EPFO allows Change DoB on using Aadhaar- ಆಧಾರ್ ಬಳಸಿ ಜನ್ಮ ದಿನಾಂಕ ತಿದ್ದುಪಡಿ ಮಾಡಲು EPFO ಒಪ್ಪಿಗೆ

ಭವಿಷ್ಯ ನಿಧಿ ಚಂದಾದಾರರ ಖಾತೆಯಲ್ಲಿ ನಮೂದಿಸಿರುವ ಜನ್ಮ ದಿನಾಂಕದಲ್ಲಿ ಏನಾದರೂ ತಪ್ಪಿದ್ದು ಬದಲಾವಣೆ ಮಾಡಬೇಕಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಈಗ ಇದನ್ನು ಸರಿಪಡಿಸಲು ಆಧಾರ್ ಕಾರ್ಡ್ ಬಳಸಲು ಅನುಮತಿ ಸಿಕ್ಕಿದೆ. ಆಧಾರ್ ಕಾರ್ಡನ್ನು ಪುರಾವೆಯಾಗಿ ಸಲ್ಲಿಸಿ ಆನ್ ಲೈನ್ ನಲ್ಲಿ ಜನ್ಮ ದಿನಾಂಕ ಸರಿಪಡಿಸಿಕೊಳ್ಳಲು ಇಪಿಎಫ್ ಒ ಒಪ್ಪಿಗೆ ನೀಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಿಎಫ್ ಸಂಬಂಧಿಸಿದ ಆನ್ ಲೈನ್ ಸೇವೆಗಳು ಚಂದಾದಾರರಿಗೆ ಸೂಕ್ತವಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್ ಒ ಅನೇಕ ವಿಧಾನಗಳನ್ನು ಜಾರಿಗೆ ತಂದಿವೆ. ಇತ್ತೀಚೆಗೆ ಪ್ರಕಟಿಸಿರುವ ಪರಿಷ್ಕೃತ ನಿಯಮದ ಪ್ರಕಾರ, ಜನ್ಮ ದಿನಾಂಕದಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸ ಇದ್ದರೆ ಮಾತ್ರ, ಅಂಥಾ ಪ್ರಕರಣಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಪುರಾವೆಯಾಗಿ ಬಳಸಲು ಅನುಮತಿ ನೀಡಲಾಗಿದೆ.

Read more at: https://kannada.oneindia.com/news/business/covid19-epfo-allows-to-rectify-date-of-birth-with-aadhar-as-proof-188878.html

Leave a Reply

Your email address will not be published. Required fields are marked *