ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗತ್ಯವೂ ಬೇಕು.
-ಮಲೆನಾಡಿಗ
ಕನ್ನಡಿಗ/Indian/Coffee lover/Traveller/Trekker
ಕರ್ನಾಟಕತ್ವವೆಂದರೆ ಕೇವಲ ಭಾಷಾಭಿಮಾನವಲ್ಲ, ಕೇವಲ ದೇಶಾಭಿಮಾನವಲ್ಲ. ಇವೆಲ್ಲವುಗಳನ್ನೂ ಮೀರಿದ, ಇವೆಲ್ಲವುಗಳನ್ನೂ ಒಳಗೊಂಡ ಪರಿಶುದ್ಧ ಭಾವನೆ
-ಆಲೂರ ವೆಂಕಟರಾಯ

ಮನುಜಲೋಕವಿಕಾರಗಳನು ನೀನಳಿಸುವೊಡೆ ।
ಮನಕೊಂದು ದರ್ಪಣವ ನಿರವಿಸೆಂತಾನುಂ ॥
ಅನುಭವಿಪರವರಂದು ತಮ್ಮಂತರಂಗಗಳ ।
ಅನುಪಮಾಸಹ್ಯಗಳ – ಮಂಕುತಿಮ್ಮ ॥ ೧೯೬ ॥
© maheshmalnad.com