[Video] IMD weather Forecast, Delayed Monsoon expert Dr. Srinivas Reddy Explanation | ಹವಾಮಾನ ಇಲಾಖೆ ಮುನ್ಸೂಚನೆ, ಮುಂಗಾರು ವಿಳಂಬ ಬಗ್ಗೆ ತಜ್ಞ ಶ್ರೀನಿವಾಸ್ ರೆಡ್ಡಿ ವಿವರಣೆ

“ಕರ್ನಾಟಕದಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಬಗ್ಗೆ ಹೆಚ್ಚಿನ ಆತಂಕಬೇಕಿಲ್ಲ, ಆದರೆ, ಮುಂಗಾರು ದುರ್ಬಲವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವುದು ಆತಂಕಕಾರಿ, ಇದು ಕರ್ನಾಟಕ ರಾಜ್ಯಕ್ಕೆ ಅಲ್ಲ ಇಡೀ ದೇಶಕ್ಕೆ ದೊಡ್ಡ ಸಮಸ್ಯೆಯಾಗಲಿದೆ” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕರಾದ ಡಾ. ಶ್ರೀನಿವಾಸ ರೆಡ್ಡಿ ವಿವರಿಸಿದ್ದಾರೆ.

ಎಲ್- ನಿನೋ (El Nino) ಪರಿಣಾಮದಿಂದ ಭಾರತದಲ್ಲಿ ಮುಂಗಾರು ಕ್ಷೀಣವಾಗಲಿದೆ ಎಂದು ಈಗಾಗಲೇ ವರದಿಯಾಗಿದೆ. ಕಳೆದ 11 ವರ್ಷಗಳಲ್ಲೇ ಕಾಣದಂಥ ಬರಗಾಲದ ಭೀತಿಯನ್ನು ದೇಶ ಇದೀಗ ಎದುರಿಸುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಅಣೆಕಟ್ಟುಗಳಿಗೆ ಮಳೆಗಾಲದಲ್ಲಿ ಸಾಕಷ್ಟು ನೀರು ತುಂಬದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಮಳೆಯಾಧರಿತ ಕೃಷಿಕರಿಗೆ ತೊಂದರೆ ತಪ್ಪಿದ್ದಲ್ಲ.

ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಬೆಂಗಳೂರು ಹಾಗೂ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಲಿದೆ. ಈ ವಿಡಿಯೋದಲ್ಲಿ ಹವಾಮಾನ ಇಲಾಖೆ ಕೊಟ್ಟಿರುವ ಎಚ್ಚರಿಕೆ, ಮುಂಗಾರು ಮಳೆ ವಿಳಂಬ, ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಲಿದೆ ಎಂದು ಡಾ. ಶ್ರೀನಿವಾಸ ರೆಡ್ಡಿ ವಿವರಿಸಿದ್ದಾರೆ.

YouTube video player

Leave a Reply

Your email address will not be published. Required fields are marked *