Bengaluru Tech Summit 2025: SafeCloak-smart Digital Locker| ಬೆಂಗಳೂರು ಟೆಕ್ ಶೃಂಗಸಭೆ 2025: ಸೇಫ್ ಕ್ಲಾಕ್ ಸ್ಮಾರ್ಟ್ ಡಿಜಿಟಲ್ ಕ್ಲಾಕ್ ಕೊಠಡಿ

ಸೇಫ್ ಕ್ಲಾಕ್: ನಿಮ್ಮ ವಸ್ತುಗಳಿಗೆ ಸ್ಮಾರ್ಟ್ ವೇ ಜವಾಬ್ದಾರರು

– ಮಹೇಶ್ ಮಲ್ನಾಡ್

“ಯಾತ್ರಿಗಳೇ ದಯವಿಟ್ಟು ಗಮನಿಸಿ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು..” ಎಂಬ ಘೋಷವಾಕ್ಯ ಯಾರಿಗೆ ತಾನೇ ಗೊತ್ತಿಲ್ಲ. ಪ್ರವಾಸಿಗರಿಗೂ ಸೇರಿದಂತೆ ಎಲ್ಲಾ ಸ್ತರದ ಜನರಿಗೆ ತಮ್ಮ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳುವ ಭಯ ಇದ್ದೇ ಇರುತ್ತದೆ. ಈ ಡಿಜಿಟಲ್ ಯುಗದಲ್ಲಿ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್ ಡಿಜಿಟಲ್ ಕ್ಲಾಕ್ ಕೊಠಡಿಯೊಂದನ್ನು ಸ್ಥಾಪಿಸಿ, ಯಶಸ್ವಿಯಾಗಿದ್ದಾರೆ ಕನ್ನಡಿಗ ಉದ್ಯಮಿಗಳಾದ ಸುಧೀಂದ್ರ, ಪ್ರದೀಪ್ ಹಾಗೂ ಮಂಜುನಾಥ್ ತಂಡದವರು.

ಈ ಬಾರಿಯ ಬೆಂಗಳೂರು ಟೆಕ್ ಶೃಂಗಸಭೆ 2025ರಲ್ಲೂ ತಂತ್ರಜ್ಞಾನ ಆಧಾರಿತ ಸುರಕ್ಷಿತ ಕ್ಲಾಕ್ ಸೌಲಭ್ಯವಾದ ಸೇಫ್ ಕ್ಲಾಕ್ ಜನಪ್ರಿಯವಾಗಿದೆ. ಕಾಲೇಜ್ ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡ ಕಂಪನಿಗಳ ಸಿಇಒಗಳ ತನಕ ಅನೇಕರಿಂದ ಬಳಸಲ್ಪಟ್ಟಿದೆ.

ನವೋದ್ಯಮವಾಗಿ ಆರಂಭವಾದ ಡಿಜಿಟಲ್ ಲಾಕರ್ ಕ್ಷೇತ್ರದಲ್ಲಿ ಈಗ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿ ಕ್ಲಾಕ್ ಟೆಕ್ ಸಲ್ಯೂಷನ್ಸ್ ಪ್ರೈ. ಲಿ ರೂಪುಗೊಂಡಿದೆ. ಕರ್ನಾಟಕ ಮಾತ್ರವಲ್ಲದೇ ದೇಶದ ಹಲವೆಡೆ ಸಾರ್ವಜನಿಕರು ಸುರಕ್ಷಿತವಾಗಿ ತಮ್ಮ ಲಗ್ಗೇಜ್, ಪಾರ್ಸಲ್ ಪಡೆಯಲು ಸೂಕ್ತ ವ್ಯವಸ್ಥೆಯಾಗಿ ಜನಪ್ರಿಯಗೊಳ್ಳುತ್ತಿದೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲದೇ ಅನೇಕ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ಶಾಪಿಂಗ್ ಮಾಲ್, ವಿಮಾನ ನಿಲ್ದಾಣವಲ್ಲದೇ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇದೀಗ ಪ್ರಮುಖ ದೇವಸ್ಥಾನಗಳ ಬಳಿಯೂ ಸೇಫ್ ಕ್ಲಾಕ್ ಸೌಲಭ್ಯವನ್ನು ಕಾಣಬಹುದಾಗಿದೆ. ಸುಮಾರು 45ಕ್ಕೂ ಅಧಿಕ ನಗರ, ಪಟ್ಟಣಗಳಲ್ಲಿ ಪ್ರಮುಖ ದೇವಸ್ಥಾನ, ಯಾತ್ರಾಸ್ಥಳಗಳಲ್ಲಿ ಸೇಫ್ ಕ್ಲಾಕ್ ಸ್ಥಾಪನೆಗೊಂಡು ಬಳಕೆಯಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದ ಸಾಮಾಗ್ರಿ ಸಂಗ್ರಹಣೆ ಹಾಗೂ ಸುರಕ್ಷತೆಯನ್ನು ಸೇಫ್ ಕ್ಲಾಕ್ ಸಾಧ್ಯವಾಗಿಸಿದೆ ಎಂದು ಸಹ ಸ್ಥಾಪಕರಾದ ಮಂಜುನಾಥ್ ಹೇಳಿದ್ದಾರೆ.

