ನಶೆ

ನನ್ನ ಒಳಗೆ ನೀನು ಹೇಗೆ ಸೇರಿದೆ
ನಿನಗೆ ಅನುಮತಿ ಎಂದು ನೀಡಿದೆ
ಹೇಗೊ ನನ್ನಲ್ಲಿ ನೀನು ಕಲೆತೆ
ನಿನ್ನ ನಶೆಯಲ್ಲಿ ನಾ ಎಲ್ಲವ ಮರೆತೆ
ಮನದಲ್ಲಿ ಹೊಸ ಅಲೆಗಳ ಎಬ್ಬಿಸಿದೆ
ದಿನವೂ ನನ್ನ ನೀನು ಏಕೆ ಬಂಧಿಸಿದೆ
ಓಹ್! ನಿನ್ನ ಸುವಾಸನೆ ಭರಿತ ಮಧುರ ಸವಿಯು
ಮತ್ತೆ ಮತ್ತೆ ಹೀರಿದರು ಕಮ್ಮಿಯಾಗಿಲ್ಲ ರುಚಿಯು
ಮತ್ತೇರಿ ಚಿತ್ತಾದರೂ ನಿನ್ನದೆ ಕನವರಿಕೆ
ರಾತ್ರಿಯಿಡಿ ತೊದಲಿದರೂ ಆಗಲಿಲ್ಲ ಮನವರಿಕೆ
ಏರಿದ್ದ ನಿಶೆ ಇಳಿಯಲು ಹಿಡಿಯಿತು ಮೂರುದಿನ
ಅನುದಿನದ ಕುಡಿತದಿಂದ ಕಳೆದುಕೊಂಡೆ ನನ್ನತನ
ಒಂದಂತೂ ನಿಜ ಹೆಣ್ಣಾಗಲಿ, ಹೆಂಡವಾಗಲಿ ಅತಿಯಾದರೆ ಅಪಾಯ ಗೆಳೆಯ

Leave a Reply

Your email address will not be published. Required fields are marked *