SIR 2026: How to Check and What to Check in the latest Asddo list | ಕರಡು ಮತದಾರರ ಪಟ್ಟಿ ಪರಿಶೀಲನೆ ಹೇಗೆ?

ಕರ್ನಾಟಕದ SIR 2026 ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಗಣತಿ ನಮೂನೆ (Enumeration Form) ಭರ್ತಿ ಮಾಡಿದ ಬಳಿಕ ಮುಂದೇನು? ಎಂಬ ಪ್ರಶ್ನೆ ಸಹಜವಾಗಿ ಮತದಾರರಲ್ಲಿ ಮೂಡುತ್ತದೆ. ಈ ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿದವರ ಹೆಸರು ಆಗಸ್ಟ್ 5ರಂದು ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿದೆ. ASDDO ಪಟ್ಟಿ ಪರಿಶೀಲನೆ ಹೇಗೆ? ಈ ಬಗ್ಗೆ ಕರಿಯರ್ ಕರ್ನಾಟಕ ಚಾನೆಲ್ ನಲ್ಲಿ ವಿವರಣೆ ಏನಿದೆ ಮುಂದೆ ಓದಿ

ಮೃತರು ಮತ್ತು ನಕಲಿ ಹೆಸರುಗಳ ಬಗ್ಗೆ: ಕೇವಲ ಮೃತಪಟ್ಟವರು ಮತ್ತು ಈಗಾಗಲೇ ಬೇರೆಡೆ ನೋಂದಾಯಿತರಾಗಿರುವ (Duplicate) ಹೆಸರುಗಳನ್ನು ಮಾತ್ರ ಸೂಕ್ತ ಮಹಜರು ನಡೆಸಿದ ನಂತರ ಪಟ್ಟಿಯಿಂದ ತೆಗೆಯಲಾಗುತ್ತದೆ.

ಸರಿಪಡಿಸಿಕೊಳ್ಳಲು ಅವಕಾಶ: ಗೈರುಹಾಜರಾದವರು (Absent) ಎಂದು ಗುರುತಿಸಲಾದ ಮತದಾರರು ಆಗಸ್ಟ್ 8 ರೊಳಗೆ ತಮ್ಮ ಎನ್ಯುಮರೇಷನ್ ಫಾರ್ಮ್‌ಗಳನ್ನು ಸರಿಪಡಿಸಿಕೊಳ್ಳಲು ಅಥವಾ ರೋಲ್-ಬ್ಯಾಕ್ ಮಾಡಲು ಅವಕಾಶವಿದೆ.

ವಿಳಾಸ ಬದಲಾವಣೆ: ಒಬ್ಬ ವ್ಯಕ್ತಿ ಒಂದು ವಿಳಾಸದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿದ್ದರೆ, ಅವರಿಗೆ ಹಳೆಯ ವಿಳಾಸದಲ್ಲಿ ಫಾರ್ಮ್ ತಲುಪದಿರಬಹುದು. ಆದರೆ ಇದರರ್ಥ ಅವರ ಹೆಸರು ಡಿಲೀಟ್ ಆಗಿದೆ ಎಂದಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (CEO) ವಿ ಅನ್ಬುಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 5 ರಂದು ಬಿಡುಗಡೆಯಾಗುವ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಅಥವಾ ಏನಾದರೂ ತಪ್ಪುಗಳಿದ್ದರೆ, ಅವುಗಳನ್ನು ಸರಿಪಡಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ಇರುತ್ತದೆ

ಅಂತಿಮವಾಗಿ ಎಲ್ಲಾ ತಿದ್ದುಪಡಿಗಳ ನಂತರ ಅಕ್ಟೋಬರ್ 27 ರಂದು ಅಧಿಕೃತವಾದ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುತ್ತದೆ.

 

ಕರಡು ಮತದಾರರ ಪಟ್ಟಿ ಪರಿಶೀಲನೆ

ಆಗಸ್ಟ್ 5 ರಂದು ಬಿಡುಗಡೆಯಾದ ಕರಡು ಮತದಾರರ ಪಟ್ಟಿಯನ್ನು (Draft Voter List) ಪರಿಶೀಲಿಸಲು ಅನುಸರಿಸಬೇಕಾದ ಕ್ರಮಗಳು:

ಆನ್‌ಲೈನ್ ಪೋರ್ಟಲ್‌ಗಳು: ನೀವು ಚುನಾವಣಾ ಆಯೋಗದ ಅಧಿಕೃತ ‘ವೋಟರ್ ಸರ್ವಿಸ್ ಪೋರ್ಟಲ್’ (Voter Service Portal) ಅಥವಾ ‘ECI NET’ ಆಪ್ ಮೂಲಕ ನಿಮ್ಮ ವಿವರಗಳನ್ನು ಪರಿಶೀಲಿಸಬಹುದು

ಇದರೊಂದಿಗೆ ಸಿಇಓ ಕರ್ನಾಟಕ (CEO Karnataka) ಅಧಿಕೃತ ವೆಬ್‌ಸೈಟ್‌ಗೂ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು

ವೋಟರ್ ಫೆಸಿಲಿಟೇಶನ್ ಸೆಂಟರ್ (VFC): ಆನ್‌ಲೈನ್‌ನಲ್ಲಿ ಪರಿಶೀಲಿಸಲು ಕಷ್ಟವಾದರೆ ಅಥವಾ ಸಹಾಯದ ಅಗತ್ಯವಿದ್ದರೆ, ರಾಜ್ಯಾದ್ಯಂತ ಇರುವ VFC ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು

 

ಕೇವಲ ಈ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ಯಾರ ಹೆಸರನ್ನೂ ನೇರವಾಗಿ ತೆಗೆದುಹಾಕಲಾಗುವುದಿಲ್ಲ. ಅಧಿಕಾರಿಗಳು ಭೌತಿಕ ಪರೀಕ್ಷೆ (Physical Verification) ನಡೆಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ

ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ನೀವು ಫಾರ್ಮ್ 6 (Form 6) ಸಲ್ಲಿಸುವ ಮೂಲಕ ಹೊಸದಾಗಿ ಮತದಾರರಾಗಿ ಸೇರ್ಪಡೆಯಾಗಲು ಅವಕಾಶವಿರುತ್ತದೆ

ASDDO ಪಟ್ಟಿ ಎಂದರೇನು? ರಾಜ್ಯಾದ್ಯಂತ ನಡೆಸಲಾದ ಮನೆ-ಮನೆ ಸಮೀಕ್ಷೆಯ ನಂತರ, ಚುನಾವಣಾ ಆಯೋಗವು ಮತದಾರರನ್ನು ASDDO (Absent – ಗೈರಾದವರು, Shifted – ಸ್ಥಳಾಂತರಗೊಂಡವರು, Dead – ಮೃತರು, Duplicate – ನಕಲಿ ಮತ್ತು Other – ಇತರೆ) ಎಂಬ ವರ್ಗಗಳ ಅಡಿಯಲ್ಲಿ ಗುರುತಿಸಿದೆ

.ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಅದು ಮತದಾರರ ಪಟ್ಟಿಯಿಂದ ಡಿಲೀಟ್ ಆಗುವ ಹಂತದಲ್ಲಿದೆ ಎಂದರ್ಥ

ಪರಿಶೀಲಿಸುವುದು ಹೇಗೆ? ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಎಂದು ತಿಳಿಯಲು ಈ ಹಂತಗಳನ್ನು ಅನುಸರಿಸಿ:

ಚುನಾವಣಾ ಆಯೋಗದ ವೆಬ್‌ಸೈಟ್ ceo.karnataka.gov.in ಗೆ ಭೇಟಿ ನೀಡಿ

ವೆಬ್‌ಸೈಟ್‌ನ ಮೇಲ್ಭಾಗದಲ್ಲಿರುವ ‘ASDDO List’ ಆಯ್ಕೆಯನ್ನು ಕ್ಲಿಕ್ ಮಾಡಿ

ನಿಮ್ಮ ಜಿಲ್ಲೆಯ ಎದುರಿಗಿರುವ ಗೂಗಲ್ ಡ್ರೈವ್ ಲಿಂಕ್ ಅನ್ನು ಕ್ಲಿಕ್ ಮಾಡಿ

ಅಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ, ನಂತರ ಸರ್ಚ್ ಬಾರ್‌ನಲ್ಲಿ ನಿಮ್ಮ ಬೂತ್ ಹೆಸರು ಅಥವಾ ಸಂಖ್ಯೆಯನ್ನು ಟೈಪ್ ಮಾಡಿ ಸಂಬಂಧಿತ ಪಿಡಿಎಫ್ (PDF) ಫೈಲ್ ಅನ್ನು ಪರಿಶೀಲಿಸಿ

ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಏನು ಮಾಡಬೇಕು?

ತಕ್ಷಣವೇ ನಿಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ

ಒಂದು ವೇಳೆ ನೀವು ಈಗಾಗಲೇ ಫಾರ್ಮ್ ನೀಡಿದ್ದರೂ ಹೆಸರು ಪಟ್ಟಿಯಲ್ಲಿದ್ದರೆ, ದಾಖಲೆಗಳೊಂದಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು (ERO) ಸಂಪರ್ಕಿಸಬಹುದು

ಆಯೋಗಕ್ಕೆ ಮನವಿ ಸಲ್ಲಿಸಲು ಸೆಪ್ಟೆಂಬರ್ 17ರ ವರೆಗೆ ಅವಕಾಶವಿರುತ್ತದೆ

ಮುಖ್ಯವಾಗಿ, ಈ ಪಟ್ಟಿಯಲ್ಲಿ ಹೆಸರಿದ್ದ ತಕ್ಷಣ ಹೆಸರು ಡಿಲೀಟ್ ಆಗುವುದಿಲ್ಲ; ಅಧಿಕಾರಿಗಳು ಭೌತಿಕ ಪರೀಕ್ಷೆ (Physical Verification) ನಡೆಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ

ಅಗತ್ಯವಿರುವ ದಾಖಲೆಗಳು (ಕನಿಷ್ಠ ಒಂದು ಇರಲಿ): ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರಗಳು (SSLC ಅಥವಾ ಇತರೆ), ಜಾತಿ ಪ್ರಮಾಣಪತ್ರ (SC/ST/OBC), ಕೇಂದ್ರ/ರಾಜ್ಯ ಸರ್ಕಾರದ ಉದ್ಯೋಗಿ ಐಡಿ ಕಾರ್ಡ್, ಶಾಶ್ವತ ನಿವಾಸಿ ಪ್ರಮಾಣಪತ್ರ, ಎನ್‌ಆರ್‌ಸಿ (NRC) ಪ್ರಮಾಣಪತ್ರ ಅಥವಾ ಕುಟುಂಬ ನೋಂದಣಿ ಕಾರ್ಡ್

ಒಂದು ವೇಳೆ ನಿಮ್ಮ ಹೆಸರು ಅಂತಿಮ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ನೀವು ಫಾರ್ಮ್ 6 (Form 6) ಸಲ್ಲಿಸುವ ಮೂಲಕ ಹೊಸದಾಗಿ ಮತದಾರರಾಗಿ ಮತ್ತೆ ಸೇರ್ಪಡೆಯಾಗಬಹುದು

Leave a Reply

Your email address will not be published. Required fields are marked *