ವಿಮರ್ಶೆ : ಪಿ ಶೇಷಾದ್ರಿ ನಿರ್ದೇಶನದ ‘ಮೂಕಜ್ಜಿ ಕನಸುಗಳು’

ಬಹುಶಃ ಮೂಕಜ್ಜಿಯ ಕಥೆಯನ್ನು ಡಾ. ಕೆ ಶಿವರಾಮ ಕಾರಂತರು ಅಂದಿನ ಕಾಲಘಟ್ಟಕ್ಕೆ ಮಾತ್ರ ಸರಿಹೊಂದುವಂತೆ ಬರೆದಿದ್ದು ಎಂದರೆ ತಪ್ಪಾಗುತ್ತದೆ. ಮೂಕಜ್ಜಿಯ ವಿಸ್ಮಯ ಕಥಾಹಂದರವನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿ ತೋರಿಸುವುದು ಕಷ್ಟದ ಕೆಲಸವೇ ಸರಿ.

ಆದರೆ, ಇಂಥದ್ದೊಂದು ಪ್ರಯತ್ನವನ್ನು ಎಂಟು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಅವರು ಮಾಡಿದ್ದಾರೆ. ಮೂಕಜ್ಜಿ ಮಾತನಾಡುವ ಪ್ರತಿ ವಿಷಯವೂ ನಮ್ಮ ಮನಸ್ಸಿನ ಎಂದಾದರೂ ಹಾದು ಹೋದ ಪ್ರಶ್ನೆಗಳೇ ಎಂದು ಅನಿಸಿಬಿಡುತ್ತವೆ. ಹೀಗಾಗಿ, ಇದು ಪ್ರತಿ ವೀಕ್ಷಕನನ್ನು ಸ್ವವಿಮರ್ಶೆಯ ಒಳಪಡಿಸುವ ಚಿತ್ರ ಎನ್ನಬಹುದು.

ವಿವಿಧ ಯುಗಗಳ ನಾಗರೀಕತೆಯ ಸ್ಥೂಲ ಪರಿಚಯ, ಸೃಷ್ಟಿ, ಸ್ಥಿತಿ, ಲಯಗಳ ಅರ್ಥ, ಅವತಾರ, ಪುನರ್ಜನ್ಮ, ಜೀವನ ನಿರ್ವಹಣೆ, ಸಂಬಂಧಗಳು, ಬೆಸುಗೆ, ಅಗಲಿಕೆ, ನೋವು ನಲಿವು, ನಿರಂತರ ಹುಡುಕಾಟದ ಫಲವೇ ಕನಸುಗಳು, ಅಜ್ಜಿಯ ಬಾಯಲ್ಲಿ ಆಡಿದ ಮಾತುಗಳು. ಚಿತ್ರದ ಬಗ್ಗೆ ಇನ್ನಷ್ಟು ಮುಂದೆ ಓದಿ…

Leave a Reply

Your email address will not be published. Required fields are marked *