32. ನನ್ನ ಪರಮ ಮಿತ್ರರಾಗಿದ್ದ ದಿವಂಗತ ಬಿ. ಎಸ್ ತುಂಗ–ಇವರಿಗೆ
-ಅಳಿದ ಮೇಲೆ (ಕಾದಂಬರಿ)
-ಡಾ. ಶಿವರಾಮ ಕಾರಂತ
33. ಜನನ ಕಾರಣರಾಗಿ ಪಿತೃದೇವತೆಯೂ
ಗಾಯತ್ರೀ ಉಪದೇಶ ಕಾರಣದಿಂದ ಪ್ರಥಮ ಗುರುವೂ
ಆಗಿ
ಅಕ್ಕರೆಯಲ್ಲಿ ತಾಯಿ ತಂದೆ ಎರಡೂ ಆಗಿ ಸಾಕಿ ಬೆಳೆಸಿದ
ನನ್ನ ತಂದೆ
ಪೂಜ್ಯ ತ. ಸು. ರಾಮಸ್ವಾಮಯ್ಯನವರ
ಪರಮ ಪವಿತ್ರ ಚರಣಾರವಿಂದಗಳಲ್ಲಿ
ಅರ್ಪಿತವಾಗಿದೆ.
-ಸಿಡಿಲ ಮೊಗ್ಗು (ಕಾದಂಬರಿ)
-ತ. ರಾ. ಸು
34. ಎನ್ನ ಮನ ಮನೆಗಳಿಗೆ ಬೆಳಕಾಗಿ ನೀ ಬಂದು
ಸಾಹಿತ್ಯ ಜೀವನಕ್ಕುಸಿರಾಗಿ ನಿಂದು
ಸಾವಿತ್ರಿನಾಮನ್ವರ್ಥಮಾಯ್ತಿಂದು
ಮೆಚ್ಚು ನಿನಗೀ ಕೃತಿಯು ಧನ್ಯನಹೆನಾಂ ಸಂದು
-ಅನ್ನಾ ಕರೆನಿನ (ಕಾದಂಬರಿ)
-ಲಿಯೋ ಟಾಲ್ಸ್ ಟಾಯ್ (ಅನುವಾದ: ದೇಜಗೌ)
35. ಅನುಪಮಾ
ತೇಜಸ್ವಿನಿ-ಸೀಮಂತಿನೀ
ಇವರಿಗೆ
-ಮೃತ್ಯುಂಜಯ (ಕಾದಂಬರಿ)
-ನಿರಂಜನ
36. ಬಹುಶ್ರುತ ವಿದ್ವಾಂಸರೂ, ಆತ್ಮೀಯರೂ ಆದ
ಡಾ. ಸಿ ಎನ್ ರಾಮಚಂದ್ರನ್ ಅವರಿಗೆ
ಗೌರವಾದರಗಳೊಡನೆ.. ಅರ್ಪಣೆ
-ಹೇಮರೆಡ್ಡಿ ಮಲ್ಲಮ್ಮನ ಕಥೆಯು (ಕಾದಂಬರಿ)
-ಕುಂ ವೀರಭದ್ರಪ್ಪ
37. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ
ಅಧ್ಯಕ್ಷರು ಸನ್ಮಿತ್ರರು ಆದ
ಡಾ ಮನು ಬಳಿಗಾರ್ ಅವರಿಗೆ
ಆದರಾಭಿಮಾನದಿಂದ… ಅರ್ಪಣೆ
-ನಿಜಲಿಂಗ (ಕಾದಂಬರಿ)
–ಕುಂ ವೀರಭದ್ರಪ್ಪ
38. ಹುಬ್ಬಳ್ಳಿ ಶಹರದ ಪ್ರಸಿದ್ಧ ವಕೀಲರೂ
ಪರಮಾಪ್ತರೂ ಆದ
ಸುರೇಶ ಕಿಣಿ
ಅವರಿಗೆ
-ಯಾಪಿಲ್ಲು (ಕಾದಂಬರಿ)
-ಕುಂ ವೀರಭದ್ರಪ್ಪ
39. ನನ್ನ ಪ್ರೀತಿಯ ಪ್ರಾಂತದ ಪ್ರಪ್ರಥಮ ಜನಪರ ಕಲೆಕ್ಟರ್
ಸರ್ ಥಾಮಸ್ ಮನ್ರೋ ಅವರ ದಿವ್ಯ ಸ್ಮರಣೆಗೆ
