ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ-Kota Shivarama Karanth-Walking Encyclopedia

ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದವರು ಕೋಟ ಶಿವರಾಮ ಕಾರಂತರು. ಕಾರಂತರ ಆಸಕ್ತಿ ವಿಷಯಗಳಲ್ಲಿ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಪಟ್ಟಿ ಬೆಳೆಯುತ್ತದೆ.

ಒಬ್ಬ ವ್ಯಕ್ತಿ ತನ್ನ ಜೀವತಾವಧಿಯಲ್ಲಿ ಇಷ್ಟೆಲ್ಲ ಅಭಿರುಚಿಗಳನ್ನು ಮೈಗೂಡಿಸಿಕೊಂಡು ‘ದೇಶ ಸುತ್ತು, ಕೋಶ ಓದು’ ಎಂಬುದಕ್ಕೆ ನಿದರ್ಶನದಂತೆ ಬದುಕಿದ್ದು ನಿಜಕ್ಕೂ ವಿಸ್ಮಯ.

ಮೊದಲಿಗೆ ಕಾರಂತರ ಕೃತಿಗಳಲ್ಲಿ ‘ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’, ಪ್ರಾಣಿ ಪ್ರಪಂಚ ಇಷ್ಟವಾಯಿತು. ಆ ಕಾಲದಲ್ಲೇ ಸರಳವಾಗಿ ಸಚಿತ್ರ ವಿವರಣೆ ನೀಡಿ ವಿವರಿಸಿದ್ದು ಹೇಗೆ ಎಂಬುದು ಇಂದಿಗೂ ಅಚ್ಚರಿಯ ವಿಷಯ. ಸಿರಿಗನ್ನಡ ಅರ್ಥಕೋಶವಿರಬಹುದು, ಶೈಕ್ಷಣಿಕ ವಿಷಯವಾಗಿ ಬರೆದಿರುವ ಕೃತಿಗಳಿರಬಹುದು ಇಂದಿಗೂ ಬಹು ಉಪಯುಕ್ತವಾಗಿವೆ.

ಕಾರಂತಜ್ಜನಿಗೆ ನುಡಿ ನಮನ ಇಲ್ಲಿದೆ ಓದಿ

Leave a Reply

Your email address will not be published. Required fields are marked *