“ಮುಂಗಾರು ಮಳೆ ತಿಂಗಳಿಗೂ ಅಧಿಕ ಕಾಲ ವಿಳಂಬವಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದ ಬಗ್ಗೆ ಚಿಂತನೆ, ಚರ್ಚೆ ಸಾಕಷ್ಟು ನಡೆದರೂ ಪರಿಸರ ಉಳಿಸುವ ಕಾರ್ಯದಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ” ಎಂದು ಮಳೆಕೊಯ್ಲು, ಜಲ ಭೂಗರ್ಭಶಾಸ್ತ್ರಜ್ಞ ಡಾ. ದೇವರಾಜ ರೆಡ್ಡಿ ಅವರು ನೊಂದು ನುಡಿದರು.
ಮಣ್ಣಿನ ಸವಕಳಿ(soil erosion), ಮಣ್ಣಿನ ಗುಣಮಟ್ಟ ಸಮಸ್ಯೆಯೇ ಕಾರಣ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ತಾಣಗಳಾದ ಕೆರೆ, ಹಳ್ಳಗಳು ಇಲ್ಲದ ಕಾರಣ, ಸಮತಟ್ಟು ಪ್ರದೇಶದಲ್ಲಿ ನೀರು ವೇಗವಾಗಿ ಹರಿಯುವುದರ ಜೊತೆಗೆ ಮಣ್ಣಿನ ಹಲವು ಪದರವನ್ನು ನಾಶಪಡಿಸಿಕೊಂಡು ಸಾಗುತ್ತದೆ. ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ತೀವ್ರತೆಗೆ ಇದೇ ಕಾರಣ