-ಅರಮನೆ (ಕಾದಂಬರಿ)
-ಕುಂ ವೀರಭದ್ರಪ್ಪ
40. ನನ್ನ ಬದುಕೆಂಬುವ
ಕನ್ನಡಿಯೊಳಗಿನ
ಅಗಣಿತ ಪ್ರತಿಬಿಂಬಗಳಿಗೆ
-ಗಾಂಧಿ ಕ್ಲಾಸು (ಆತ್ಮಕಥನ)
-ಕುಂ ವೀರಭದ್ರಪ್ಪ
41. ಕನ್ನಡದ ಪುಲ್ಲೆನೆಗೆ ಪಾವನದ ಶ್ರೀತುಳಸಿ
ಎಂಬ ಕವಿವಾಣಿಯನ್ನೇ
ತಮ್ಮ ಬಾಳನ್ನು ನಡಸುವ ದೀಪ-ಕುಡಿಯಾಗಿಟ್ಟುಕೊಂಡು
ಹಗಲಿರುಳೂ ಕನ್ನಡ ನಾಡಿನ ಮೇಲ್ಮೆಗೆ ಶ್ರಮಿಸುತ್ತಾ,
ತಮ್ಮ ವೈಯಕ್ತಿಕ ಶೀಲ, ಶುದ್ಧತೆ, ಸಮತೆ, ದೂರದೃಷ್ಟಿಗಳಿಂದ
ರಾಜಕೀಯ ರಂಗದಲ್ಲಿ ದುಡಿಯುವವರೆಲ್ಲರಿಗೂ ಮಾದರಿಯಾಗಿ,
ಚಿತ್ರದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತರ ನಿಲ್ಲಿಸಲು
ತಮ್ಮ ಬಾಳನ್ನೇ ಮೀಸಲಾಗಿರಿಸಿರುವ
ದುರ್ಗದ ಗಂಡುಮೆಟ್ಟಿನ ಧೀರಪುತ್ರ
ನವ ನಿರ್ಮಿತ ಅಖಂಡ ಕರ್ಣಾಟಕದ
ಪ್ರಥಮ ಪ್ರಧಾನ ಮಾತ್ರ
ಪೂಜ್ಯ ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪ
ನವರಿಗೆ ಪ್ರೀತಿ ಪುರಸ್ಸರವಾದ ಕಿರುಕಾಣಿಕೆ
-ವಿಜಯೋತ್ಸವ
-ತ. ರಾ. ಸು
42. ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯವರ್ಯ-
ಪದವಾಕ್ಯಪ್ರಮಾಣಪಾರಾವಾರಪಾರೀಣ-
ಯಮನಿಯಮಾಸನಪ್ರಣಾಯಾಮ,–
ಪ್ರತ್ಯಾಹಾರಧಾರಣಾಧ್ಯಾನ,-
ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ-
ತಪಶ್ಚಕ್ರವರ್ತ್ಯನಾದ್ಯವಿಚ್ಛಿನ್ನ-
ಶ್ರೀಶಂಕರಾಚಾರ್ಯಗುರುಪರಂಪರಾಪ್ರಾಪ್ತ-
ಷಡ್ದರ್ಶನಸ್ಥಾಪನಾಚಾರ್ಯ-
ವ್ಯಾಖ್ಯಾನಸಿಂಹಾಸನಾಧೀಶ್ವರ-
ಸಕಲನಿಗಮಾಗಮಸಾರಹೃದಯ-
ಸಾಂಖ್ಯತ್ರಯಾಪ್ರತಿಪಾದಕ-
ವೈದಿಕಮಾರ್ಗಪ್ರವರ್ತಕ-
ಸರ್ವತಂತ್ರಸ್ವತಂತ್ರಾಧಿರಾಜಧಾನೀ,-
ವಿದ್ಯಾನಗರಮಹಾರಾಜಧಾನೀ,-
