ಕತ್ತಲೆಯನು ದೂರಾಗಿಸಲು
ಹಣತೆಯ ಹಿಡಿ ಬೆಳಕು ಸಾಕು
ಜಡತೆಯನ್ನು ದೂರಾಗಿಸಲು
ಮತಾಪಿನ ಶಬ್ದ ಸಾಕು
ಮನದ ಕಹಿಯ ದೂರಾಗಿಸಲು
ಸಿಹಿ ತುಣುಕು ಸಾಕು
ಇವೆಲ್ಲವ ಆನಂದಿಸಿ, ಅನುಭವಿಸಲು
ನಿಮ್ಮಂತಹ ಗೆಳೆಯ/ಗೆಳತಿಯರ
ಸಾಂಗತ್ಯವೂ ಬೇಕು.
-ಮಲೆನಾಡಿಗ
ಕನ್ನಡಿಗ/Indian/Coffee lover/Traveller/Trekker
ಚಲನೆಯೇ ಚೇತನದ ಚಿಹ್ನೆ
-ಕುವೆಂಪು

ಆವ ಬೇಳೆಯದಾವ ನೀರಿನಲಿ ಬೇಯುವುದೊ! ।
ಆವ ಜೀವದ ಪಾಕವಾವ ತಾಪದಿನೋ! ॥
ಆ ವಿವರವನು ಕಾಣದಾಕ್ಷೇಪಣೆಯದೇನು? ।
ದೈವಗುಟ್ಟದು ತಿಳಿಯೆ – ಮಂಕುತಿಮ್ಮ ॥ ೧೬೦ ॥
© maheshmalnad.com