ಗೊತ್ತು ಗುರಿ ಇಲ್ಲದ ಊರಿನಲ್ಲಿ ನಿರ್ದಿಷ್ಟ ಕೆಲಸದ ಮೇಲೆ ಹೋಗುವಾಗ ಕೈಲಿರುವ ಮೊಬೈಲ್, ಜೇಬಲ್ಲಿರುವ ದುಡ್ಡು, ಪ್ರಮುಖ ಫೈಲ್ಸ್ ಅಲ್ಲದೇ ಆ ಊರಿನ ಸ್ಪೆಷಲ್ ಎಂದು ಶಾಪಿಂಗ್ ಮಾಡಿದ ವಸ್ತು ಹೀಗೆ ಏನೇ ಇರಲಿ ಎಲ್ಲವನ್ನು ಡಿಜಿಟಲ್ ಲಾಕರ್ ನಲ್ಲಿಟ್ಟು ನಿಶ್ಚಿಂತರಾಗಿ ಊರು ಸುತ್ತಾಡಿಕೊಂಡು ಬೇಕಾದಾಗ ಲಾಕರ್ ತೆಗೆದು ವಸ್ತುಗಳನ್ನು ಹಿಂಪಡೆಯಬಹುದು.

Smart Digital Locker
ನಿಮ್ಮೂರಲ್ಲಿ ಸೇಫ್ ಕ್ಲಾಕ್ ವ್ಯವಸ್ಥೆ ಇರುವ ಸ್ಥಳ ಗುರುತಿಸಿಕೊಂಡು, ಅದರ ಬಳಿ ಕಾಣುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಖಾಲಿ ಇರುವ ಲಾಕರ್ ಸಂಖ್ಯೆ ಕಾಣುತ್ತದೆ, ನಂತರ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ದಾಖಲಿಸಬೇಕು. ಅಗತ್ಯವಿದ್ದರೆ ನಿಮ್ಮ ಹೆಸರು, ಇಮೇಲ್ ಇನ್ನಿತರ ವಿವರ ನೀಡಬೇಕಾಗುತ್ತದೆ.

ಬಾಕ್ಸ್ ಸಂಖ್ಯೆ ಜೊತೆಗೆ ಗಾತ್ರ(ಸಣ್ಣ, ಮಧ್ಯಮ, ದೊಡ್ಡ ಗಾತ್ರ)ವನ್ನು ಆಯ್ಕೆ ಮಾಡಿಕೊಳ್ಳಬೇಕು. ಲಾಕರ್ ಬಳಕೆ ಅವಧಿಯನ್ನು ಸೂಚಿಸಬೇಕು. ನಂತರ ಪೇಮೆಂಟ್ ಮಾಡಿದಾಗ ಲಾಕರ್ ತೆರೆಯುತ್ತದೆ.

ವಸ್ತುಗಳನ್ನು ಹಿಂಪಡೆಯುವಾಗ ಇದೇ ವಿಧಾನ ಅನುಸರಿಸಬಹುದು. ನಿಮ್ಮ ಬಾಕ್ಸ್ ಇಂದ ಒಮ್ಮೆಗೆ ಎಲ್ಲಾ ವಸ್ತುಗಳನ್ನು ತೆಗೆದುಕೊಳ್ಳಬಹುದು ಅಥವಾ ಅವಧಿಗೂ ಮುನ್ನವೆ ಪಿಕಪ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅವಧಿ ಮೀರಿದ್ದರೆ ಅಥವಾ ಹೆಚ್ಚಿನ ಅವಧಿ ಅಗತ್ಯ ಬಿದ್ದರೆ ಮತ್ತೊಮ್ಮೆ ಪೇಮೆಂಟ್ ಮಾಡಿ ಲಾಕರ್ ಬಳಕೆ ಅವಧಿಯನ್ನು ವಿಸ್ತರಿಸಲೂ ಬಹುದು.

ಕೈಗೆಟುಕುವ ದರದಲ್ಲಿ ಲಾಕರ್

ಬಾಕ್ಸ್ ಗಾತ್ರ ಹಾಗೂ ಬಳಕೆ ಅವಧಿಗೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದೆ. ಸಣ್ಣ ಗಾತ್ರದ ಬಾಕ್ಸ್ 3 ಗಂಟೆ ಅವಧಿಗೆ 30 ರು ಹಾಗೂ ದಿನವೊಂದಕ್ಕೆ 120 ರು ಎಂದು ನಿಗದಿ ಪಡಿಸಲಾಗಿಪೆ. ಇದೇ ರೀತಿ ಮಧ್ಯಮ ಗಾತ್ರದ ಬಾಕ್ಸ್ ಬಳಕೆಗೆ 3 ಗಂಟೆಗೆ 40ರು ಹಾಗೂ ದಿನಕ್ಕೆ 160 ರು ಅಲ್ಲದೇ ದೊಡ್ಡ ಗಾತ್ರದ ಬಾಕ್ಸ್ ಬಳಕೆಗೆ ದಿನವೊಂದಕ್ಕೆ 220ರು ನೀಡಬೇಕಾಗುತ್ತದೆ

“ಸ್ಮಾರ್ಟ್ ಲಾಕ್, ಡಿಜಿಟಲ್ ಲಾಕ್ ಹೇಗೆ ಬಳಸುವುದು ಎಂಬ ಗೊಂದಲ ಭಯ ಇಲ್ಲದೆ ಎಲ್ಲಾ ವರ್ಗದ ಸಾರ್ವಜನಿಕರು ಸುಲಭವಾಗಿ ಯಾರ ನೆರವಿಲ್ಲದೆ ಕೈಗೆಟುಕುವ ದರದಲ್ಲಿ ಬಳಸುವ ವಿಧಾನ ರೂಪಿಸುವುದೇ ನಮ್ಮ ಉದ್ದೇಶವಾಗಿತ್ತು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಗೊತ್ತಾಗುತ್ತಿಲ್ಲ, ಲಾಕರ್ ಓಪನ್ ಆಗ್ತಿಲ್ಲ, ಲಾಕರ್ ಬಳಕೆ, ಅವಧಿ ಹೀಗೆ ಏನೇ ಸಣ್ಣ ಪುಟ್ಟ ಸಂದೇಹವಿದ್ದರೂ ನಿಮ್ಮ ಗೊಂದಲ ಪರಿಹರಿಸಲು 24 ಗಂಟೆಗಳ ಅವಧಿಯೂ ನಮ್ಮ ಕಸ್ಟಮರ್ ಕೇರ್ ವ್ಯವಸ್ಥೆ ಜಾರಿಯಲ್ಲಿರುತ್ತದೆ, ಎಟಿಎಂ ಬಳಸುವಂತೆ ಸುಲಭವಾಗಿ ಬಾಡಿಗೆ ನೀಡಿ ಲಾಕರ್ ಬಳಸುವ ಸರಳ ವಿಧಾನ ನೀಡುವುದು ನಮ್ಮ ಉದ್ದೇಶವಾಗಿದೆ” ಎಂದು ಸಂಸ್ಥಾಪಕರಲ್ಲಿ ಒಬ್ಬರಾದ ಸುಧೀಂದ್ರ ಹೇಳಿದರು.

ಬೆಂಗಳೂರು, ಚೆನ್ನೈ, ಹೈದರಾಬಾದ್ ಪ್ರಮುಖ ನಗರಗಳ ರೈಲ್ವೆ ನಿಲ್ದಾಣವಲ್ಲದೆ ಜನನಿಬಿಡ ಪ್ರದೇಶಗಳಲ್ಲಿ ಲಾಕರ್ ಬಳಕೆ ಚಾಲ್ತಿಯಲ್ಲಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಮಂತ್ರಾಲಯದ ರಾಯರ ಮಠ, ಬೆಂಗಳೂರಿನ ವಿವಿಧ ಶಾಪಿಂಗ್ ಮಾಲ್ ಹೇಗೆ ಹಲವೆಡೆ ಡಿಜಿಟಲ್ ಲಾಕರ್ ಜನಪ್ರಿಯಗೊಂಡಿದೆ.

