ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ

ಕೊರೊನಾ ಸೋಂಕು ಹರಡದಂತೆ ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸುವ ಅಗತ್ಯವಿದೆ. ಆರ್ಥಿಕ ಪರಿಸ್ಥಿತಿಯಿಂದ ದೇಶದ ಜನರ ಪ್ರಾಣ ಮುಖ್ಯ ಎಂದು ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ ಲಾಕ್ಡೌನ್ ವಿಸ್ತರಣೆ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿಯನು ನೀಡಲಾಗಿದೆ.

ಮಾರ್ಚ್ 23ರಿಂದ ಏಪ್ರಿಲ್ 14ರ ತನಕ ಮೊದಲ ಅವಧಿಯಲ್ಲಿ 21 ದಿನಗಳ ಲಾಕ್ಡೌನ್ ಅವಧಿಯನ್ನು ದೇಶ ಎದುರಿಸಿದೆ. ಈಗ ಮೇ 3ರ ತನಕ 19 ದಿನಗಳ ಲಾಕ್ಡೌನ್ ವಿಸ್ತರಣೆಯಾಗಿದೆ.

ಏಪ್ರಿಲ್ 20ರ ತನಕ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ತೀವ್ರವಾಗಿ ಅವಲೋಕನಕ್ಕೆ ಕರೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಹೊಸ ಮಾರ್ಗಸೂಚಿಯ ಅನ್ವಯ ವಿನಾಯಿತಿ ನೀಡಲಾಗುತ್ತದೆ ಎಂದು ಮೋದಿ ಎಚ್ಚರಿಸಿದರು. ಮೋದಿ ಹೇಳಿದಂತೆ ಏಪ್ರಿಲ್ 15ರಂದು ಗೃಹ ಸಚಿವಾಲಯ ಮಾರ್ಗಸೂಚಿಯನ್ನು ನೀಡಿದೆ. ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ : ಮೇ.3ರ ವರೆಗೆ 2.0 ಮಾರ್ಗಸೂಚಿ ಬಿಡುಗಡೆ ಮಾಡಿದೆ:

Read more at: https://kannada.oneindia.com/news/karnataka/lockdown-2-ministry-of-home-affairs-guidelines-for-containment-of-covid19-189513.html

Leave a Reply

Your email address will not be published. Required fields are marked *