ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು
ಹೊಟ್ಟೆ ನೋವು, ಅಜೀರ್ಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ. ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ. ಆದರೆ, ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳುವಂತಿಲ್ಲ. ಪ್ರತಿಷ್ಠೆ ಪ್ರಶ್ನೆ. ಅಜ್ಜಿ ಹೇಳುವ ಟಿಪ್ಸ್ ಈ ಕಾಲದವರಿಗೆ ರುಚಿಸುವುದಿಲ್ಲ. ಡಾಕ್ಟರ್ ಹತ್ರಾ ಹೋಗಿ ಹಣ ತೆತ್ತು ಬಂದು ತಾತ್ಕಾಲಿಕ ಪರಿಹಾರ ಪಡೆಯುವುದು ತಪ್ಪುತ್ತಿಲ್ಲ. ಹೊಟ್ಟೆ ಉರಿ, ಅಜೀರ್ಣ, ಎದೆ ಉರಿ ಸಮಸ್ಯೆಗೆ ಮನೆಮದ್ದು ಇಲ್ಲಿದೆ.
ಮೊದಲ ಟಿಪ್ಸ್: ಸಾಕಷ್ಟು ನೀರು ಹಾಗೂ ಮಜ್ಜಿಗೆ ಕುಡಿಯಿರಿ. ಮಿಕ್ಕಿದ್ದು ಓದಿಕೊಳ್ಳಿ..
ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ
ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.
ಬಜೆಟ್ ಬೆಳೆ ಜೊತೆ ಸೋಯ ಅವರೆ ಬೆಳೆಸಿ
ಸೋಯಾ ಅವರೆ ಇದು ಒಂದು ವಾರ್ಷಿಕ ಸಸ್ಯ. ಇದು ಉಷ್ಣ ಮತ್ತು ಉಪೋಷ್ಣ ವಲಯದ ಬೆಳೆ. ಸೋಯ ಅವರೆಯನ್ನು ಕಪ್ಪು ತೊಗರಿ ಎಂದು ಕರೆಯುತ್ತಾರೆ. ಸೋಯ ಅವರೆ ಮತ್ತೊಂದು ಮುಖ್ಯವಾದ ದ್ವಿದಳ ಧಾನ್ಯ ಬೆಳೆ. ಇದನ್ನು ಎಣ್ಣೆ ಕಾಳಿನ ಬೆಳೆಯೆಂದು ಕರೆಯಬಹುದು. ಇದರ ಬಗ್ಗೆ ಸಾಮಾನ್ಯ ಜನತೆಗೆ, ರೈತರಿಗೆ ಹೆಚ್ಚು ತಿಳಿಯದು.
Trekking Tips Kannada | ಟ್ರೆಕ್ಕಿಂಗ್ ಸಲಹೆ: ಚಾರಣಕ್ಕೆ ಹೊರಡುವ ಮುನ್ನ ಈ ವಿಷಯಗಳು ತಿಳಿದಿರಲಿ!
ಸಾಂಪ್ರದಾಯಿಕ ರೈತರು ಇದನ್ನು ಬೇಸಾಯ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಇಳುವರಿ ಕೂಡ ಬೇರೆ ತಳಿಗಳಿಗಿಂತ ಹೆಚ್ಚು. ಸೋಯ ಹಿಂಡಿ ರಫ್ತು ಮಾಡುವ ದೇಶಗಳಲ್ಲಿ ಭಾರತವು ಪ್ರಥಮ ಸ್ಥಾನ ಪಡೆದಿದೆ. ಇಂದೂರ್‌ನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ರಾಷ್ಟ್ರೀಯ ಸೋಯ ಅವರೆ ಸಂಶೋಧನಾ ಸಂಸ್ಥೆ ಇದ್ದು, ಆಸಕ್ತರು ಉಪಯೋಗ ಪಡೆಯಬಹುದು.
ನಿದ್ರೆ ಬರ್ತಾ ಇಲ್ವಾ? ಮನೆ ಮದ್ದು ಇಲ್ಲಿದೆ
ನಿದ್ರಾಹೀನತೆಗೆ ಹಲವಾರು ಕಾರಣಗಳಿರಬಹುದು ಅಧಿಕ ಕೆಲಸದ ಒತ್ತಡ, ಮಾನಸಿಕ ಜಂಜಾಟ, ಹಾರ್ಮೋನ್ನಿನಲ್ಲಿ ಏರು ಪೇರು, ಚೈನ್ ಸ್ಮೋಕಿಂಗ್(ಸೀರಿಯಲ್ ಧೂಮಪಾನಿ?) ಆಲ್ಕೋಹಾಲಿಸಂ, ವೈದ್ಯಕೀಯ ಅವಘಡಗಳು ಹಾಗೂ ಜೆಟ್ ಲಾಗ್ ಇತ್ಯಾದಿ.