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ಟರ್ಮಿನಲ್, ಮೆಟ್ರೋ, ರೆಸಾರ್ಟ್, ಥೀಮ್ ಪಾರ್ಕ್, ಸಾರ್ವಜನಿಕ ಈಜುಕೊಳ, ಫಿಟ್ನೆಸ್ ಕೇಂದ್ರ, ಆಸ್ಪತ್ರೆ, ಯಾತ್ರಾ ಸ್ಥಳ, ಪ್ರವಾಸಿ ಕ್ಷೇತ್ರ ಅಲ್ಲದೇ ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲೂ ಸುಲಭವಾಗಿ ಸ್ಥಾಪನೆಗೊಂಡು ಸೇಫ್ ಕ್ಲಾಕ್ ಬಳಕೆಯಲ್ಲಿದೆ.

ಕೋರಿಕೆ ಮೇರೆಗೆ ನಿಮ್ಮ ಬಳಿಗೆ ಡಿಜಿಟಲ್ ಲಾಕರ್

ಸ್ಮಾರ್ಟ್ ಲಾಕರ್ ಗಳನ್ನು ವಸ್ತು ಸಂಗ್ರಹಣೆಗಾಗಿ ಮಾತ್ರವಲ್ಲದೇ ಕಾಗದ ರಹಿತ, ಸಂಪರ್ಕ ರಹಿತ ಪಾರ್ಸೆಲ್ ಡೆಲಿವರಿ ವ್ಯವಸ್ಥೆಯಾಗಿ ಕೂಡಾ ಬಳಸಬಹುದಾಗಿದೆ.

ಡಿಜಿಟಲ್ ಲಾಕರ್ ಬಾಡಿಗೆಗೂ ಲಭ್ಯ

ನೀವು ಕೂಡಾ ಪಾರ್ಟ್ನರ್ ಆಗಿ ಸೇಫ್ ಲಾಕರ್ ಅನ್ನು ನಿಮ್ಮ ಸ್ಥಳಕ್ಕೆ ತರೆಸಿಕೊಳ್ಳಬಹುದು. ಉದಾಹರಣೆಗೆ ನೀವು ಉದ್ಯಮಿಗಳ ಕೂಟ, ಸ್ನೇಹ ಸಮ್ಮಿಲನ, ಮದುವೆ, ಸಮುದಾಯ ಸಭೆ ಹೀಗೆ ಯಾವುದೇ ಸಭೆ, ಸಮಾರಂಭ ಮಾಡುವಾಗ ಎಲ್ಲರಿಗೂ ಪ್ರತ್ಯೇಕ ವಸತಿ, ಸಾಮಾಗ್ರಿ ಸಂಗ್ರಹ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗಬಹುದು. ಇಂಥ ಸಂದರ್ಭಗಳಲ್ಲಿ ಸೇಫ್ ಕ್ಲಾಕ್ ಬಳಸಬಹುದು. ನಿಮ್ಮ ಅಗತ್ಯ, ಖರ್ಚು ವೆಚ್ಚಕ್ಕೆ ತಕ್ಕಂತೆ ಡಿಜಿಟಲ್ ಲಾಕರ್ ವುಳ್ಳ ಬಾಕ್ಸ್ ಗಳನ್ನು ಸಂಸ್ಥೆ ಒದಗಿಸಲಿದೆ. ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು ಅಥವಾ ಸೇಫ್ ಕ್ಲಾಕ್ ಸ್ಥಳಕ್ಕೆ ಆಗಮಿಸಿ ಬುಕ್ ಮಾಡಬಹುದು.

ಸಾಮಾಗ್ರಿ ಹಿಂಪಡೆಯಲು ಸಾಧ್ಯವಾಗುತ್ತಿಲ್ಲವೇ?

ನಿಗದಿತ ಸಮಯಕ್ಕೆ ಲಾಕರ್ ಸೌಲಭ್ಯ ಸ್ಥಳಕ್ಕೆ ಹೋಗಲು ಆಗುತ್ತಿಲ್ಲ, ನಿಮ್ಮ ವಸ್ತು ಹಿಂಪಡೆಯಲಾಗುತ್ತಿಲ್ಲವೆಂದರೆ ಚಿಂತಿಸಬೇಡಿ, ಗ್ರಾಹಕರ ನೆರವಿಗಾಗಿ ನೀಡಿರುವ ಸಂಖ್ಯೆ(93553 22282)ಗೆ ಕರೆ ಮಾಡಿ, ನೀವು ಕೊಟ್ಟ ವಿಳಾಸಕ್ಕೆ ನಿಮ್ಮ ವಸ್ತುಗಳನ್ನು ತಲುಪಿಸಲಾಗುತ್ತದೆ.

About us

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *