ಸರ್ವಧಾರಿ ಸಂವತ್ಸರದ ಯುಗಾದಿ ಹಬ್ಬದ ಶುಭಕಾಮನೆಗಳು

ಪ್ರೀತಿ ಪ್ರೇಮದ ಮೋಜಿನಾಟ, ಕೊಟ್ಟು ತಗೊ ರಂಗಿನಾಟ
ಎಲ್ಲ ಬಗೆಯ ನೋಟ ಧರಿಸಿ ಬಂದಿಹೆ ನಾ ಸರ್ವಧಾರಿ ನಾ

ಸಾವು ನೋವು, ರೋಗ ರುಜಿನ ಎಲ್ಲ ಬಗೆಯ ಬೇಗೆ ಕಳೆದು ನೋವ ಮರೆಸಿ,
ಹರುಷದೊನಲ ಹರಿಸಿ ನಗೆಯ ಧರಿಸಿ ಬಂದಿಹೆ ನಾ ಸರ್ವಧಾರಿ ನಾ

ದೇಶ ಭಾಷೆ ನೀರು ಮಣ್ಣು ಎಲ್ಲವನ್ನು ಮೆತ್ತಿಕೊಂಡು
ರಾಮ ರಹೀಮ ಜೋಸೆಫ ಎಲ್ಲರ ಮನವ ಬೆಸೆದು
ಏಕತೆಯ ಮಂತ್ರ ಸಾರೋ ದಿರಿಸು ನಾ ಸರ್ವಧಾರಿ ನಾ

ಶುಕಪಿಕಗಳ ಕಲರವವೇ ನಾ, ನದಿ ನೀರಿನ ನಿರ್ಮಲತೆಯೇ ನಾ
ಮಾಮರದ ಎಳೆ ಚಿಗುರು ನಾ

ಸಿಹಿತಿನಿಸಿನ ಹೂರಣವೇ ನಾ ಸರ್ವಧಾರಿ ನಾ

Leave a Reply

Your email address will not be published. Required fields are marked *