Lava new Virat series Smartphones sale on Flipkart

“Source: Avian WE”

ಲಾವಾದಿಂದ ಕೈಗೆಟುಕುವ ದರದಲ್ಲಿ ‘ವಿರಾಟ್’ ಸರಣಿ ಸ್ಮಾರ್ಟ್‌ಫೋನ್‌

ಬೆಂಗಳೂರು:  ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಲಾವಾ’ ಕೈಗೆಟುಕುವ ದರದಲ್ಲಿ ‘ವಿರಾಟ್’ ಸರಣಿ ಸ್ಮಾರ್ಟ್‌ಫೋನ್‌ ಹೊರ ತಂದಿದೆ.

ಯುವಜನತೆಗೆ ಮೆಚ್ಚುಗೆಯಾಗಬಲ್ಲ ಹೊಸ ‘ವಿರಾಟ್’ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿವೆ. ‘ಲಾವಾ ವಿರಾಟ್ ವಿ1 5ಜಿ’ ಮತ್ತು ‘ಲಾವಾ ವಿರಾಟ್ ವಿ1’ ಫೋನ್‌ಗಳು ಜುಲೈ 31 ರಿಂದ ಖರೀದಿಗೆ ಲಭ್ಯವಿರಲಿವೆ. ಫ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಬಿಡುಗಡೆಯಾಗುತ್ತಿವೆ.

ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿದ್ದು ಯುವಜನತೆ ಅಷ್ಟೇ ಅಲ್ಲದೆ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ವೃತ್ತಿಪರ ಉದ್ಯೋಗಿಗಳಿಗೆ ಹೇಳಿಮಾಡಿಸಿದಂತಿದೆ. ಜುಲೈ 31 ರಂದು ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು ಲಾವಾ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರಲಿವೆ ಎಂದು ಸಂಸ್ಥೆ ಪ್ರಕಟಿಸಿದೆ.

ವಿಶೇಷವೆಂದರೆ, ಜು.31ರಂದು ಮೊದಲ ದಿನದ ಮಾರಾಟದಲ್ಲಿ ಗ್ರಾಹಕರು ಭಾರಿ ರಿಯಾಯಿತಿ ಪಡೆಯಬಹುದಾಗಿದೆ. ಲಾವಾ ವಿರಾಟ್ ವಿ1 5ಜಿ ಫೋನ್ 11,999 ರೂ. ಹಾಗೂ ವಿರಾಟ್ ವಿ1 ಫೋನ್ ಕೇವಲ 8,999 ರೂ.ಗೆ ಸಿಗಲಿದೆ. 2ನೇ ದಿನದಿಂದ ಇವುಗಳ ಬೆಲೆ ಕ್ರಮವಾಗಿ 12,999 ರೂ. ಮತ್ತು 9,999 ರೂ.ಗೆ ಏರಿಕೆಯಾಗಲಿದೆ.

*ಲಾವಾ ವಿರಾಟ್ ವಿ1 5ಜಿ ಫೀಚರ್ಸ್*

ವಿರಾಟ್‌ ಸರಣಿಯ ಪ್ರೀಮಿಯಂ ಫೋನ್ ಆಗಿರುವ ಇದು, ದೀರ್ಘಕಾಲ ಬಾಳಿಕೆ ಬರುವ 6000mAh ಬ್ಯಾಟರಿಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ ಇರುವ 6.75 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇರುವುದರಿಂದ ಗೇಮಿಂಗ್ ಮತ್ತು ಮನರಂಜನೆಗೆ ಅತ್ಯುತ್ತಮವಾಗಿದೆ.

UNISOC T8200 ಪ್ರೊಸೆಸರ್ ಹೊಂದಿರುವ ಇದು 4ಜಿಬಿ RAM (+4ಜಿಬಿ ವರ್ಚುವಲ್ RAM) ಮತ್ತು 64ಜಿಬಿ ಸ್ಟೋರೇಜ್‌ ನೀಡುತ್ತದೆ. 13MP ಡ್ಯುಯಲ್ ಎಐ ರಿಯರ್ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.

ಧೂಳು ಮತ್ತು ನೀರು ನಿರೋಧಕ (IP64) ವ್ಯವಸ್ಥೆಯಿರುವ ಈ ಫೋನ್, ‘ಆರ್ಯ ಬ್ಲೂ’ ಮತ್ತು ‘ಸೋನಾರ್ ಗೋಲ್ಡ್’ ಬಣ್ಣಗಳಲ್ಲಿ ಲಭ್ಯವಿದೆ. ಇದು ಹೊಸ ಆಂಡ್ರಾಯ್ಡ್ 16ನೇ ಆವೃತ್ತಿಯೊಂದಿಗೆ ಬರುತ್ತಿರುವುದು ವಿಶೇಷ.

