ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ | Introduction to Vachana Sanchaya Website

Om Shivaprakash

ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ

ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ.
Om Shivaprakash
ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ.ಓ.ಎಲ್ ನಾಗಭೂಷಣ, ತಂತ್ರಜ್ಞ, ಸಾಹಿತಿ ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ದೇವರಾಜ್ ಕೆ, ಓಂ ಶಿವಪ್ರಕಾಶ್ ಹಾಗೂ ಪವಿತ್ರ ಹಂಚಗಯ್ಯ ಅವರು ಈ ಮುಕ್ತ ವಚನ ತಾಣ ನಿರ್ಮಿಸಿದ್ದಾರೆ. ಈ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲಿ ವರದಿ [ಓದಿ]

ವಚನ ಸಂಚಯ

ಈ ವಚನ ಸಂಗ್ರಹದಲ್ಲಿ 218 ಪುರುಷ ವಚನಕಾರರು, 31 ಸ್ತ್ರೀ ವಚನಕಾರ್ತಿಯರೂ ಒಳಗೊಂಡಂತೆ ಒಟ್ಟು 249 ವಚನಕಾರರ, 20929ಕ್ಕೂ ಹೆಚ್ಚು ವಚನಗಳಿವೆ. ವಚನಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 209876 ಕೂ ಹೆಚ್ಚು. ಈ ತಂತ್ರಾಂಶ ವಚನದಲ್ಲಿನ ಪದಗಳನ್ನು ಆಯಾ ವಚನ ಮತ್ತು ವಚನಕಾರರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.

ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. ೧೧ನೇ ಶತಮಾನದಲ್ಲಿ ಉದಯಿಸಿ ೧೨ನೇ ಶತಮಾನದವರೆಗೂ ಲಿಂಗಾಯತರ ಆಂದೋಲನ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ ‘ಪ್ರಮಾಣ’ ಎಂದರ್ಥ ಎಂದು ವಚನ ಸಂಚಯ.ನೆಟ್ ವೆಬ್ ಪುಟದಲ್ಲಿ ಪ್ರಸ್ತಾವನೆ ನೀಡಲಾಗಿದೆ.

ಮುಖಪುಟದಲ್ಲಿರುವ ಹುಡುಕಾಟ ಪೆಟ್ಟಿಗೆಯಲ್ಲಿ ಪದವನ್ನು ನಮೂದಿಸಿ. ನಿಮಗೆ ಬೇಕಾದ ಪದವನ್ನು ಹುಡುಕಲು ನಿಖರ ಹುಡುಕಾಟ ಅಥವಾ ಅಂದಾಜು ಹುಡುಕಾಟವನ್ನು ಬಳಸಬಹುದು. ಫಲಿತಾಂಶಗಳನ್ನು ವಚನಕಾರರ ಆಯ್ಕೆಯಿಂದ ಶೋಧಿಸಬಹುದು. ವಚನ ಸಂಚಯ ಬಳಕೆ ಮಾರ್ಗದರ್ಶಿ ಪುಟಕ್ಕೆ ತಪ್ಪದೇ ಭೇಟಿ ನೀಡಿ

Leave a Reply

Your email address will not be published. Required fields are marked *