ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ | Letter to our everlasting Love

ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!
manaswini-naravi1

ನನ್ನ ಮನದ ಅಂಗಳದಿ ಎಂದೂ ಬತ್ತದ ಜೀವನದಿಯ ಹರಿಸಿ ಹೋದವನೆ ನಿನ್ನ ಹುಚ್ಚುತನಕ್ಕೆ ಬೆಚ್ಚಾಗಿ ನನ್ನೆದೆಯಲ್ಲಿ ಅಚ್ಚಾಗಿಸಿಕೊಂಡೆ’ ನೆನಪಿಗಳ ಸರಮಾಲೆಯನ್ನು ಎಳೆಎಳೆಯಾಗಿ ಬಿಡಿಸುತ್ತಾ ನಿನ್ನತ್ತ ಈ ಪತ್ರವ ಕಳಿಸಿದ್ದೇನೆ ಸ್ವೀಕರಿಸು ಇಲ್ಲಾ ತಿರಸ್ಕರಿಸು ನನ್ನ ಪ್ರೀತಿಯ ಅನುಮಾನಿಸಿದರೂ ಓಕೆ ಅವಮಾನಿಸಬೇಡ ನಿನ್ನ ಮನಸ್ವಿನಿ, ನಾರಾವಿ

‘ಮರೆಯಲಿ ಹೇಗೆ ನಿನ್ನನ್ನು ಮರೆಯಲಾರೆ ನಮ್ಮಿಬ್ಬರ ಗೆಳೆತನವನ್ನು’ ಎಂದು ಕಳಿಸಿದ್ದೆ. ಗೆಳೆತನ ಮೀರಿದ ಬಾಂಧವ್ಯ ನಮ್ಮಲ್ಲಿ ಯಾವಾಗ ಮೂಡಿಯೋ ಕಾಣೆ. ನೀನಂತೂ ಏನನ್ನೂ ಬಾಯಿ ಬಿಟ್ಟು ಎಂದೂ ಹೇಳಿದವನಲ್ಲ. ಪಕ್ಕದಲ್ಲಿ ಬಾಂಬ್ ಬಿದ್ದರೂ ಒಮ್ಮೆ ನೋಡಿ ಸುಮ್ಮನಾಗುವ ಜಾಯಮಾನ. ಜಡಭರತನಂತೆ ಇದ್ದು ಬಿಡುತ್ತೀಯ. ಆದರೆ, ನನ್ನಿಂದ್ದಂತೂ ಅದು ಸಾಧ್ಯವಿಲ್ಲ.

Read more

Leave a Reply

Your email address will not be published. Required fields are marked *