ಲಾವಾ ವಿರಾಟ್ ವಿ1 ಫೀಚರ್ಸ್

ಬಜೆಟ್ ಬೆಲೆಯಲ್ಲಿ ದಿನನಿತ್ಯದ ಬಳಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿರುವ ಈ ಫೋನ್, 5000mAh ಬ್ಯಾಟರಿ ಹಾಗೂ 6.75 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದೂ ಕೂಡ IP64 ಧೂಳು ಮತ್ತು ನೀರು ನಿರೋಧಕ ವ್ಯವಸ್ಥೆ ಹೊಂದಿದೆ.

UNISOC SC9863A ಪ್ರೊಸೆಸರ್, 4ಜಿಬಿ RAM, 64ಜಿಬಿ ಸ್ಟೋರೇಜ್, 13MP ರಿಯರ್ ಹಾಗೂ 5MP ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. ಇದು ‘ನೀಲಗಿರಿ ಬ್ಲೂ’ ಮತ್ತು ‘ಹಿಮಾಲಯನ್ ಸಿಲ್ವರ್’ ಬಣ್ಣಗಳಲ್ಲಿ ಲಭ್ಯವಿದೆ.

ಜಾಹೀರಾತು ಕಿರಿಕಿರಿ ಇಲ್ಲ, ಉಚಿತ ಹೋಮ್ ಸರ್ವೀಸ್!

ಈ ಎರಡೂ ಫೋನ್‌ಗಳ ಅತಿದೊಡ್ಡ ಪ್ಲಸ್-ಪಾಯಿಂಟ್ ಎಂದರೆ ಇದರ ‘ಕ್ಲೀನ್ ಆಂಡ್ರಾಯ್ಡ್’ ಎಕ್ಸ್‌ಪೀರಿಯನ್ಸ್. ಅಂದರೆ ಫೋನ್ ಬಳಸುವಾಗ ಯಾವುದೇ ಅನಗತ್ಯ ಜಾಹೀರಾತುಗಳು ಮತ್ತು ಆ್ಯಪ್‌ಗಳು ಕಿರಿಕಿರಿ ಮಾಡುವುದಿಲ್ಲ. ಅಷ್ಟೇ ಅಲ್ಲದೆ, ಫೋನ್‌ನಲ್ಲಿ ಏನಾದರೂ ಸಮಸ್ಯೆಯಾದರೆ ಗ್ರಾಹಕರು ಸರ್ವೀಸ್ ಸೆಂಟರ್‌ಗೆ ಅಲೆಯಬೇಕಾಗಿಲ್ಲ. ಲಾವಾ ಕಂಪನಿಯೇ ಮನೆಬಾಗಿಲಿಗೆ ಬಂದು ಫೋನ್ ರಿಪೇರಿ ಮಾಡಿಕೊಡುವ ‘ಫ್ರೀ ಸರ್ವೀಸ್ ಅಟ್ ಹೋಮ್’ ಸೌಲಭ್ಯವನ್ನೂ ನೀಡುತ್ತಿದೆ.

ಈ ಫೋನ್‌ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸುನಿಲ್ ರೈನಾ, “ಇಂದು ಭಾರತೀಯ ಸ್ಮಾರ್ಟ್‌ಫೋನ್ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗಿವೆ. ಲಾವಾ ವಿರಾಟ್ ಸರಣಿಯ ಮೂಲಕ ನಾವು ನಾವೀನ್ಯತೆ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ವಿನ್ಯಾಸವನ್ನು ನೀಡುತ್ತಿದ್ದೇವೆ. ಫ್ಲಿಪ್‌ಕಾರ್ಟ್ ಜೊತೆಗಿನ ನಮ್ಮ ಒಪ್ಪಂದವು, ದೇಶದ ಮೂಲೆ-ಮೂಲೆಗೂ ನಮ್ಮ ಗುಣಮಟ್ಟದ ಫೋನ್‌ಗಳನ್ನು ತಲುಪಿಸಲು ಸಹಾಯ ಮಾಡಲಿದೆ,” ಎಂದರು.

ಫ್ಲಿಪ್‌ಕಾರ್ಟ್‌ನ ಮೊಬೈಲ್ಸ್ ವಿಭಾಗದ ಉಪಾಧ್ಯಕ್ಷೆ ಕಾಂಚನ್ ಮಿಶ್ರಾ ಪ್ರತಿಕ್ರಿಯಿಸಿ, “ಫ್ಲಿಪ್‌ಕಾರ್ಟ್‌ನ ‘ಓಪನ್ ಬಾಕ್ಸ್ ಡೆಲಿವರಿ’ ಹಾಗೂ ಲಾವಾದ ಮನೆಬಾಗಿಲಿಗೆ ಸರ್ವೀಸ್‌ನೊಂದಿಗೆ, ಗ್ರಾಹಕರು ಯಾವುದೇ ಆತಂಕವಿಲ್ಲದೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಬಹುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *