೆ
00:23:35
[ಪಿ ಶೇಷಾದ್ರಿ] ನಾನು ಹೇಳ್ತಿದ್ದೆ ಯಾವಾಗಲೂ ಎಸ್ ರಾಮಚಂದ್ರ ಅಂತ ಹೆಸರು ಇಟ್ಕೊಂ ನೀವು ಎಸ್ ಅಂದ್ರೆ ವೈ ಇ ಎಸ್ ಅಂತ ಆ ಎಸ್ ಬದಲು ನೋ ಅಂತ ಇಟ್ಟಕೊಂಡಿದ್ರೆ ಚೆನ್ನಾಗಿರುತ್ತೆ ಕೊನೆಗೂ ಎಸ್ ಅಂಕೊಂಡೆ ಹೋಗ್ಬಿಟ್ರು ಯಾವುದಕ್ಕೂ ಈ ನೋ ಅಂತಿರಲ್ಲ ಶೂಟಿಂಗ್ ಇದೆ ಅವ ಮಾಡೋಣ ದುಡ್ಡಿಲ್ಲ ಶೂಟಿಂಗ್ಗೆ ಪರವಾಗಿಲ್ಲ ಮಾಡೋಣ ಲೈಟ್ಸ್ ಇಲ್ಲ ಶೂಟಿಂಗ್ಗೆ ಪರವಾಗಿಲ್ಲ ಮಾಡೋಣ ಅಂತ ಎಲ್ಲದಕ್ಕೂ ಎಸ್ ಎಸ್ ಎಸ್ ಅಂತ ಇದ್ದರು ನೋ ಅಂತ ಹೇಳಲಿಲ್ಲ ಹಾಗೆ ಹೊಟ್ಟರು ಹಾಗಾಗಿ ಅವರು ಹೋದ ರೀತಿ ಇದೆಯಲ್ಲ ನಮಗೆ ನಿಜವಾಗಿಯೂ ದೊಡ್ಡ ನಮ್ಮ ಮನಸ್ಸನ್ನ ಕಲಕಿದ ರೀತಿ ಇತ್ತೀಚಿನ ವರ್ಷಗಳಲ್ಲಿ ನಮ್ಮ ತಂದೆಯನ್ನು ಕಳೆಕೊಂಡಿದ್ದೀನಿ ಬೇರೆಬೇರೆ ಹತ್ತಿರದ ಬಂಧು ಬಾಂಧವರನ್ನ ಕಳೆದುಕೊಂಡಿದ್ದೀವಿ ಆದರೆ ಇವರನ್ನ
00:24:08
ಕಳೆಕೊಂಡಾಗ ಯಾಕೋ ಒಂದು ವಿಚಿತ್ರವಾದ ವ್ಯಾಕ್ಯೂಮ್ ಕ್ರಿಯೇಟ್ ಆಯ್ತು ಪ್ರತಿ ಭಾನುವಾರ ಸಂಜೆ ಸೇರ್ತಾ ಇದ್ವಿ ಪ್ರತಿ ಭಾನುವಾರ ಸಂಜೆ ಕೂತ್ಕೊಂಡು ಚರ್ಚಾ ಕೂಟದಲ್ಲಿ ಸೇರ್ತಾ ಇದ್ವಿ ಒಂದು ಮಾತಾಡ್ತಾ ಇದ್ವಿ ಚಿತ್ರಗಳ ಬಗ್ಗೆ ಹಲವಾರು ವೈಯಕ್ತಿಕ ವಿಚಾರಗಳನ್ನ ಬದುಕಿನ ವಿಚಾರಗಳನ್ನ ವ್ಯಕ್ತಿಗಳ ವಿಚಾರವನ್ನ ಇವರು ತಾವು ಶಿವರಾಮ ಕಾರಂತರ ಜೊತೆ ಕೆಲಸ ಮಾಡಿದ್ದನೆಲ್ಲ ನಮ್ಮ ಜೊತೆ ಹಂಚಿಕೊಳ್ಳುದು ಸಿನಿಮಾಗಳ ಅನುಭವವನ್ನು ಹಂಚಿಕೊಳ್ಳಬಹುದು ಯಾಕೆಂದ್ರೆ ಅವರು 75ರಿಂದ 80 ಚಿತ್ರಗಳಲ್ಲಿ ಕೆಲಸ ಮಾಡಿದಂತ ಅನುಭವ ಬಹಳ ದೊಡ್ಡದು ಮತ್ತೆ ಯಾವುದೇ ತಾಂತ್ರಿಕವಾದ ವಿಚಾರ ಬೇಕು ಅಂದ್ರೆ ನಾನ ಅವರಿಗೆ ತಕ್ಷಣ ಫೋನ್ ಮಾಡಿ ಹೇಳ್ತಿದ್ದೆ ನಾನು ಮೊನ್ನೆ ಕೇಳ್ತಾ ಇದ್ದೆ