ಕರ್ಣಾಟಕಸಿಂಹಾಸನಪ್ರತಿಷ್ಠಾನಾಚಾರ್ಯ-
ಋಷ್ಯಶೃಂಗಪುರವರಾಧೀಶ್ವರ-
ತುಂಗಭದ್ರಾತೀರವಾಸೀ-
ಶ್ರೀಮದ್ವಿದ್ಯಾಶಂಕರಪಾದಪದ್ಮಾರಾಧಕ-
ಶ್ರೀಮಜ್ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀ-
ಗುರುಕರಕಮಲಸಂಜಾತ-
ಶ್ರೀ ಜಗದ್ಗುರು ಶೃಂಗೇರೀ
ಶ್ರೀಮದಭಿನವವಿದ್ಯಾತೀರ್ಥ
ಮಹಾಸ್ವಾಮಿಗಳ
ದಿವ್ಯಚರಣಾರವಿಂದಗಳಲ್ಲಿ
ಭಕ್ತಿಪೂರ್ವಕ ಸಮರ್ಪಣೆ
-ನಾಲ್ಕು X ನಾಲ್ಕು= ಒಂದು (ಕಾದಂಬರಿ)
-ತ. ರಾ. ಸು
43. ನಮಗಾಗಿ ಉತ್ತು, ಬಿತ್ತಿ,
ವಲಸೆ ಹೋದ, ನೇಗಿಲಯೋಗಿ
ಚಿಕ್ಕಪ್ಪನಿಗೆ..ಅರ್ಪಣೆ
-ಶಿಲಾಕುಲ ವಲಸೆ (ಕಾದಂಬರಿ)
-ಡಾ. ಕೆ.ಎನ್ ಗಣೇಶಯ್ಯ
44. ಬದುಕನ್ನೆಲ್ಲ ಅಣ್ಣನ ಕೈಲಿಟ್ಟು
ಕುರಿಗಳಲ್ಲಿಯೇ ಜೀವ ಇಟ್ಟು
‘ತಮ್ಮನೆಂದರೆ ಚೌಡಪ್ಪನಪ್ಪ’
ಎನ್ನುವಂತೆ ಬದುಕಿಹೋದ
ನನ್ನ ಚಿಕ್ಕಪ್ಪನಿಗೆ
-ಮಿಹಿರಾಕುಲ (ಕಥಾ ಸಂಕಲನ)
-ಡಾ. ಕೆ.ಎನ್ ಗಣೇಶಯ್ಯ
45. ಚಿಂತಿಸಲು ಕಲಿಸಿದ
ನನ್ನ ತಂದೆಗೆ,
ನನ್ನದಾಗಿಸಿದ
ನನ್ನೂರು ಕೋಟಿಗಾನಹಳ್ಳಿಗೆ… ಅರ್ಪಣೆ
-ಭಿನ್ನ ಬಿಂಬ (ಲೇಖನಗಳು)
-ಡಾ. ಕೆ.ಎನ್ ಗಣೇಶಯ್ಯ
46. ಚರ್ಚೆಗಳ, ಪ್ರಶ್ನೆಗಳ ದಾರಿಗೆ
ಕೈಹಿಡಿದು ನಡೆಸಿ,
ಉತ್ತರಗಳ ಹುಡುಕಾಟಕ್ಕೆ
ಏಕಾಂಗಿಯಾಗಿಸಿ
ಅಗಲಿದ ನನ್ನ ತಂದೆಗೆ.. ಅರ್ಪಣೆ
-ಮೂಕಧಾತು (ಕಾದಂಬರಿ)
-ಡಾ. ಕೆ.ಎನ್ ಗಣೇಶಯ್ಯ
47. ನಾನು ನಾಲ್ಕೈದು ವರ್ಷದವನಿದ್ದಾಗಲೆ
ತಿರುಪತಿ ಬೆಟ್ಟವನ್ನು ಕೈಹಿಡಿದು ಹತ್ತಿಸಿದ
ಇಂದು ಮರೆಯಾಗಿದ್ದರೂ ನನ್ನ ಕೈಬಿಡದೆ
ಇನ್ನೂ ನಡೆಸುತ್ತಿರುವ ನನ್ನ ತಂದೆಗೆ…ಅರ್ಪಣೆ
-ಸಿಗೀರಿಯ (ನೀಳ್ಗತೆಗಳು)
-ಡಾ. ಕೆ.ಎನ್ ಗಣೇಶಯ್ಯ
48. ಚರ್ಚೆಯ ರುಚಿ
