ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು
ರಾಷ್ಟ್ರಕವಿ ಎನಿಸಿ ಸಕಲ ಗೌರವಾದರಗಳನ್ನು ಪಡೆದರೂ ಸರಳ ಸಜ್ಜನ ವ್ಯಕ್ತಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಬೆಳಗುತ್ತಿದ್ದಾರೆ.

ಯುವ ಪ್ರತಿಭೆಗಳು ಸದಾಕಾಲ ಬೆಂಬಲಿಸುತ್ತಿದ್ದ ಶಿವರುದ್ರಪ್ಪ ಅವರ ಮೆಚ್ಚಿನ ಹತ್ತು ಕವನಗಳು ಯಾವುದು ಎಂಬ ಪ್ರಶ್ನೆಗಳನ್ನು ನಾನು ಕೇಳಿದಾಗ ಶಿವರುದ್ರಪ್ಪ ಅವರು ಮೊದಲಿಗೆ ಹೇಳಿದ್ದು ಗುರುಗಳಾದ ಕುವೆಂಪು ವಿರಚಿತ ‘ದೇವರು ರುಜು ಮಾಡಿದನು’. ಇದರ ಜೊತೆಗೆ ಟಾಪ್ ಕವನಗಳ ಪಟ್ಟಿ ಕೂಡಾ ಇದೆ ನೋಡಿ.
1. ದೇವರು ರುಜು ಮಾಡಿದನು – ಕುವೆಂಪು
2. ಕುರುಡು ಕಾಂಚಾಣ – ದ.ರಾ.ಬೇಂದ್ರೆ
3. ಪ್ರತೀಕ್ಷೆ – ಪು.ತಿ.ನರಸಿಂಹಾಚಾರ್
4. ಅವ್ವ – ಪಿ.ಲಂಕೇಶ್
5. ಸಣ್ಣ ಸಂಗತಿ (ಸಾನೆಟ್) – ಕೆ.ಎಸ್.ನರಸಿಂಹ ಸ್ವಾಮಿ
6. ಏಳು ಸುತ್ತಿನ ಕೋಟೆ – ಬಿ.ಸಿ.ರಾಮಚಂದ್ರ ಶರ್ಮ
7. ಚಿಂತಾಮಣಿಯಲ್ಲಿ ಕಂಡ ಮುಖ – ಗೋಪಾಲ ಕೃಷ್ಣ ಅಡಿಗ
8. ಇಬ್ಬರು ರೈತರು – ಸು.ರಂ.ಎಕ್ಕುಂಡಿ
9. ಲಾಲ್ ಬಹದ್ದೂರು – ಚೆನ್ನವೀರಕಣವಿ
10. ರಾಮನ್ ಸತ್ತ ಸುದ್ದಿ – ಕೆ.ಎಸ್.ನಿಸಾರ್ ಅಹಮದ್