00:24:41
ಡಿಟಿಎಸ್ ನನ್ನ ಸಿನಿಮಾ ಡಿಟಿಎಸ್ ಮಾಡಿಸಬೇಕು ಅಂದಾಗ ಡಿಟಿಎಸ್ ಗೂ ಡಾಲ್ಬಿಗೂ ಏನು ವ್ಯತ್ಯಾಸ ನೋಡಿ ಹೇಳಿ ಅಂತ ಇಮ್ಮಿಡಿಯಟ್ ಅವರ ಮನೆಯಲ್ಲಿ ಇಂಟರ್ನೆಟ್ ಅಲ್ಲಿ ಕೂತ್ಕೊಂಡು ಡಿಟಿಎಸ್ ಅಂದ್ರೆ ಏನು ಡಾಲ್ಬಿ ಅಂದ್ರೆ ಏನು ಅಂದ್ರೆ ಅಷ್ಟು ಪಟ್ಟಿ ತಯಾರಿಸಿಬಿಟ್ಟು ಒಂದು ಕಾಲಂ ಹಾಕಬಿಟ್ಟು ನನಗೆ ಮೇಲ್ ಮಾಡಿದ್ರು ಅನಲಾಗ್ ಅಂದ್ರೆ ಎಲ್ಲ ಯಾವುದೇ ವಿಚಾರ ಬೇಕು ಅಂದ್ರೆ ರಾಮಚಂದ್ರ ಕೇಳಿದ್ರೆ ಅವರ ಹತ್ರ ಒಂತರ ಭಂಡಾರ ವಿಶ್ವಕೋಶ ಅಂತ ಹೇಳ್ತಿವಲ್ಲ ಹಾಗೆ ಆತರದ ಭಂಡಾರ ಇದೆ ಅವರ ಅನುಭವ ಬಹಳ ದೊಡ್ಡದು ಆ ವಿಚಾರ ಆ ಬಳಸಿಕೊಳ್ತು ನಮ್ಮ ಚಿತ್ರಂಗ ಇನ್ನು ಹೆಚ್ಚು ಬಳಸಿಕೊಬೇಕಾಗಿತ್ತು ಅವರು ಇನ್ನು ಹೆಚ್ಚು ಇದ್ದಿದ್ರೆ ಇಂತ ಚಿತ್ರಗಳ ಸಂಖ್ಯೆ
00:25:12
ಹೆಚ್ಚಾಗ್ತಿತ್ತು ಅವರ ನೆರವು ಈ ಚಿತ್ರಗಳಿಗೆ ದೊರಕುತಾ ಇತ್ತು ಅದನ್ನ ನಾವು ಕಳೆದುಕೊಂಡಿವಿ ಅನ್ನೋದು ದೊಡ್ಡ ವಿಷಾದ. [ಹಿನ್ನೆಲೆ ಧ್ವನಿ] ಕಲಾತ್ಮಕತೆಯ ಹಸಿವಿದ್ದ ಅವರ ಕಣ್ಣುಗಳಿಗೆ ಇಹಲೋಕದ ದೃಶ್ಯಗಳು ಸಾಕಾಗಿರಲಿಲ್ಲವೋ ಏನೋ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಜನವರಿ 10 2011 ರಂದು ವಿಧಿವಶರಾದರು ಪತ್ನಿ ಮೀನಾಕ್ಷಿ ಇಬ್ಬರು ಪುತ್ರಿಯರಾದ ಚೈತ್ರ ಮತ್ತು ವರ್ಷ ಸೇರಿದಂತೆ ಅಪಾರ ಬಂಧುಮಿತ್ರರು ಹಾಗೂ ಶಿಷ್ಯವೃಂದವನ್ನು ಅಗಲಿದ ರಾಮಚಂದ್ರರು ಬಾರದ ಲೋಕಕ್ಕೆ ತಮ್ಮ ಪ್ರಯಾಣ ಬೆಳೆಸಿದರು.