ಉಣಿಸಿದ ನನ್ನ ತಂದೆಗೆ
-ಕಲ್ದವಸಿ (ಕಥಾ ಸಂಕಲನ)
-ಡಾ. ಕೆ.ಎನ್ ಗಣೇಶಯ್ಯ
49. ಕತೆಗಳ ಜೊತೆಗೇ ಬೆಳೆಸಿ
ಕಿವಿಹಿಂಡದೆ, ಕತೆಗಳಿಂದಲೇ ಈ ನನ್ನನ್ನಾಗಿಸಿ
ನನ್ನ ಕತೆ ಕೇಳದೆಯೇ ಕತೆಯಾಗಿಹೋದ
ನನ್ನ ತಂದೆಗೆ
-ಕರಿಸಿರಿಯಾನ (ಕಾದಂಬರಿ)
-ಡಾ. ಕೆ.ಎನ್ ಗಣೇಶಯ್ಯ
50. ಬದುಕಿನುದ್ದಕ್ಕೂ ಇದೇ ನೋವು ಕಂಡ ನನ್ನಮ್ಮನಿಗೆ
-ರಾಜ್ ಲೀಲಾ ವಿನೋದ
-ರವಿ ಬೆಳಗೆರೆ
51. ಮಾತಾ-ಪಿತೃಗಳಾದ
ದಿವಂಗತ ಶ್ರೀ ಎಸ್. ಕರಿಯಪ್ಪ
ದಿವಂಗತ ಶ್ರೀಮತಿ ಗೌರಮ್ಮ
ಇವರ ಪಾದಕಮಲಗಳಿಗೆ
ಈ ಕೃತಿ ಹೃದಯಪೂರ್ವಕವಾಗಿ
ಸಮರ್ಪಿಸುತ್ತಿದ್ದೇನೆ.
-ವೀರಪ್ಪನ್ ಡೆತ್ ವಾರೆಂಟ್
-ಎಸ್. ಕೆ ಉಮೇಶ್
52. ಅಮ್ಮನಂತೆ ಸಲಹುತ್ತಿರುವ
ಸರೋಜಕ್ಕನಿಗೆ
ಅಕ್ಕರೆಯಿಂದ
-ಸಾವಿರ ಕಣ್ಣಿನ ನವಿಲು (ಕಥಾ ಸಂಕಲನ)
-ಚಂದ್ರಶೇಖರ ಆಲೂರು
53. ಬಾಲ್ಯ ಕಟ್ಟಿಕೊಟ್ಟ ಸಂಡೂರಿಗೆ
ಬದುಕು ಕಟ್ಟಿಕೊಟ್ಟ ಬೆಂಗಳೂರಿಗೆ
-ನಮ್ಮಮ್ಮ ಅಂದ್ರೆ ನಂಗಿಷ್ಟ (ಲಲಿತ ಪ್ರಬಂಧ)
-ವಸುಧೇಂದ್ರ
54. ಎಲ್ಲಾ
ಬುಚ್ಚಿಲಕ್ಷ್ಮಿ ಮತ್ತು ಅಪ್ಪದಾಸು ದಂಪತಿಗಳಿಗೆ
-ಮಿಥುನ
-ಶ್ರೀರಮಣ,(ವಸುಧೇಂದ್ರ ಅನುವಾದ)
55. ನನಗೆ ಅನ್ನ ಅನುಭವ,
ವಿದ್ಯೆ ಮತ್ತು ಕನಸು
ಕಟ್ಟಿಕೊಟ್ಟ ನನ್ನ
ಬಳ್ಳಾರಿಯ ನೆಲಕ್ಕೆ
-ಮೈನಿಂಗ್ ಮಾಫಿಯಾ ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
-ರವಿ ಬೆಳಗೆರೆ
56. ಗೌರವಪೂರ್ವಕವಾಗಿ
ನನ್ನ ತಾಯಿ ಶ್ರೀಮತಿ ಕೆ. ಆರ್. ಮಂಜುಳ ರಾಜಗೋಪಾಲ್
ಹಾಗೂ
ತಂದೆಯವರಾದ ಶ್ರೀ ಕೆ.ವಿ ರಾಜಗೋಪಾಲ್
ಮತ್ತು
ನನ್ನ ಎಲ್ಲಾ ಕುಟುಂಬ ವರ್ಗದವರಿಗೆ
ನನ್ನ ಈ ಪ್ರಥಮ ಪ್ರಯತ್ನವನ್ನು ಅರ್ಪಿಸುತ್ತಿದ್ದೇನೆ.