ಎಷ್ಟು ಅವಧಿ ನಿದ್ರೆ ಮಾಡಿದ್ದೀರಾ ಎಂಬುದು ಮುಖ್ಯವಲ್ಲ. ಎಷ್ಟು ಗಾಢವಾಗಿ ನಿದ್ರೆ ಹೋಗಿದ್ರಿ ಎಂಬುದು ಮುಖ್ಯ ನೆನಪಿಡಿ. ನಿದಿರೆಯೂ ಏಕೋ ಸದಾ ದೂರ ಎಂದು ಗುನುಗುವ ಮನಸು..ರಾತ್ರಿ ಆಯ್ತು ಮಲಗೋಣ ಎನ್ನುತ್ತಾ ನಿದ್ರಾದೇವಿಯ ವಶವಾಗುತ್ತದೆ.
ಬಾಯಿ ದುನಾರ್ತಕ್ಕೆ ಇಲ್ಲಿದೆ ಸುಲಭ ಮನೆಮದ್ದು
ಬಾಯಿ ದುರ್ನಾತ, ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದೊಳಿತು. ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು, ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ.

ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್
ತುಳಸಿ ಅಥವಾ ತುಲಸಿ ಎಂಬ ಪದಕ್ಕೆ ಅಪ್ರತಿಮ, ಅದ್ವೀತಿಯ ಎಂಬ ಅರ್ಥ ಉಂಟು. ದೇವಾಲಯಗಳಲ್ಲಿ, ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ತುಳಸಿ, ಸಂಪ್ರದಾಯಸ್ಥ ಹಿಂದೂ ಕುಟುಂಬದ ಖಾಯಂ ಸದಸ್ಯೆ. ಪವಿತ್ರ ತುಳಸಿ ಕಟ್ಟೆಗೆ ನಿತ್ಯ ಪೂಜೆ ನಡೆಯುವುದು ಮಾಮೂಲಿಯಾದರೂ ದೀಪಾವಳಿ ವೇಳೆಗೆ ತುಳಸಿಗೆ ಮದುಮಗಳ ಸಿಂಗಾರ ಸಿಗುತ್ತದೆ. ಅದು ಹಾಗಿರಲಿ, ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ನೆರವಾಗುತ್ತಾಳೆ ನೋಡೋಣ.
ನಿಮ್ಮ ಮನೆಯ ಹಿತ್ತಲಲ್ಲಿ ಹಿಪ್ಪಲಿಯಿದ್ದರೆ ಚೆನ್ನ!
ಸದಾ ಹಸಿರಾಗಿರುವ, ವೀಳ್ಯದೆಲೆ ರೀತಿಯ ಎಲೆಯುಳ್ಳ ಮೆಣಸಿನ ಬಳ್ಳಿಯ ಮಾದರಿಯ ಹಿಪ್ಪಲಿ ಮನೆಯಂಗಳದಲ್ಲಿ ಬೆಳಯಬಲ್ಲ ಸಸ್ಯ. ಸಣ್ಣಕುಂಡವೊಂದರಲ್ಲಿ ಸ್ವಲ್ಪ ನೆರಳುವ ತಾಣದಲ್ಲಿ ತೇವಾಂಶ ಕಾಯ್ದುಕೊಂಡ ವಾತಾವರಣ ಇದ್ದರೆ ಹಿಪ್ಪಲಿ ನಿಮ್ಮ ಮನೆ ಹಿತ್ತಲ ಮದ್ದಾಗಿ ಕಣ್ಣಿಗೆ ಹಸಿರು ದೇಹಕ್ಕೆ ಆರೋಗ್ಯ ತರುತ್ತದೆ.
How to Become a Successful Leader? with Self Confidence explained in Kannada | ಯಶಸ್ವಿ ನಾಯಕರಾಗುವುದು ಹೇಗೆ?
ಸಾಮಾನ್ಯವಾಗಿ ಆಯುರ್ವೇದ ಔಷಧ ಬಳಸುವವರಿಗೆ ಹಿಪ್ಪಲಿ ಅಥವಾ ಪಿಪ್ಪಲಿ ಪರಿಚಯವಿರುತ್ತದೆ. ಪಿಪ್ಪಲಿ ರಸಾಯನ ಬಳಸದಿರುವವರು ವಿರಳ. ಆರೋಗ್ಯ ವರ್ಧನೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ರಸಾಯನಗಳು ಸಹಕಾರಿ. ದೇಹಾಲಸ್ಯ ಕಮ್ಮಿಮಾಡಿ, ಚುರುಕುತನ ಹೆಚ್ಚಿಸಿ, ದೀರ್ಘಾಯುಸ್ಸು ಪಡೆಯಲು ರಸಾಯನಗಳ ಬಳಕೆಯಾಗುತ್ತದೆ. ಹಿಪ್ಪಲಿ ಅಂಗಾಂಶಗಳಲ್ಲಿನ ಟಿಷ್ಯೂ ಇಂಜೈಮ್ಸ್ ಹೆಚ್ಚಿಸುತ್ತದೆ.
