Fact Check: ಸಿಬಿಎಸ್ಇ ಕ್ಲಾಸ್ 10, 12 ರ ಪರೀಕ್ಷೆ ದಿನಾಂಕ ಘೋಷಣೆ?

ಸಿಬಿಎಸ್ಇ ಕ್ಲಾಸ್ 10 ಹಾಗೂ 12ರ ಪರೀಕ್ಷೆ ದಿನಾಂಕಗಳು ಘೋಷಣೆಯಾಗಿವೆ. ಏಪ್ರಿಲ್ 22ರಿಂದ ಪರೀಕ್ಷೆ ನಡೆಯಲಿದೆ ಎಂಬ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ ಎಂಬ ಸ್ಪಷ್ಟಣೆ ಸಿಕ್ಕಿದೆ.

ಏಪ್ರಿಲ್ 25ರಿಂದ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ ಎಂದು ಕೂಡಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಸಿಬಿಎಸ್ಇ ಈ ರೀತಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

ಈ ಬಗ್ಗೆ ಸ್ಪಷ್ಟಣೆ ಕೊಟ್ಟಿರುವ ಸಿಬಿಎಸ್ಇ, ಕೇಂದ್ರ ಸರ್ಕಾರ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಇಲಾಖೆ, ಗೃಹ ಸಚಿವಾಲಯ ನೀಡಿರುವ ಸೂಚನೆ(ಮಾರ್ಚ್ 18ರ ಆದೇಶ)ಯಂತೆ, ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Read more at: https://kannada.oneindia.com/news/india/fake-cbse-is-not-resuming-class-10-12-exams-from-april-22-188717.html

Leave a Reply

Your email address will not be published. Required fields are marked *