-ಅನಾಮಿಕ
-ರವೀಂದ್ರ ಕೆ.ಆರ್
57. ನಾಟಕ ಮಾಡಿ
ಕೀರ್ತನೆ ಹಾಡಿ
ಕರ್ನಾಟಕ ಏಕೀಕರಣದ
ಕನಸು ಬಿತ್ತಿದ
ಕನ್ನಡಿಗರ
ಮನಸು ಕಟ್ಟಿದ
ಶಾಂತಕವಿಗಳಿಗೆ
ಅವರ
ಸರಸ ಕೋಲಾಹಲದ
ನೆನಪಿಗೆ
-ನಾಟಕ- ಕರ್ನಾಟಕ
-ರಾಮಕೃಷ್ಣ ಮರಾಠೆ
58. ಚಿಕ್ಕಂದಿನಲ್ಲಿ ಪಾಸಾಗಿರೋದನ್ನ ಮಾರ್ಕ್ಸ್ ಕಾರ್ಡ್ ತೋರಿಸಿ ನಿರೂಪಿಸಿದ ನಂತರವಷ್ಟೇ ವರ್ಷಕ್ಕೆ ಒಂದೊಂದೇ ಸಿನಿಮಾ ತೋರಿಸುತ್ತಿದ್ದ ನನ್ನ ತಂದೆ-ತಾಯಿಗೆ
ಮದುವೆ ಮುಂಚೆ ಯಾವ ಕಥೆ ಹೇಳಿದ್ರೂ ಚೆನ್ನಾಗಿದೆ ಅಂತಿದ್ದ ಈಗ ಏನು ಹೇಳಿದ್ರೂ ಯಾರ ಹತ್ರ ಹೇಳ್ತೀ ಕಥೆ ಎನ್ನುವ ನನ್ನ ಹೆಂಡತಿಗೆ
ನಾನು ಕಥೆಗಾರ ಅಂತ ಗುರುತಿಸಿಕೊಂಡಿದ್ದರೂ ರಾತ್ರಿ ಮಲಗುವ ಮುನ್ನ್ ಅಮ್ಮನ ಕಥೆಯೇ ಬೇಕೆನ್ನುವ ನನ್ನ ಮಗಳಿಗೆ
ಕಷ್ಟ-ಸುಖದಲ್ಲಿ ಭಾಗಿಯಾದ ನನ್ನ ಸ್ನೇಹ ಮತ್ತು ಬಂಧು ಸಮೂಹಕ್ಕೆ
ಮುಖ್ಯವಾಗಿ ಕೊಂಡು ಓದುವ ನಿಮಗೆ
ಮತ್ತೂ ಮೊದಲಿಗೆ ನನ್ನ ಕೈ ಹಿಡಿದು ಇದೆಲ್ಲವನ್ನೂ ಬರೆಸಿದ ತಾಯಿ ಶಾರದೆಗೆ…!