ಗಂಟಲಿನಲ್ಲಿ ಕಿಚ್ ಕಿಚ್: ಶುಂಠಿ ಇದೆಯಲ್ಲ!
ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿ. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ನ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ. ತುಳಸಿ, ಶುಂಠಿ, ಕೊತ್ತಂಬರಿ ಬೀಜ ಇವು ಕಷಾಯಕ್ಕೆ ಖಾಯಂ ಪದಾರ್ಥಗಳು. ಅಡುಗೆಗೆ ಬಳಕೆಯಾಗುವುದಕ್ಕಿಂತ ಆರೋಗ್ಯ ವರ್ಧನೆಗೂ ಶುಂಠಿ ಹೆಚ್ಚು ಸಹಕಾರಿ ಎನ್ನಲಡ್ಡಿಯಿಲ್ಲ. ಶಾಲೆಯಲ್ಲಿ ಮಾತ್ರ ಮೇಷ್ಟ್ರು ಒಣ ಶುಂಠಿ ಕೊಡ್ಲಾ ಎಂದರೆ ನಡುಕ ಹುಟ್ಟಿಬಿಡುತ್ತಿತ್ತು.
ಸರ್ವಗುಣ ಸಂಪನ್ನ ಅರಿಶಿನ
ಅಡುಗೆಗೆ, ಸೌಂದರ್ಯವರ್ಧನೆಗೆ, ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ವಿಶೇಷತೆ ಅರಿಶಿನಕ್ಕೆ ಇದೆ. ಹರಿದ್ವರ್ಣವಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ ‘ಹರಿದ್ರಾ’ ಎನ್ನುತ್ತಾರೆ. ಜೀರ್ಣಶಕ್ತಿ ಹೆಚ್ಚಳಕ್ಕೆ, ಮಧುಮೇಹ ಹತೋಟಿಗೆ, ಅಡುಗೆ ಹಾಗೂ ನಿಮ್ಮ ತ್ವಚೆಯ ಸೌಂದರ್ಯ ವರ್ಧನೆಗೆ ಅರಿಶಿನ ಬೇಕೇ ಬೇಕು. ಎರಡು ಅಡಿ ಎತ್ತರದ ಅರಿಶಿನ ಗಿಡದ ಎಲೆಗಳು ಉದ್ದವಾಗಿ, ಅಗಲವಾಗಿರುತ್ತದೆ. ಹೂಗಳನ್ನು ಮಳೆಗಾಲದಲ್ಲಿ ನಿರೀಕ್ಷಿಸಬಹುದು.
ಗಣಪನಿಗೆ ಪ್ರಿಯವಾದ ಗರಿಕೆ ಸ್ವಾಹಾ
ಗರಿಕೆ ಆರೋಗ್ಯಕ್ಕೆ ಉಪಯೋಗ ಹೇಗೆ ಎಂಬುದನ್ನು ನೋಡೋಣ. ಮನುಷ್ಯ ಕಾಲಿರಿಸದಿದ್ದರೆ, ಎಲ್ಲ ಕಡೆಯಲ್ಲಿ ಸುಲಭವಾಗಿ ಬೆಳೆಯುವ ಗರಿಕೆ ಚಿರಪರಿಚಿತವಾದ ಹುಲ್ಲು ಜಾತಿಯ ಸಸ್ಯ.ಹೆಚ್ಚು ಆರೈಕೆ ಬೇಡದೆ ತನ್ನಷ್ಟಕ್ಕೆ ತಾನು ಬೆಳೆಯುವ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕ. ಗರಿಕೆಯನ್ನು ಸಂಸ್ಕೃತದಲ್ಲಿ ಅನಂತಾ, ಶತಪರ್ವಿಕಾ, ಸಹಸ್ರವೀರ್ಯಾ, ಶತವಲ್ಲಿ ಎನ್ನುತ್ತಾರೆ.
ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆ ಯಾಗುತ್ತದೆ.
Disclaimer: ಇಲ್ಲಿ ನೀಡಿರುವ ಮಾಹಿತಿ, ಲೇಖನ ಎಲ್ಲವೂ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ವೃತ್ತಿಪರ ವೈದ್ಯಕೀಯ ಸಲಹೆ ಇಲ್ಲದೇ ಪರ್ಯಾಯವಾಗಿ ಮನೆಮದ್ದು ಬಳಸುವುದು ಒಳ್ಳೆಯದಲ್ಲ. ರೋಗನಿರ್ಣಯ ಅಥವಾ ಚಿಕಿತ್ಸೆಗೆ ವೈದ್ಯಕೀಯ ನೆರವು ಪಡೆದುಕೊಳ್ಳಿ. ಆರೋಗ್ಯ ಸಿಬ್ಬಂದಿಯ ಸಲಹೆ ಮೇರೆಗೆ ಸರಿ ಪ್ರಮಾಣದಲ್ಲಿ ಔಷಧ ಸೇವಿಸಿ, ಆರೋಗ್ಯದಿಂದಿರಿ.