-ಡೈರೆಕ್ಟರ್ಸ್ ಸ್ಪೆಷಲ್
-ಗುರುಪ್ರಸಾದ್
59. ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಹೆಗಲು ತಟ್ಟಿ ಸಂತೈಸುವ,
ನಾವಿದ್ದೇವೆ ಹೆದರಬೇಡ ಎಂದು ಧೈರ್ಯ ತುಂಬುವ ಗೆಳೆಯ-ಗೆಳೆತಿಯರು ಎಂಬ ಪ್ರೀತಿಯ ಮನಸ್ಸುಗಳಿಗೆ…
-ಅಪ್ಪ ಅಂದ್ರೆ ಆಕಾಶ
-ಎ. ಆರ್. ಮಣಿಕಾಂತ್
60. ಅಪ್ಪನಂಥ ಧೈರ್ಯದ ಅಮ್ಮನಿಗೆ
ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ
-ಅಮ್ಮ ಹೇಳಿದ ಎಂಟು ಸುಳ್ಳುಗಳು
-ಎ. ಆರ್. ಮಣಿಕಾಂತ್
61. ಬೆವರು, ರಕ್ತ ಬಸಿದು ಎದೆಗೆ ಅಕ್ಷರ ನೀಡಿದ ಅಪ್ಪಯ್ಯ ಕರ್ಕಿ
ಶ್ರೀ ಕೆ.ಎಸ್ ಗೋಪಾಲ ನಾಯ್ಕ ಅವರಿಗೆ
-ಖಾನೇಷುಮಾರಿ
-ಶಿವಾನಂದ ಕರ್ಕಿ
62. ವಿಮರ್ಶಕ, ಚಿಂತಕ, ಮಾರ್ಗದರ್ಶಿ ಇನ್ನಿಲ್ಲವಾದ ಅಣ್ಣ ಎಸ್. ಶ್ರೀಧರಮೂರ್ತಿಗೆ
-ನಾಲ್ಕು ಜನರಿಗೆ ನಮಸ್ಕಾರ (ಪ್ರಬಂಧಗಳು)
-ಗಂಗಾಧರ ಮೊದಲಿಯಾರ್
63. ತಾಯಿ, ತಂದೆಯವರಿಗೆ
-ಸ್ವಾಮಿ ಮತ್ತು ಅವನ ಸ್ನೇಹಿತರು
– ಆರ್. ಕೆ ನಾರಾಯಣ್ (ಅನುವಾದ: ಎಚ್. ವೈ ಶಾರದಾ ಪ್ರಸಾದ್)
64. ಅರ್ಪಣೆ ಭರತನಿಗೆ
-ಈ ತನಕದ ಕಥೆಗಳು
-ಅಬ್ದುಲ್ ರಶೀದ್
65. ಹದಿನಾಲ್ಕರ ಹರೆಯದಲ್ಲಿ ಮದುವೆಯಾಗಿ, ಕಿಳಿಂಗಾರ್ ಕುಂಞಪ್ಪನ ಹೆಂಡ್ತಿಯಾಗಿ ಬ್ರಿಟಿಷರು ಅಲ್ಲಲ್ಲಿ ಕ್ಯಾಂಪ್ ಮಾಡುತ್ತಿದ್ದಂತಹ ಕಾಲಪರ್ವದಲ್ಲಿ ‘ಕಿಳಿಂಗಾರ್’ ಮನೆತನದ ಸೊಸೆಯಾದವರು. ನನ್ನ ಹೆತ್ತ
ತಾಯಿಗೆ ಈಗ ಎಪ್ಪತ್ತ ಮೂರು ವರ್ಷಗಳು. ನನ್ನ ಬರವಣಿಗೆಯನ್ನು ಮೊಟ್ಟ ಮೊದಲು ಪ್ರೋತ್ಸಾಹಿಸಿದ ತಾಯಿ ಲಕ್ಷ್ಮೀ(ಪೂವಕ್ಕೆ) ದೇವರಿಗೆ ಈ ಕಥಾ ಸಂಕಲನ ಅರ್ಪಿಸುತ್ತಿದ್ದೇನೆ.
-ಉತ್ಸವ (ಕಥಾ ಸಂಕಲನ)
-ವಿಠಲಗಟ್ಟಿ ಉಳಿಯ
66. ನನ್ನ ಬರಹಗಳಿಗೆ ಚೆಂದದ ಅಂಗಿ ತೊಡಿಸಿ ನಿಮ್ಮ ಕೈಗಿಡುವ
ವಸುಧೇಂದ್ರ, ಪ್ರಕಾಶ್ ಕಂಬತ್ತಳ್ಳಿ, ಬಿ ಸುರೇಶ ಇವರ ಅಕ್ಕರೆಗೆ
-ಕಾಡುಹಾದಿಯ ಕತೆಗಳು ( ಕಥಾ ಸಂಕಲನ)
-ಜೋಗಿ
67. ನನ್ನ ಬದುಕಿನಲ್ಲಿ ಬಂದಷ್ಟೇ ಅವಸರದಲ್ಲಿ
ತನ್ನ ಬದುಕಿಗೇ ಎರವಾಗಿ ಹೋದ
ನಾಗಭೂಷಣ ಹೆಗಡೆಯ ನೆನಪಿಗೆ
ಈ ಪುಸ್ತಕವನ್ನು ಅರ್ಪಿಸುತ್ತೇನೆ
-ಜಯಂತ ಕಾಯ್ಕಿಣಿ ಮೂರು ಕಥೆಗಳು
-ಜಯಂತ ಕಾಯ್ಕಿಣಿ
68. ಸೀಸನ್ ಪಾಸು, ಬಾಚಣಿಗೆ, ಬುತ್ತಿಯ ಪುಟ್ಟ ಚಪ್ಪಟೆ ಡಬ್ಬಿಯೊಂದಿಗೆ, ಫ್ಲಾಟ್ ಫಾರ್ಮಿನ ಮೇಲೆ ಓಡುತ್ತೋಡುತ್ತ ಇಕೋ ಇಂದಿನ ದೈನಿಕದ
ಲೋಕಲ್ ರೈಲೊಳಗೆ ಫಕ್ಕನೆ ಸೇರಿಕೊಂಡ ಮುಂಬಯಿಯ ಅನಾಮಿಕ
ನಿತ್ಯಯಾತ್ರಿಗೆ ಮತ್ತು ನಾಗರಾಜ ಹುಯಿಲ್‌ಗೋಳ್‌ಗೆ
-ಬೊಗಸೆಯಲ್ಲಿ ಮಳೆ
-ಜಯಂತ ಕಾಯ್ಕಿಣಿ
69. ಕರ್ನಾಟಕದ ನೇಕಾರರಿಗೆ
-ದೇಸಿ ಜೀವನ ಪದ್ಧತಿ
-ಪ್ರಸನ್ನ
70. ಮೊದಲನೆ ಆವೃತ್ತಿ ಮತ್ತು ಈ ಆವೃತ್ತಿಯ ನಡುವೆ
ನಮ್ಮಗಲಿರುವ ‘ಅಕ್ಷರ ಹೊಸ ಕಾವ್ಯ’ದ ಕವಿಗಳಾದ
ಅಡಿಗ, ರಾಮಾನುಜಮ್, ಕೃಷ್ಣ, ಚಿತ್ತಾಲ, ಪಾವೆಂ, ವಿ.ಜಿ. ಭಟ್ಟ
ಇವರ ನೆನಪಿಗೆ ಈ ೧೯೯೩ ರ ಸಂಗ್ರಹ
-ಅಕ್ಷರ ಹೊಸ ಕಾವ್ಯ
– ಸಂಪಾದಕರು-ಪಿ ಲಂಕೇಶ್
71. ಬಿ.ವಿ ಕಾರಂತರಿಗೆ ಅರ್ಪಣೆ
-ಎರಡು ಏಕಾಂಕಗಳು
-ಚಿ. ಶ್ರೀನಿವಾಸರಾಜು
72. ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ
ವಿನಾಯಕ ಕೃಷ್ಣಗೋಕಾಕರಿಗೆ
-ಬಕುಲದ ಹೂವುಗಳು (ಕವನ ಸಂಕಲನ)
-ಸುಬ್ಬಣ್ಣ ರಂಗನಾಥ ಎಕ್ಕುಂಡಿ
73. ಯುಗಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯೆಂಬ ನನ್ಮಾತ್ಮದ ತಾಯಿಗೆ…
ತಾಯಂತೆ ಸಲಹಿದ
ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರಿಗೆ
ನನ್ನ ಹಡೆದವರಿಗೆ…
-ಮಡಿಲ ನೂಲಿನ ಕೌದಿ
-ಗೋರವಿ ಆಲ್ದೂರು
74. ಭಾವದೊಡಲಿಗೆ ಜೀವತುಂಬಿದ ನನ್ನ ದೇವರಿಗೆ
ಈ ಕವನ ಸಂಕಲನ ಅರ್ಪಣೆ
-ಜೀವನ್ಮುಖಿ (ಕವನ ಸಂಕಲನ)
-ಪ್ರಿಯಾ ಎಂ. ಕಲ್ಲಬ್ಬೆ
75. ನನ್ನ ಅನೇಕ ಹುಚ್ಚಾಟಗಳಿಗೆ ಬೆನ್ನೆಲುಬಾಗಿ ನಿಂತ ನನ್ನ ಬಾಳ ಸಂಗಾತಿ ಶ್ರೀಮತಿ ಎನ್. ಸುಶೀಲ
ಬೆಳೆಯುವಾಗ ನನ್ನ ಹಲವು ಪ್ರಯೋಗಗಳಿಗೆ ಬಲಿ ಪಶುಗಳಾದ ನನ್ನ ಇಬ್ಬರು ಮಕ್ಕಳು ಡಾ. ಜ್ಯೋತ್ಸ್ನ ಮತ್ತು ಕುಮಾರಿ ಮೈತ್ರಿ
ತಂದೆ ಪ್ರೀತಿಯನ್ನು ಅರಸಿ ಬಂದು ನನಗೆ ಆಪ್ತರಾದ ಹಲವು ಪ್ರೀತಿಯ ಮಕ್ಕಳು, ಪ್ರೀತಿ ಸಿಗದೆ ಪರದಾಡುತ್ತಿರುವ ಅನೇಕ ಮಕ್ಕಳು
ಆತ್ಮಹತ್ಯೆಯ ದಾರಿಯಲ್ಲಿ ಸಾಗಿ ಆನಂತರ ನನ್ನ ಮಾತುಗಳಿಂದ ಸಾಂತ್ವನ ಹೊಂದಿ ಮತ್ತೆ ಬದುಕುವ ದಾರಿಗೆ ವಾಪಸ್ ಬಂದು ಜೀವನದ ಗುರಿಯತ್ತ
ಸಾಗುತ್ತಿರುವ ಏಳು ಜೀವಗಳು,
ಸಕಾಲದಲ್ಲಿ ನೆರವು ಸಿಗದೆ ಬದುಕನ್ನು ಅಂತ್ಯಗೊಳಿಸಿದ ನೂರಾರು ಜೀವಗಳು
ಇವರಿಗೆಲ್ಲ
-ಮಕ್ಕಳನ್ನು ಬೈಯುವುದು ಹೇಗೆ?
-ಆರ್ ನಾಗೇಶ್
76. ನನ್ನೂರಿನ ನದಿ ಶಾಲ್ಮಲಿ,
ಮತ್ತವಳ ನಿರುದ್ವಿಗ್ನ ಅಲೆಗಳ ಮೇಲೆ ತೇಲುವ
ಮುಂಜಾವದ ಪುಷ್ಪರಂಗವಲ್ಲಿಯ ನೆನಪುಗಳಿಗೆ
-ಅಂಟಿಕೊಳ್ಳದ ಚಿತ್ರಗಳು (ಕವನ ಸಂಕಲನ)
-ನವೀನ್ ಭಟ್ ಗಂಗೋತ್ರಿ
